ಕಪಿಲ್ ಶರ್ಮಾ ಶೋ ದಲ್ಲಿ ಇಲ್ಲಿಯವರೆಗೆ ಅಮೀರ್ ಖಾನ್ ಭಾಗಿಯಾಗದಿರುವುದಕ್ಕೆ ಇದೇ ಕಾರಣ !

ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಅಮೀರ್ ಖಾನ್ ಮತ್ತು ಕಪಿಲ್ ಶರ್ಮಾ ಎದುರು ಬದುರಾಗಿದ್ದಾರೆ. ಈ ವೇಳೆ ಅಮೀರ್ ಖಾನ್ ಇಲ್ಲಿಯವರೆಗೆ ಕಪಿಲ್ ಶರ್ಮಾ ಶೋ ನಲ್ಲಿ ಭಾಗಿಯಾಗದಿರುವ ಬಗ್ಗೆ ಮಾಹಿತಿ ಹೊರ ಬಿದ್ದಿದೆ. 

Written by - Ranjitha R K | Last Updated : May 31, 2023, 09:42 AM IST
  • ಕಪಿಲ್‌ ಶರ್ಮಾ ಬಗ್ಗೆ ಅಮೀರ್ ಖಾನ್ ದೂರು
  • ನಾನು ಕಪಿಲ್ ಅಭಿಮಾನಿ ಏನಾದ್ ಅಮೀರ್
  • ಅಮೀರ್ ಖಾನ್ ದೂರಿಗೆ ಕಪಿಲ್ ಉತ್ತರ
ಕಪಿಲ್ ಶರ್ಮಾ ಶೋ ದಲ್ಲಿ ಇಲ್ಲಿಯವರೆಗೆ ಅಮೀರ್ ಖಾನ್ ಭಾಗಿಯಾಗದಿರುವುದಕ್ಕೆ ಇದೇ ಕಾರಣ !  title=

ನವದೆಹಲಿ : ಎಲ್ಲಾ ಬಾಲಿವುಡ್ ತಾರೆಯರು ಕಪಿಲ್ ಶರ್ಮಾ ಅವರ 'ದಿ ಕಪಿಲ್ ಶರ್ಮಾ' ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ತಮ್ಮ ಹೊಸ ಸಿನಿಮಾ ಬಿಡುಗಡೆಯಾಗುತ್ತಿದ್ದಂತೆಯೇ ಕಪಿಲ್ ಶರ್ಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಇಲ್ಲಿಯವರೆಗೂ ಅಮೀರ್ ಖಾನ್ ಮಾತ್ರ  ಕಪಿಲ್ ಶರ್ಮಾ ಶೋ ದಲ್ಲಿ ಭಾಗಿಯಾಗಿಲ್ಲ. ವರ್ಷಗಳ ನಂತರ, ಕಪಿಲ್ ಮತ್ತು ಅಮೀರ್ ಖಾನ್ ಮುಖಾಮುಖಿಯಾದಾಗ, ಇದರ ಹಿಂದಿನ ಕಾರಣ ಹಿರ ಬಿದ್ದಿದೆ. ಅಮೀರ್ ಖಾನ್ ಅವರನ್ನು  ಕಪಿಲ್  ತಮ್ಮ ಶೋಗೆ ಆಹ್ವಾನಿಸಿಯೇ ಇಲ್ಲ ಎನ್ನುವ ಮಾತು ಕೇಳಿ ಬರುತ್ತಿತ್ತು. ಇತ್ತೀಚಿಗೆ ಇಬ್ಬರೂ ನಾಯಕರು ಎದುರು ಬದುರಾದಾಗ ತಮ್ಮನ್ನು ಇಲ್ಲಿಯವರೆಗೆ ಯಾಕೆ ಶೋಗೆ ಕರೆದಿಲ್ಲ ಎನ್ನುವ ಪ್ರಶ್ನೆಯನ್ನು ಸ್ವತಃ ಅಮಿತ್ ಖಾನ್ ಕೇಳಿದ್ದಾರೆ.  ಅಮೀರ್ ಖಾನ್ ಪ್ರಶ್ನೆಗೆ ಕಪಿಲ್ ಉತ್ತರವನ್ನು ಕೂಡಾ ನೀಡಿದ್ದಾರೆ. 

ಕಪಿಲ್‌  ಶರ್ಮಾ ಬಗ್ಗೆ ಅಮೀರ್ ಖಾನ್ ದೂರು : 
ಅಮೀರ್ ಖಾನ್ ಇತ್ತೀಚೆಗೆ ತಮ್ಮ ಸ್ನೇಹಿತ ಪಂಜಾಬಿ ನಟ ಗಿಪ್ಪಿ ಗ್ರೆವಾಲ್ ಅವರ ಕ್ಯಾರಿ ಆನ್ ಜಟ್ಟಾ 3 ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಆ ಸಮಾರಂಭದಲ್ಲಿ ಕಾಮಿಡಿ ಕಿಂಗ್ ಕಪಿಲ್ ಶರ್ಮಾ ಕೂಡಾ ಇದ್ದರು . ಹೀಗಾಗಿ ಇಬ್ಬರೂ ಈ ಕಾರ್ಯಕ್ರಮದಲ್ಲಿ ಎದುರು ಬದುರಾಗಿದ್ದಾರೆ. ಮಾತ್ರವಲ್ಲ ಅಮೀರ್ ಮತ್ತು ಕಪಿಲ್ ಪರಸ್ಪರ ತುಂಬಾ ಹೊತ್ತಿನವರೆಗೆ ಮಾತನಾಡಿದ್ದಾರೆ. ಈ ಮಾತುಕತೆ ವೇಳೆ ಅಮೀರ್ ಖಾನ್ ಕಪಿಲ್ ಶರ್ಮಾ ತಮ್ಮನ್ನು ಶೋಗೆ ಆಹ್ವಾನಿಸುವುದೇ ಇಲ್ಲ ಎನ್ನುವ ಬಗ್ಗೆ ದೂರಿದ್ದಾರೆ . 

ಇದನ್ನೂ ಓದಿ : ನಟಿ ಸೌಂದರ್ಯ ಸಣ್ಣ ವಯಸ್ಸಿನಲ್ಲೇ ಮಾಡಿದ್ದ ಮಹಾತ್ಕಾರ್ಯದ ಬಗ್ಗೆ ತಿಳಿದ್ರೆ ಶಾಕ್ ಆಗ್ತೀರಾ..!

ನಾನು ಕಪಿಲ್ ಅಭಿಮಾನಿ ಏನಾದ್ ಅಮೀರ್ : 
'ನಾನು ಕಪಿಲ್ ಅವರ ಅಭಿಮಾನಿ. ಆದರೆ ಅವರ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಲೇ ಇಲ್ಲ. ನನ್ನ ವಾರಾಂತ್ಯದ ಸಂಜೆಯನ್ನು ಕಪಿಲ್  ವರ್ಣರಂಜಿತವಾಗಿಸಿದ್ದಾರೆ. ಆದರೆ ಇದುವರೆಗೆ ನನ್ನನ್ನು ಅವರ ಕಾರ್ಯಕ್ರಮಕ್ಕೆ ಮಾತ್ರ ಆಹ್ವಾನಿಸಲಿಲ್ಲ ಎಂದು ಬೆಅಸ್ರ ವ್ಯಕ್ತಪಡಿಸಿದ್ದಾರೆ ಅಮೀರ್ ಖಾನ್. ಕಪಿಲ್ ಕಾರ್ಯಕ್ರಮ ನೋಡಿ ನಾನು ಹೊಟ್ಟೆ ತುಂಬಾ ನಕ್ಕಿದ್ದೇನೆ. ಬಹಳ ಮನ್ರಂಜನೆಯಾಗಿದೆ.  ತಮ್ಮ ಕಾರ್ಯಕ್ರಮದ ಮೂಲಕ ಜನರನ್ನು ನಕ್ಕು ನಗಿಸುವುದಕ್ಕಾಗಿ ಕಪಿಲ್ ಗೆ ಕೆಲ ದಿನಗಳ ಹಿಂದಷ್ಟೇ ಫೋನ್ ಮಾಡಿ ಥ್ಯಾಂಕ್ಸ್ ಕೂಡಾ ಹೇಳಿದ್ದೇನೆ ಎಂದಿದ್ದಾರೆ ಅಮೀರ್ ಖಾನ್.  ಕಪಿಲ್ ಅವರ ಅಪಾರ ಅಭಿಮಾನಿಗಳಲ್ಲಿ ನಾನು ಕೂಡಾ ಒಬ್ಬ. ಆದರೆ ಇದುವರೆಗೆ ನನಗೆ ಅವರ ಕಾರ್ಯಕ್ರಮಕ್ಕೆ ಆಹ್ವಾನ ಇಲ್ಲ ಎನ್ನುವುದು ಮಾತ್ರ ಬೇಸರದ ಸಂಗತಿ ಎಂದಿದ್ದಾರೆ. 

ಅಮೀರ್ ಖಾನ್ ದೂರಿಗೆ ಕಪಿಲ್ ಉತ್ತರ : 
'ನೀವು ನಮ್ಮ ಕಾರ್ಯಕ್ರಮಕ್ಕೆ ಬರುವುದೆಂದರೆ ನಾವು ನಿಜಕ್ಕೂ ಅದೃಷ್ಟಶಾಲಿಗಳು. ನಾವು ಇಲ್ಲಿಯವರೆಗೆ ಸಭೆ ಸಮಾರಂಭ ಗಳಲ್ಲಿಯೇ   ಪರಸ್ಪರ ಭೇಟಿಯಾಗಿದ್ದೇವೆ. ಸುಮಾರು 3 ವರ್ಷಗಳ ನಂತರ ಈ  ಸಮಾರಂಭದ ಮೂಲಕ ಭೇಟಿಯಾಗುತ್ತಿದ್ದೇವೆ. ಇನ್ನು ನಮ್ಮ ಶೋಗೆ ನಾವು ನಿಮ್ಮನ್ನು ಆಹ್ವಾನಿಸಿದ್ದೆವು,  ಆದರೆ ಮತ್ತೆ ಬಂದು ಮಾತನಾಡುವುದಾಗಿ ನೀವೇ ಹೇಳಿದ್ದಿರಿ ಎಂದು ಕಪಿಲ್ ಅಮೀರ್ ಖಾನ್ ಗೆ ಉತ್ತರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಮೀರ್ ಖಾನ್- 'ನೀವು ಚಿತ್ರದ ಪ್ರಚಾರಕ್ಕೆ ಕರೆದಿದ್ದಿರಿ. ಆದರೆ ಚಿತ್ರಡ ಪ್ರಚಾರಕ್ಕಾಗಿ ನಾವು ಬರುವುದಿಲ್ಲ. ನಂಗೆ ಮನರಂಜನೆ ಬೇಕು ಅಷ್ಟೇ. ಮನರಂಜನೆಗಾಗಿ ನಾನು ನಿಮ್ಮ ಕಾರ್ಯಕ್ರಮಕ್ಕೆ ಬರಬೇಕು ಎಂದಿದ್ದಾರೆ. 

ಇದನ್ನೂ ಓದಿ : ಬಂಗಾರದಿಂದ ಬಣ್ಣಾನ ತಂದ ..ಸಾರಂಗದಿಂದ ನಯನಾನ ತಂದ ಕೇಜ್ರಿಸ್ಟಾರ್ : ಈಗ ಯಾಕೆ ಈ ಸಾಂಗ್ ಅಂತೀರಾ...

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News