UI Cinema: ರಿಯಲ್ ಸ್ಟಾರ್ ಉಪ್ಪಿಯ UI ಸಿನಿಮಾ ಬಿಗ್ ಅಪ್ಡೇಟ್ ನಿಮಗಾಗಿ....!

UI Cinema Big Update : ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ UI ಸಿನಿಮಾದ ಚಿತ್ರೀಕರಣ ನಡೀತಾ ಇದೆ. ಈ ಚಿತ್ರವನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಮಾಡೋ ಚಿಂತನೆಯಲ್ಲಿ ಚಿತ್ರತಂಡವಿದೆ.

Written by - YASHODHA POOJARI | Last Updated : Jun 1, 2023, 10:27 AM IST
  • ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ UI ಸಿನಿಮಾ
  • ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್
  • UI ಸಿನಿಮಾಗೆ ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ
UI Cinema: ರಿಯಲ್ ಸ್ಟಾರ್ ಉಪ್ಪಿಯ UI ಸಿನಿಮಾ ಬಿಗ್ ಅಪ್ಡೇಟ್ ನಿಮಗಾಗಿ....! title=

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ UI ಸಿನಿಮಾದ ಚಿತ್ರೀಕರಣ ನಡೀತಾ ಇದೆ. ಈ ಚಿತ್ರವನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಮಾಡೋ ಚಿಂತನೆಯಲ್ಲಿ ಚಿತ್ರತಂಡವಿದೆ.

ಉಪ್ಪಿಯ UI ಸಿನಿಮಾ ಹಲವು ಪ್ರಥಮ ಮತ್ತು ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ಸಿನಿಮಾದ ಮುಹೂರ್ತ ಮಾತ್ರ ಜಾತ್ರೆ ಅನ್ನೋ ಲೆವೆಲ್ಲಿಗೆ ಆಗಿತ್ತು. ಅದಾದ ಬಳಿಕ ರಿಲೀಸ್ ಆಗಿರೋ ಮೇಕಿಂಗ್ ಕೂಡ ದೊಡ್ಡಮಟ್ಟದಲ್ಲೇ ಸುದ್ದಿಯಾಗಿದೆ.ಈಗ ಸಿಕ್ಕಿರೋ ಮಾಹಿತಿ ಪ್ರಕಾರ  UI ಸಿನಿಮಾಗೆ ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನವಿರೋದು ಗೊತ್ತಾಗಿದೆ.

ಇದನ್ನೂ ಓದಿ: Sarath Babu Movie: ʼಅಮೃತವರ್ಷಿಣಿʼ ಖ್ಯಾತಿಯ ಶರತ್‌ ಬಾಬು ಹಿಟ್‌ ಸಿನಿಮಾಗಳ ಲಿಸ್ಟ್‌..! ಇಲ್ಲಿದೆ ನೋಡಿ..

ಇದು ಸಿನಿಮಾಗೆ ದೊಡ್ಡ ಮೈಲೇಜ್ ಸಿಗೋ ಹಾಗೇ ಮಾಡಿದೆ.ಉಪ್ಪಿಯ ಕಲ್ಪನೆಯ ಈ ಚಿತ್ರದ ಕೆಲಸ ಭರ್ಜರಿಯಾಗಿಯೇ ನಡೆಯುತ್ತಿದೆ. ಉಪ್ಪಿಯ ನಿರ್ದೇಶನದ ಅಂದ್ಮೇಲೆ ಅಲ್ಲೊಂದು ವಿಶೇಷತೆ ಇದ್ದೇ ಇರುತ್ತದೆ. ಅದೇ ರೀತಿ UI ಚಿತ್ರವೂ ಹತ್ತು-ಹಲವು ವಿಶೇಷತೆಗಳನ್ನ ಹೊಂದಿದೆ. ಚಿತ್ರದ ಪ್ರತಿ ದೃಶ್ಯವನ್ನ ಉಪ್ಪಿ ಪಕ್ಕಾ ಪ್ಲಾನ್ ಮಾಡಿದ್ದಾರೆ. ತಮ್ಮ ಕಲ್ಪನೆಯಲ್ಲಿ ಇಡೀ ಚಿತ್ರವನ್ನ ತೆಗೆಯೋಕೆ ಮುಂದಾಗಿದ್ದಾರೆ.

ಹಾಗೇನೆ ಉಪ್ಪಿ ಈ ದೃಶ್ಯ ಹೀಗೆ ಬರಬೇಕು ಅಂತಲೇ ಅಂದುಕೊಂಡು ಚಿತ್ರೀಕರಣ ಮಾಡಲಾಗುಡೆ.ಇನ್ನೂ ಟೈಟಲ್ ಬಗ್ಗೆ ಮಾತನಾಡೋದಾದ್ರೆ ಇದೇನಪ್ಪಾ ಅಂತ ಫ್ಯಾನ್ಸ್ ಮೊದಲೇ ಕೇಳಿದ್ರು.ಅಷ್ಟೂ ವಿಭಿನ್ನವಾಗಿದೆ.ಉಪ್ಪಿಯ UI ಚಿತ್ರವನ್ನ ದೊಡ್ಡಮಟ್ಟದಲ್ಲಿಯೇ ರಿಲೀಸ್ ಮಾಡಲಾಗುತ್ತಿದೆ.

ಇದನ್ನೂ ಓದಿ: Ravichandra Birthday : 62ನೇ ವರ್ಷದ ರವಿಮಾವನನ್ನು ಮೂವತ್ತರ ʼರಣಧೀರʼ ಬೇಕೆನುತ್ತಿದ್ದಾರೆ ಫ್ಯಾನ್ಸ್ !

ಎಲ್ಲ ಭಾಷೆಯಲ್ಲೂ ಇದನ್ನ ರಿಲೀಸ್ ಮಾಡೋಕೆ ನಿರ್ಮಾಪಕರು ರೆಡಿ ಆಗಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಅಂದ್ಮೇಲೆ ಸಾಕಷ್ಟು ನಿರೀಕ್ಷೆ ತಾನಾಗಿಯೇ ಹುಟ್ಟಿಕೊಂಡಿರುತ್ತದೆ. ಇನ್ನು ಉಪ್ಪಿಯ ನಿರ್ದೇಶನದ ಸಿನಿಮಾ ಅಂದ್ರೇ ಹೇಳಬೇಕೇ? ಅದಕ್ಕೇನೆ ಉಪ್ಪಿ ನಿರ್ದೇಶನದ UI ಸಿನಿಮಾ ಅತಿ ಹೆಚ್ಚು ಗಮನ ಸೆಳೆಯುತ್ತಿದೆ. ಉಪ್ಪಿ ಅಂದೇ ಹೇಳಿದ್ರು UI ಸಿನಿಮಾದಲ್ಲಿ ನೀವು ಬೇರೇ ಲೋಕವನ್ನೇ ನೋಡುತ್ತೀರಿ ಅಂತ.ಅಂತೆಯೇ ಫ್ಯಾನ್ಸ್ ಕೂಡ ಬಿಗ್ ಸ್ಕ್ರೀನ್ ಮೇಲೆ ಸಿನಿಮಾ ನೋಡಲು ತುಂಬಾ ಕುತೂಹಲದಿಂದಲೇ ಕಾಯಿತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News