Bigg Boss OTT 2 teaser: ಈ ದಿನದಿಂದ ಬಿಗ್ ಬಾಸ್ OTT 2 ಆರಂಭ.. ಈ ಬಾರಿ ಬದಲಾದ್ರು ಹೋಸ್ಟ್‌.!

Bigg Boss OTT 2 teaser: ಕಳೆದ ಹದಿಮೂರು ಸೀಸನ್‌ಗಳಿಂದ ಹಿಂದಿಯಲ್ಲಿ ಬಿಗ್ ಬಾಸ್ ಅನ್ನು ಹೋಸ್ಟ್ ಮಾಡುತ್ತಿದ್ದ ಸಲ್ಮಾನ್ ಖಾನ್ ಈಗ ಬಿಗ್ ಬಾಸ್ OTT 2 ಅನ್ನು ಹೋಸ್ಟ್ ಮಾಡಲಿದ್ದಾರೆ. ಈ ಕಾರ್ಯಕ್ರಮವು JioCinema ಮತ್ತು Voot Select ನಲ್ಲಿ ಸ್ಟ್ರೀಮ್ ಆಗಲಿದೆ.  

Written by - Chetana Devarmani | Last Updated : Jun 7, 2023, 05:51 PM IST
  • ಬಿಗ್ ಬಾಸ್ ಒಟಿಟಿಯ ಎರಡನೇ ಸೀಸನ್‌
  • ಈ ದಿನದಿಂದ ಬಿಗ್ ಬಾಸ್ OTT 2 ಆರಂಭ
  • ಈ ಬಾರಿ ಬದಲಾದ್ರು ಹೋಸ್ಟ್‌.!
Bigg Boss OTT 2 teaser: ಈ ದಿನದಿಂದ ಬಿಗ್ ಬಾಸ್ OTT 2 ಆರಂಭ.. ಈ ಬಾರಿ ಬದಲಾದ್ರು ಹೋಸ್ಟ್‌.!  title=
Bigg Boss OTT

Bigg Boss OTT Season 2 : ಬಿಗ್ ಬಾಸ್ OTT ಹೊಸ ಸೀಸನ್ ಶುರುವಾಗಲಿದೆ. ಕಾರ್ಯಕ್ರಮದ ಎರಡನೇ ಸೀಸನ್‌ನ ಟೀಸರ್ ಮಂಗಳವಾರ ಬಿಡುಗಡೆಯಾಗಿದೆ. ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಬಿಗ್ ಬಾಸ್ ಒಟಿಟಿಯ ಮೊದಲ ಸೀಸನ್ ಅನ್ನು ಕರಣ್ ಜೋಹರ್ ನಡೆಸಿಕೊಟ್ಟರು ಮತ್ತು ದಿವ್ಯಾ ಅಗರ್ವಾಲ್ ವಿನ್ನರ್‌ ಆದರು.

ಟೀಸರ್‌ನಲ್ಲಿ ಸಲ್ಮಾನ್ ತಮ್ಮ ವಿಶಿಷ್ಟ ಶೈಲಿಯಲ್ಲಿ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿ ಬಿಗ್‌ ಬಾಸ್‌ ಎಷ್ಟು ಕಠಿಣವಾಗಿರಲಿದೆ ಎಂಬುದನ್ನು ಸಲ್ಮಾನ್‌ ಟೀಸರ್‌ನಲ್ಲೇ ಹೇಳಿದ್ದಾರೆ. ಶೋನಲ್ಲಿ ಪ್ರೇಕ್ಷಕರ ಭಾಗವಹಿಸುವಿಕೆಯ ಬಗ್ಗೆಯೂ ಅವರು ಸುಳಿವು ನೀಡಿದ್ದಾರೆ. ಬಿಳಿ ಟಿ-ಶರ್ಟ್ ಮತ್ತು ಬ್ಲೇಜರ್ ಧರಿಸಿರುವ ನಟ ಸಲ್ಮಾನ್‌ ಇತರ ನೃತ್ಯಗಾರರೊಂದಿಗೆ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ತಿರುಪತಿ ದೇವಸ್ಥಾನದಲ್ಲಿ ಕೃತಿ ಸನೋನ್‌ಗೆ ಕಿಸ್‌ ಕೊಟ್ಟ ನಿರ್ದೇಶಕ, ಟೀಕೆಗೆ ಗುರಿ.!

ಕಳೆದ ಹದಿಮೂರು ಸೀಸನ್‌ಗಳಿಂದ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವ ಸಲ್ಮಾನ್ ಖಾನ್ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ಗಳಿಸಿದ್ದಾರೆ. 'ವೀಕೆಂಡ್ ಕಾ ವಾರ್' ಸಂಚಿಕೆಗಳನ್ನು ಅವರು ಜನ ಮೆಚ್ಚುವಂತೆ ನಡೆಸಿಕೊಡುತ್ತಾರೆ.

ಬಿಗ್ ಬಾಸ್ OTT ಸೀಸನ್ 2 ರ ಸ್ಪರ್ಧಿಗಳ ಪಟ್ಟಿಯನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಬಿಗ್ ಬಾಸ್ OTT 2 ಅದರ ಹಿಂದಿನ ಸೀಸನ್‌ನಂತೆ, ಆರು ವಾರಗಳ ಕಾಲ ನಡೆಯುತ್ತದೆ. ಮನೆಯೊಳಗೆ 10 ಸೆಲೆಬ್ರಿಟಿಗಳನ್ನು ಲಾಕ್ ಮಾಡಲಾಗುತ್ತದೆ. ಕಳೆದ ಸೀಸನ್‌ನಲ್ಲಿ, ಬಿಗ್ ಬಾಸ್ OTT ಯ ಮೂರು ಫೈನಲಿಸ್ಟ್‌ಗಳಾದ ಶಮಿತಾ ಶೆಟ್ಟಿ, ಪ್ರತೀಕ್ ಸೆಹಜ್‌ಪಾಲ್ ಮತ್ತು ನಿಶಾಂತ್ ಭಟ್ ಅವರಿಗೆ ಟಿವಿ ಶೋ ಬಿಗ್ ಬಾಸ್ ಸೀಸನ್‌ 15 ಕ್ಕೆ ಹೋಗಲು ಅವಕಾಶ ನೀಡಲಾಯಿತು. 

ಇದನ್ನೂ ಓದಿ: Tamanna Bhatia: ತಮನ್ನಾ ಬೋಲ್ಡ್‌ ಲುಕ್‌ಗೆ ಬೆವರಿದ ಗಂಡಹೈಕ್ಳು.. ಟೆಂಪರೇಚರ್‌ ಹೈ ಮಾಡುತ್ತೆ ಈ ವೆಬ್‌ ಸಿರೀಸ್‌!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News