ಪುಲ್ವಾಮಾ ದಾಳಿ: ಈ ವರ್ಷ ಹೋಳಿ ಆಚರಿಸಲ್ಲ ಎಂದ ರಾಜನಾಥ್ ಸಿಂಗ್

ಫೆಬ್ರವರಿ 14ರಂದು ಪುಲ್ವಾಮಾ ಬಳಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40ಕ್ಕೂ ಅಧಿಕ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು.

Last Updated : Mar 19, 2019, 07:48 PM IST
ಪುಲ್ವಾಮಾ ದಾಳಿ: ಈ ವರ್ಷ ಹೋಳಿ ಆಚರಿಸಲ್ಲ ಎಂದ ರಾಜನಾಥ್ ಸಿಂಗ್ title=

ನವದೆಹಲಿ: ಇತ್ತೀಚೆಗೆ ಜಮ್ಮು-ಕಾಶ್ಮೀರದ ಪುಲ್ವಾಮಾ ಬಳಿ ನಡೆದ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಈ ವರ್ಷ ಹೋಳಿ ಹಬ್ಬ ಆಚರಣೆ ಮಾಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಫೆಬ್ರವರಿ 14ರಂದು ಪುಲ್ವಾಮಾ ಬಳಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40ಕ್ಕೂ ಅಧಿಕ ಸಿಆರ್ಪಿಎಫ್ ಯೋಧರು ಸಾವನ್ನಪ್ಪಿದ್ದರು. ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಸಂಘಟನೆ ಈ ದಾಳಿಯನ್ನು ನಡೆಸಿತ್ತು. 

ಈ ಹಿಂದೆ "ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಭಾರತವು ಇಲ್ಸಾಮಿಕ್ ರಾಷ್ಟ್ರಗಳ ಸಹಕಾರ ಪಡೆಯಲಿದೆ. ಹಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಎಲ್ಲಾ ರಾಷ್ಟ್ರಗಳೂ ಒಗ್ಗೂಡಲಿವೆ" ಎಂದು  ಮಾರ್ಚ್ 1ರಂದು ರಾಷ್ಟ್ರೀಯ ತನಿಖಾ ಸಂಸ್ಥೆ ಕಚೇರಿ ಮತ್ತು ವಸತಿ ಸಂಕೀರ್ಣವನ್ನು ಉದ್ಘಾಟಿಸಿ ರಾಜನಾಥ್ ಸಿಂಗ್ ಹೇಳಿದ್ದರು.

2017ರಲ್ಲಿ ಸುಕ್ಮಾ ಹತ್ಯಾಕಾಂಡದಲ್ಲಿ ಸಿಆರ್‌ಪಿಎಫ್ ಯೋಧರನ್ನು ನಕ್ಸಲರು ಕೊಂದುಹಾಕಿದ್ದರು. ಆ ಸಂದರ್ಭದಲ್ಲಿಯೂ ರಾಜನಾಥ್ ಸಿಂಗ್ ಅವರು ದೀಪಾವಳಿ ಹಬ್ಬವನ್ನು ಆಚರಣೆ ಮಾಡಿರಲಿಲ್ಲ.

Trending News