ಲಂಡನ್ ನಲ್ಲಿ ನೀರವ್ ಮೋದಿ ಬಂಧನ

ಪಂಜಾಬ್ ರಾಷ್ಟ್ರೀಯ ಬ್ಯಾಂಕ್ ನ 13,500 ಕೋಟಿ ರೂ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ನೀರವ್ ಮೋದಿಯನ್ನು ಲಂಡನ್ ನಲ್ಲಿ ಬಂಧಿಸಲಾಗಿದೆ.

Last Updated : Mar 20, 2019, 05:09 PM IST
ಲಂಡನ್ ನಲ್ಲಿ ನೀರವ್ ಮೋದಿ ಬಂಧನ title=

ನವದೆಹಲಿ: ಪಂಜಾಬ್ ರಾಷ್ಟ್ರೀಯ ಬ್ಯಾಂಕ್ ನ 13,500 ಕೋಟಿ ರೂ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ನೀರವ್ ಮೋದಿಯನ್ನು ಲಂಡನ್ ನಲ್ಲಿ ಬಂಧಿಸಲಾಗಿದೆ.

ಮಂಗಳವಾರದಂದು ಜಾರಿ ನಿರ್ದೆಶನಾಲಯದಿಂದ ಮನವಿ ಮೇರೆಗೆ ಸ್ಕಾಟ್ಲೆಂಡ್ ಯಾರ್ಡ್ ಹಾಲ್ಬಾರ್ನ್ ನಲ್ಲಿ ಬಂಧಿಸಿದೆ.ಲಂಡನ್ನಿನ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ ವಾರಂಟ್ ಮೇರೆಗೆ ಅವರನ್ನು ಬಂಧಿಸಲಾಗಿದ್ದು, ಇಂದು ಶೀಘ್ರದಲ್ಲೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ನಂತರ ಅವರಿಗೆ ಜಾಮೀನು ನೀಡಲಾಗುತ್ತದೆ ಎನ್ನಲಾಗಿದೆ.

ಕಳೆದ ವರ್ಷ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ಹೆಸರು ಕೇಳಿ ಬಂದ ನಂತರ ಅವರು ತಲೆ ಮೆರೆಸಿಕೊಂಡಿದ್ದರು.ಈ ಹಿನ್ನಲೆಯಲ್ಲಿ ವಿದೇಶಾಂಗ ಇಲಾಖೆಯೂ ಕೂಡ ಯು.ಕೆ ಗೆ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತಾಗಿ ಮನವಿ ಮಾಡಿಕೊಂಡಿತ್ತು ಎನ್ನಲಾಗಿದೆ.ಈ ಹಗರಣದ ತನಿಖೆಯಲ್ಲಿ ಜಾರಿ ನಿರ್ದೇಶನಾಲಯ, ಸಿಬಿಐ, ಭಾಗಿಯಾಗಿವೆ. ಸಿಬಿಐ ಈ ಹಗರಣದ ವಿಚಾರವಾಗಿ ದೂರು ದಾಖಲಿಸಿಕೊಂಡಿದೆ. 

Trending News