ನವದೆಹಲಿ: ಲೋಕಸಭೆ ಚುನಾವಣೆಗೆ 11 ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಶನಿವಾರ ಬಿಜೆಪಿ ಬಿಡುಗಡೆ ಮಾಡಿದೆ.
ತೆಲಂಗಾಣದ ಆರು ಕ್ಷೇತ್ರಗಳಿಗೆ, ಉತ್ತರಪ್ರದೇಶದ ಮೂರು ಕ್ಷೇತ್ರಗಳಿಗೆ ಹಾಗು ಕೇರಳ ಮತ್ತು ಪಶ್ಚಿಮ ಬಂಗಾಳದ ತಲಾ ಒಂದು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಬಿಜೆಪಿ ಇಂದು ಪ್ರಕಟಿಸಿದ್ದು, ಉತ್ತರಪ್ರದೇಶದ ಕೈರಾನಾ ಕ್ಷೇತ್ರದಿಂದ ಪ್ರದೀಪ್ ಚೌಧರಿಗೆ, ಬುಲಂದ್ ಶಹರ್ ನಿಂದ ಬೋಲಾ ಸಿಂಹ ಮತ್ತು ನಗೀನಾ(ಎಸ್ಸಿ) ಕ್ಷೇತ್ರದಿಂದ ಯಶವಂತ್ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಿದೆ.
ತೆಲಂಗಾಣದ ಆದಿಲಾಬಾದ್ ಕ್ಷೇತ್ರದಿಂದ ಸೋಯಂ ಬಾಬು ರಾವ್, ಪೆದ್ದಪ್ತಿಲ್ ಕ್ಷೇತ್ರದಿಂದ ಕುಮಾರ್, ಜಹೀರಾಬಾದ್ ಕ್ಷೇತ್ರದಿಂದ ಬಾನಾಲಾ ಲಕ್ಷ್ಮಣ ರೆಡ್ಡಿ, ಹೈದರಾಬಾದ್ ಕ್ಷೇತ್ರದಿಂದ ಡಾ.ಭಗವಂತ್ ರಾವ್, ಚೆಲ್ವೇಲಾ ಕ್ಷೇತ್ರದಿಂದ ಬಿ.ಜನಾರ್ಧನ ರೆಡ್ಡಿ, ಖಮ್ಮಮ್ ಕ್ಷೇತ್ರದಿಂದ ವಾಸುದೇವರಾವ್ ಸ್ಪರ್ಧಿಸುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ