Panipuri Video: ಗರಿಗರಿಯಾದ ಪೂರಿ ಜೊತೆಗೆ ಸಿಹಿ ಮತ್ತು ಖಾರದ ಪಾನಿ ಇದನ್ನು ಪ್ರೀತಿಯಿಂದ ಗೋಲಗಪ್ಪಾ ಎಂದು ಕರೆಯುತ್ತಾರೆ. ಇದು ಪ್ರತಿಯೊಬ್ಬರ ನೆಚ್ಚಿನ ಸ್ಟ್ರೀಟ್ ಫುಡ್. ಈ ರುಚಿಕರವಾದ ಖಾದ್ಯವು ಎಷ್ಟು ಜನಪ್ರಿಯವಾಗಿದೆ ಎಂದರೆ ಪ್ರತಿ ರಸ್ತೆಯಲ್ಲೂ ಒಂದರಿಂದ ಎರಡು ಪಾನಿಪುರಿ ಅಂಗಡಿಗಳಿರುತ್ತವೆ. ದೇಶದ ಮೂಲೆ ಮೂಲೆಗಳಲ್ಲಿಯೂ ಇದು ಕಂಡುಬರುತ್ತದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಈ ರುಚಿಕರವಾದ ಉಪಹಾರವನ್ನು ಸವಿಯಲು ಇಷ್ಟಪಡುತ್ತಾರೆ. ಜನರು ಬಾಯಿ ಚಪ್ಪರಿಸಿಕೊಂಡು ಗೋಲಗಪ್ಪಾ ತಿನ್ನುತ್ತಾರೆ. ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಬೀದಿ ವ್ಯಾಪಾರಿಗಳು ಅನೇಕ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಾರೆ. ಗೋಲಗಪ್ಪಾಗಳನ್ನು ವಿವಿಧ ಸ್ಟಫಿಂಗ್ ಜೊತೆ ನೀಡಲಾಗುತ್ತದೆ.
ಇದನ್ನೂ ಓದಿ: Snake Video: ಇದು ಹಠಮಾರಿ ಹಾವು.. ತನ್ನನ್ನು ತಾನೇ ಹೇಗೆ ಕಚ್ಚಿಕೊಂಡು ಸಾಯುತ್ತದೆ ನೀವೇ ನೋಡಿ..
ಗೋಲಗಪ್ಪಾ ಪ್ರಿಯರು ನೋಡಲೇಬೇಕಾದ ವಿಡಿಯೋ
ರಾಜಸ್ಥಾನದ ಜೈಪುರದಲ್ಲಿ ಬೀದಿ ಬದಿಯ ಗಾಡಿಯಲ್ಲಿ ಗೋಲಗಪ್ಪಾ ಮಾರುತ್ತಿರುವ ಅಂಗಡಿಯವರೊಬ್ಬರು ನೆಟಿಜನ್ಗಳಿಂದ ಟೀಕೆಗೆ ಗುರಿಯಾಗಿದ್ದಾರೆ. ಈ ವ್ಯಕ್ತಿ ಗದ್ದಲದ ಟ್ರಿಪೋಲಿಯಾ ಮಾರುಕಟ್ಟೆಯಲ್ಲಿ ಗೋಲಗಪ್ಪಾಗಳನ್ನು ಮಾರುತ್ತಾನೆ. ಈರ ಗೋಲಗಪ್ಪಾ ಬಡಿಸುತ್ತ ನೃತ್ಯ ಮಾಡುತ್ತಾನೆ. ಇದು ಗ್ರಾಹಕರನ್ನು ಇನ್ನಷ್ಟು ಆಕರ್ಷಿಸುವುದಕ್ಕೆ ಇದೇ ಕಾರಣ. ವಿಶಿಷ್ಟ ಶೈಲಿಯ ಹೊರತಾಗಿಯೂ, ಈ ಅಂಗಡಿಯವರು ಜನರಿಗೆ ಅನಾರೋಗ್ಯಕರ ಆಹಾರವನ್ನು ಬಡಿಸುವುದು ಅಸಮಾಧಾನಕ್ಕೆ ಕಾರಣವಾಗಿದೆ. ವಾಸ್ತವವಾಗಿ, ಅವರು ಗೋಲಗಪ್ಪಾ ಕೊಡುವಾಗ ಅವರ ಕೈಯಲ್ಲಿ ಯಾವುದೇ ಶುದ್ಧತೆ ಇಲ್ಲ. ಈ ಕಾರಣದಿಂದಾಗಿ ಜನರು ಅನಾರೋಗ್ಯಕರ ಗೋಲಗಪ್ಪಾಗಳಿಂದ ದೂರವಿರಲು ನೆಟ್ಟಿಗರು ಹೇಳುತ್ತಿದ್ದಾರೆ. ಏಕೆಂದರೆ ಅತಿಸಾರದಂತಹ ನೀರಿನಿಂದ ಹರಡುವ ರೋಗಗಳು ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳನ್ನು ಎದುರಿಸಬಹುದು.
ಅಂಗಡಿಯವನ ಅಶುದ್ಧತೆಗೆ ನೆಟ್ಟಿಗರ ಅಸಮಾಧಾನ
ವಿಡಿಯೋದಲ್ಲಿ, ಬೀದಿ ವ್ಯಾಪಾರಿ ತನ್ನ ಕೈಗಳನ್ನು ಬಳಸಿ ಪಾನಿಪುರಿ ಮಸಾಲಾವನ್ನು ಮಿಶ್ರಣ ಮಾಡುತ್ತಿದ್ದಾನೆ. ಇದಾದ ನಂತರ ಫುಲ್ಕಿ ತುಂಬುತ್ತಾ ಡ್ಯಾನ್ಸ್ ಮಾಡಿ ಗ್ರಾಹಕರಿಗೆ ಬಡಿಸುವುದನ್ನು ಕಾಣಬಹುದು. ಮಾರಾಟಗಾರನು ತನ್ನ ಮೂಗು ಕೆರೆದುಕೊಂಡ ನಂತರ ಪಾನಿ ಪುರಿಯ ನೀರಿಗೆ ತನ್ನ ಕೈಗಳನ್ನುಹಾಕುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಅದೇ ಕೈಯಿಂದ ಗ್ರಾಹಕರಿಗೆ ಗೋಲಗಪ್ಪಾ ಬಡಿಸುವ ಮೊದಲು ಅವರು ತಮ್ಮ ಕೈಯಿಂದ ಪಾನಿಯ ರುಚಿ ನೋಡುತ್ತಾನೆ. ಇದನ್ನೆಲ್ಲಾ ನೋಡಿ ಯಾರಿಗೂ ಗೋಲಗಪ್ಪಾ ತಿನ್ನಬೇಕು ಎಂದು ಈ ಜನ್ಮದಲ್ಲೇ ಅನಿಸಲ್ಲ. ಗೋಲಗಪ್ಪ ಪ್ರಿಯರಿಗೆ ಈ ವಿಡಿಯೋ ಒಂದು ಪಾಠದಂತಿದೆ.
ಇದನ್ನೂ ಓದಿ: Viral Video: ದೆಹಲಿ ಮೆಟ್ರೋದಲ್ಲಿ ನಡೀ ಬಾರದ್ದೇ ನಡೆದು ಹೋಯ್ತು.. ಏನೆನೆಲ್ಲಾ ಮಾಡಿದ್ರು ನೀವೇ ನೋಡಿ!
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK