Jaundice : ಕಾಮಾಲೆ ರೋಗದಲ್ಲಿ ಎರಡು ವಿಧಗಳಿವೆ ಒಂದು ಹಳದಿ ಕಾಮಾಲೆ ಇನ್ನೊಂದು ಬಿಳಿ ಕಾಮಾಲೆ. ಇವು ಬೇರೆ ಬೇರೆ ಕಾರಣಗಳಿಂದಲೇ ಹುಟ್ಟಿಕೊಳ್ಳುತ್ತವೆ. ಆದರೆ ಈ ರೋಗದ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ಅದು ದೊಡ್ಡ ಪರಿಣಾಮವನ್ನು ಬೀರಬಹುದು. ಆದ್ದರಿಂದ ಈ ಕಾಮಾಲೆ ರೋಗದ ಲಕ್ಷಣ ಕಂಡು ಬಂದರೆ ಮೊದಲು ವೈಧ್ಯರನ್ನು ಸಂಪರ್ಕಿಸಿ ಮತ್ತು ಈ ಕೆಳಗಿನವುಗಳ ಸೇವನೆಯನ್ನು ಹೆಚ್ಚಿಸಿ ಇದರಿಂದ ಕ್ರಮೇಣವಾಗಿ ನೀವು ಕಾಮಾಲೆಯಿಂದ ಹೊರಬರಬಹುದು.
ಬೇವಿನ ಎಲೆಗಳು
ಬೇವನ್ನು ಆಯುರ್ವೇದದಲ್ಲಿ ಔಷಧಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಅನೇಕ ಔಷಧೀಯ ಗುಣಗಳು ಕಂಡುಬರುತ್ತವೆ. ಇದು ಆರೋಗ್ಯ ಮತ್ತು ಸೌಂದರ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರ ಬಳಕೆಯಿಂದ ಅನೇಕ ರೀತಿಯ ರೋಗಗಳನ್ನು ಗುಣಪಡಿಸಬಹುದು. ಅದರಲ್ಲೂ ರಕ್ತ ಸಂಬಂಧಿ ಕಾಯಿಲೆಗಳಿಗೆ ರಾಮಬಾಣ ಎಂದು ಹೇಳಲಾಗುತ್ತದೆ. ಇದಕ್ಕಾಗಿ ಕಾಮಾಲೆ ರೋಗಿಗಳು ಬೇವಿನ ಎಲೆಗಳನ್ನು ಸೇವಿಸಬಹುದು. ಇದಲ್ಲದೇ ಬೇವಿನ ಸೊಪ್ಪನ್ನು ರುಬ್ಬಿ ಜ್ಯೂಸ್ ಮಾಡಿ ಸೇವಿಸಬಹುದು.
ಇದನ್ನೂ ಓದಿ-Guava Leaf: ಈ 4 ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಪೇರಲ ಎಲೆ.. ಹೀಗೆ ಸೇವಿಸಿ
ತೆಂಗಿನ ನೀರು
ಕಾಮಾಲೆಯು ಯಕೃತ್ತಿನ ಸಂಭಂದಿತ ಕಾಯಿಲೆಗಳನ್ನು ಹುಟ್ಟುಹಾಕಬಹುದು. ಆದ್ದರಿಂದ ತೆಂಗಿನ ನೀರು ನಿಮಗೆ ಸಹಾಯ ಮಾಡುತ್ತದೆ. ವೈಜ್ಞಾನಿಕ ಸಂಶೋಧನೆಯ ಪ್ರಕಾರ, ತೆಂಗಿನ ನೀರಿನಿಂದ ತಯಾರಿಸಿದ ವಿನೆಗರ್ ಉರಿಯೂತವನ್ನು ಕಡಿಮೆ ಮಾಡಿ ಮತ್ತು ಉತ್ಕರ್ಷಣ ನಿರೋಧಕ ಪರಿಣಾಮಗಳನ್ನು ಹೆಚ್ಚಿಸುವ ಮೂಲಕ ಯಕೃತ್ತಿನ ಹಾನಿಯ ಅಪಾಯವನ್ನು ಕಡಿಮೆ ಮಾಡುತ್ತದೆ.
ಹಸಿರು ತರಕಾರಿಗಳು
ಆಹಾರದಲ್ಲಿ ಹಸಿರು ತರಕಾರಿಗಳನ್ನು ಸೇರಿಸುವುದು ಜಾಂಡೀಸ್ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಈ ತರಕಾರಿಗಳಲ್ಲಿ ಎಲೆಕೋಸು, ಬೀಟ್ರೂಟ್, ಕ್ಯಾರೆಟ್, ಬ್ರೊಕೊಲಿ, ಕೇಲ್ ಇತ್ಯಾದಿಗಳನ್ನು ಸೇವಿಸಬೇಕು. ಅವುಗಳಲ್ಲಿ ಸಾಕಷ್ಟು ಪೋಷಕಾಂಶಗಳಿವೆ, ಇವು ನಿಮಗೆ ಪ್ರೋಟೀನ್ ನ್ನು ಒದಗಿಸುತ್ತವೆ ಮತ್ತು ಯಕೃತ್ತನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ-ಪ್ರೆಶರ್ ಕುಕ್ಕರ್‌ಲ್ಲಿ ಬೇಯಿಸಿದ ಈ ಆಹಾರಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ
ಕಬ್ಬಿನ ರಸವು
ಕಬ್ಬಿನ ರಸವನ್ನು ಕಾಮಾಲೆಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕಬ್ಬಿನ ರಸವು ಆರೋಗ್ಯಕರ ಜೀರ್ಣಕ್ರಿಯೆಯನ್ನು ಹೆಚ್ಚಿಸುವುದರ ಜೊತೆಗೆ ಯಕೃತ್ತಿನ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಇದಕ್ಕಾಗಿ, ನೀವು ಒಂದು ಲೋಟ ಕಬ್ಬಿನ ರಸವನ್ನು ಕೆಲವು ಹನಿ ನಿಂಬೆ ರಸದೊಂದಿಗೆ ಬೆರೆಸಿ ಕುಡಿಯಬಹುದು. ಉತ್ತಮ ಫಲಿತಾಂಶಕ್ಕಾಗಿ ನೀವು ದಿನಕ್ಕೆ ಎರಡು ಬಾರಿ ಕಬ್ಬಿನ ರಸವನ್ನು ಕುಡಿಯುವುದು ಸಹಕಾರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ