ನವದೆಹಲಿ: ಮೊಹಾಲಿ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ 9 ನೇ ಪಂದ್ಯದಲ್ಲಿ ಪಂಜಾಬ್ ತಂಡವು ಟಾಸ್ ಗೆದ್ದು ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡಿತು.
Innings Break!
A gritty knock of 60 from QDK followed by a quick fire innings from Hardik, help @mipaltan post a total of 176/7 in 20 overs.
Will the @lionsdenkxip chase this down? #KXIPvMI pic.twitter.com/ytLuLDft4w
— IndianPremierLeague (@IPL) March 30, 2019
ಮೊದಲು ಬ್ಯಾಟಿಂಗ್ ಪ್ರಾರಂಭಿಸಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರಂಭದಲ್ಲಿ ನಾಯಕ ರೋಹಿತ್ ಶರ್ಮಾ 32 ಹಾಗೂ ಕ್ವಿಂಟಾನ್ ಡಿ ಕಾಕ್ 62 ರನ್ ಗಳ ನೆರವಿಂದ ಉತ್ತಮ ಅಡಿಪಾಯವನ್ನು ಹಾಕಿದ್ದರು.ಆದರೆ ಇಬ್ಬರು ಕೂಡ ಎಲ್ಬಿಡಬ್ಲ್ಯು ಗೆ ವಿಕೆಟ್ ಒಪ್ಪಿಸಿದರು.
A @QuinnyDeKock69 masterclass in Mohali!#OneFamily #CricketMeriJaan #MumbaiIndians #KXIPvMI pic.twitter.com/kNVVatrlrM
— Mumbai Indians (@mipaltan) March 30, 2019
ನಂತರ ಬಂದಂತಹ ಸೂರ್ಯ ಕುಮಾರ್ ಯಾದವ್ ಹಾಗೂ ಯುವರಾಜ್ ಸಿಂಗ್ ಅವರು ಬೇಗನೆ ವಿಕೆಟ್ ಒಪ್ಪಿಸುವ ಮೂಲಕ ತಂಡದ ಆಟ ಮಂದಗತಿಯಲ್ಲಿ ಸಾಗಿತ್ತು .ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಕೇವಲ19 ಎಸೆತಗಳಲ್ಲಿ 31 ರನ್ ಚಚ್ಚುವ ಮೂಲಕ ತಂಡದ ರನ್ ಗತಿ ಹೆಚ್ಚುವಂತೆ ಮಾಡಿದರು.ಆ ಮೂಲಕ ಮುಂಬೈ ಇಂಡಿಯನ್ಸ್ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿದೆ.
ಪಂಜಾಬ್ ತಂಡದ ಪರ ಮುರುಗನ್ ಅಶ್ವಿನ್ ಅವರು 4 ಓವರ್ ಗಳಲ್ಲಿ ಕೇವಲ 25 ರನ್ ನೀಡಿ ಎರಡು ವಿಕೆಟ್ ಗಳನ್ನು ತೆಗೆದುಕೊಂಡರು.ಆ ಮೂಲಕ ಮುಂಬೈ ತಂಡದ ರನ್ ಗೆ ಕಡಿವಾಣ ಹಾಕಿದರು