ಬೆಂಗಳೂರು: ಮಾದಕವಸ್ತು ಕಳ್ಳ ಸಾಗಾಣಿಕೆ ಜಾಲಕ್ಕೆ ಪೊಲೀಸರು ಸೆಡ್ಡು ಹೊಡೆದಿದ್ದಾರೆ. ಕಳೆದೊಂದು ವರ್ಷದಲ್ಲಿ 6 ಸಾವಿರಕ್ಕೂ ಹೆಚ್ಚು ಕೇಸ್ ಗಳಲ್ಲಿ 900ಕ್ಕೂ ಹೆಚ್ಚು ಡ್ರಗ್ ಪೆಡ್ಲರ್ಗಳನ್ನು ಜೈಲಿಗಟ್ಟಿದ್ದಾರೆ. ವಿಶ್ವ ಮಾದಕವಸ್ತು ಸೇವನೆ ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಕೋಟ್ಯಂತರ ರೂ. ಮೌಲ್ಯದ ಮಾದಕವಸ್ತುಗಳನ್ನು ನಾಶಪಡಿಸಿದ್ದಾರೆ.
ಈ ಮೂಲಕ ಮಾದಕ ದಂಧೆಗೆ ಬೆಂಗಳೂರು ಪೊಲೀಸರು ಬಿಸಿ ಮುಟ್ಟಿಸ್ತಿದ್ದಾರೆ. ಬೆಂಗಳೂರು ಪೊಲೀಸರೆಂದರೇ ಕಳ್ಳರು, ರೌಡಿಗಳು, ಸಮಾಜಘಾತುಕರು ಮಾತ್ರವಲ್ಲದೇ, ಡ್ರಗ್ ಪೆಡ್ಲರ್ಗಳು ಸಹ ಕೂತಲ್ಲೇ ನಡುಗುತ್ತಾರೆ. ಕಳೆದೊಂದು ವರ್ಷದಲ್ಲಿ ಬೆಂಗಳೂರು ಮಹಾನಗರದಲ್ಲಿ ಬರೋಬ್ಬರಿ 6,191 ಮಾದಕವಸ್ತು ಸೇವನೆ ಹಾಗೂ ಸಾಗಾಣಿಕೆ ಪ್ರಕರಣ ದಾಖಲಾಗಿದ್ದು, ಈ ಪೈಕಿ 159 ಮಂದಿ ವಿದೇಶಿ ಪ್ರಜೆಗಳು ಹಾಗೂ 7,882 ಮಂದಿಯನ್ನು ಜೈಲಿಗಟ್ಟಲಾಗಿದೆ.
This International Day against Drug Abuse, join us in our mission to eradicate substance-abuse from #NammaBengaluru.
Take this pledge to stand united and be the voice of change for a healthier, happier and a drug-free Bangaluru.
Link: https://t.co/roglZDnXbs#NoDrugsNoRegrets… pic.twitter.com/qa4qGfDGzf
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) June 26, 2023
ಇದನ್ನೂ ಓದಿ: Medical seat fraud: ಮಾಜಿ ಸಚಿವ ಆರ್.ಎಲ್.ಜಾಲಪ್ಪ ಪುತ್ರನಿಗೆ ಜೈಲು ಶಿಕ್ಷೆ, 20 ಲಕ್ಷ ರೂ. ದಂಡ!
ಕಳೆದೊಂದು ವರ್ಷದಲ್ಲಿ 117 ಕೋಟಿ ರೂ. ಬೆಲೆಬಾಳುವ 6,261 ಹೆಚ್ಚು ಕೆಜಿ ಗಾಂಜಾ, 2.5 ಕೆಜಿ ಆಷಿಶ್ ಆಯಿಲ್, 15 ಕೆಜಿ ಅಫೀಮು, 52 ಕೆಜಿ MDMA, ವಿವಿಧ ರೀತಿಯ 109 ಕೆಜಿ ಸಿಂಥೆಟಿಕ್ ಡ್ರಗ್ ಸೀಜ್ ಮಾಡಲಾಗಿದೆ. ಕಳೆದೊಂದು ವರ್ಷದಲ್ಲಿ ವಶಪಡಿಸಿಕೊಂಡಿರುವ 117 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳ ಪೈಕಿ ಕಳೆದ ಮಾರ್ಚ್ನಲ್ಲಿ 21 ಕೋಟಿ ರೂ. ಮೌಲ್ಯದ ಗಾಂಜಾ ಹಾಗೂ ಸಿಂಥೆಟಿಕ್ ಡ್ರಗ್ ನಾಶ ಮಾಡಲಾಗಿತ್ತು.
'𝘉𝘳𝘦𝘢𝘬𝘪𝘯𝘨 𝘉𝘢𝘥'? ❌
𝘽𝙧𝙚𝙖𝙠𝙞𝙣𝙜 𝙍𝙚𝙘𝙤𝙧𝙙𝙨! ✅Yeah, you read that right. Approximately 57cr worth narcotics were seized in the past one year.
And we’ve got NO plans of slowing down! Let’s come together to make #NammaBengaluru a ‘Drug-free’ city. 🤝… pic.twitter.com/MgtMV6xasd
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) June 25, 2023
ಇಂದು(ಜೂನ್ 26) ಮಾದಕವಸ್ತು ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಡ್ರಗ್ಸ್ ಡೆಸ್ಟ್ರಾಯ್ ಕಮಿಟಿಗೆ ಬೆಂಗಳೂರು ಪೊಲೀಸರು 117 ಕೋಟಿ ರೂ. ಮೌಲ್ಯದ ಗಾಂಜಾ ಆಶಿಷ್ ಆಯಿಲ್ ಹೆರಾಯಿನ್, MDMD, LSD ಮುಂತಾದ ಮಾದಕವಸ್ತುಗಳನ್ನು ಕೋರ್ಟ್ನಿಂದ ಅನುಮತಿ ಪಡೆದು ದಾಬಸ್ ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಡೆಸ್ಟ್ರಾಯ್ ಮಾಡಲಾಗ್ತಿದೆ. ಡ್ರಗ್ ಪೆಡ್ಲರ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ದೃಷ್ಟಿಯಿಂದ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಮಿಷನರ್ ದಯಾನಂದ್ ಬೆಂಗಳೂರು ಸಿಟಿ ಪೊಲೀಸ್ ಇಲಾಖೆಯ NDPS ಪೋರ್ಟಲ್ಅನ್ನು ಅನಾವರಣಗೊಳಿಸಿದರು.
ಇದನ್ನೂ ಓದಿ: ಬಿಜೆಪಿ ಅವಲೋಕನ ಸಭೆಯಲ್ಲಿ ಸೋಲಿಗೆ ಕಾರಣರಾದ ಜೋಷಿ, ಸಂತೋಷ್ ಏಕಿಲ್ಲ: ಕಾಂಗ್ರೆಸ್ ಪ್ರಶ್ನೆ
Be the voice of change.
This #WorldDrugDay, take a stand, raise awareness against the ill effects of drug-abuse. Let us empower our youth to take informed choices for a healthier & a happier society. #SayNoToDrugs #NoDrugsNoRegrets pic.twitter.com/3AgWz6zrZW
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) June 26, 2023
ಇದಲ್ಲದೇ ಬೆಂಗಳೂರು ನಗರದಾದ್ಯಂತ ಈ ದಿನ ಏಕಕಾಲಕ್ಕೆ 692 ಶಾಲಾ ಕಾಲೇಜುಗಳಲ್ಲಿ ಸುಮಾರು 618 ಮಂದಿ ಪೊಲೀಸ್ ಅಧಿಕಾರಿಗಳು 2 ಲಕ್ಷಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳಿಗೆ ಮಾದಕವಸ್ತು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸ್ತಿದ್ದಾರೆ. ಏನೇ ಹೇಳಿ ಪೊಲೀಸರು ಬಿಗಿ ಕ್ರಮ ಕೈಗೊಂಡರೂ ಸಹ ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ದಂಧೆ ಜೋರಾಗಿದ್ದು, ಮತ್ತಷ್ಟು ಚುರುಕಾಗಿ ಕೆಲಸ ಮಾಡಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.