Shakti Scheme: 19 ದಿನದ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ ಬರೋಬ್ಬರಿ ₹222 ಕೋಟಿ!

Karnataka Shakti Scheme: ಜೂನ್ 11 ರಿಂದ ಜೂನ್ 28ರವರೆಗೆ 4 ನಿಗಮದ ಬಸ್‍ಗಳಲ್ಲಿ ಒಟ್ಟು 9,46,35,508 ಮಹಿಳೆಯರು ಪ್ರಯಾಣ ನಡೆಸಿಒದ್ದಾರೆ. ಈ ಎಲ್ಲಾ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ ಒಟ್ಟು ₹222,00,79,232 ಆಗುತ್ತದೆ ಎಂದು ಸರ್ಕಾರ ಮಾಹಿತಿ ನೀಡಿದೆ.

Written by - Puttaraj K Alur | Last Updated : Jun 29, 2023, 02:19 PM IST
  • ‘ಶಕ್ತಿ’ ಯೋಜನೆಯಡಿ 4 ನಿಗಮಗಳ ಬಸ್‌ಗಳಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ
  • ಪ್ರತಿನಿತ್ಯ 50 ರಿಂದ 60 ಲಕ್ಷ ಮಹಿಳಾ ಪ್ರಯಾಣಿಕರು ಬಸ್‍ಗಳಲ್ಲಿ ಸಂಚಾರ ನಡೆಸುತ್ತಿದ್ದಾರೆ
  • ಜೂನ್ 11ರಿಂದ ಈವರೆಗಿನ ಮಹಿಳಾ ಪ್ರಯಾಣಿಕರ ಟಿಕೆಟ್‌ ಮೌಲ್ಯ ₹222 ಕೋಟಿ ದಾಟಿದೆ
Shakti Scheme: 19 ದಿನದ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ ಬರೋಬ್ಬರಿ ₹222 ಕೋಟಿ! title=
ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ

ಬೆಂಗಳೂರು: ‘ಶಕ್ತಿ’ ಯೋಜನೆಯಡಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 4 ನಿಗಮಗಳ ಬಸ್‌ಗಳಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪ್ರತಿನಿತ್ಯ 50 ರಿಂದ 60 ಲಕ್ಷ ಮಹಿಳಾ ಪ್ರಯಾಣಿಕರು ಸಂಚಾರ ನಡೆಸುತ್ತಿದ್ದಾರೆ. ಯೋಜನೆ ಜಾರಿಯಾದಾಗಿನಿಂದ ಅಂದರೆ ಜೂನ್ 11ರಿಂದ ಈವರೆಗೆ ಮಹಿಳಾ ಪ್ರಯಾಣಿಕರ ಟಿಕೆಟ್‌ ಮೌಲ್ಯ ₹222 ಕೋಟಿ ದಾಟಿದೆ.  

KSRTC, NWKRTC, BMTC ಮತ್ತು KKRTC ನಾಲ್ಕೂ ನಿಗಮಗಳ ಬಸ್‍ಗಳಲ್ಲಿ ಪ್ರತಿದಿನ 50 ರಿಂದ 60 ಲಕ್ಷ ಮಹಿಳಾ ಪ್ರಯಾಣಿಕರು ಸಂಚಾರ ನಡೆಸುತ್ತಿದ್ದಾರೆ. ಹೀಗಾಗಿ ಕಳೆದ 19 ದಿನಗಳಲ್ಲಿ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯವು ಬರೋಬ್ಬರಿ ₹222 ಕೋಟಿ ದಾಟಿದೆ.

ಇದನ್ನೂ ಓದಿ: ಮುಂದುವರೆದ ರೇಣುಕಾಚಾರ್ಯ ವಾಗ್ದಾಳಿ; ಸುಧಾಕರ್, ಕಟೀಲ್, ಅಣ್ಣಾಮಲೈ ವಿರುದ್ಧ ಅಸಮಾಧಾನ

ಜೂನ್ 28ರಂದು 4 ನಿಗಮದಲ್ಲಿ ಪ್ರಯಾಣ ಮಾಡಿದ ಮಹಿಳಾ ಪ್ರಯಾಣಿಕರ ಸಂಖ್ಯೆ ಮತ್ತು ಮೌಲ್ಯ ಇಂತಿದೆ ನೋಡ

KSRTC

ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ- 17,97,487

ಒಟ್ಟು ಮಹಿಳಾ ಪ್ರಯಾಣದ ಟಿಕೆಟ್ ಮೌಲ್ಯ- ₹4,88,17,069

BMTC

ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ- 19,85,022

ಒಟ್ಟು ಮಹಿಳಾ ಪ್ರಯಾಣಿಕರ ಟಿಕೆಟ್‌ ಮೌಲ್ಯ- ₹2,52,51,690

NWKRTC

ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ- 14,61,168

ಒಟ್ಟು ಮಹಿಳಾ ಪ್ರಯಾಣಿಕರ ಟಿಕೆಟ್‌ ಮೌಲ್ಯ- ₹2,66,22,130

KKRTC

ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ- 8,34,562

ಒಟ್ಟು ಮಹಿಳಾ ಪ್ರಯಾಣಿಕರ ಟಿಕೆಟ್‌ ಮೌಲ್ಯ- ₹2,66,22,130

ಇದನ್ನೂ ಓದಿ: ಬಿಜೆಪಿಯ ಗೊಂದಲ ಪರಿಹಾರಕ್ಕೆ ಉಚಿತ ಐಡಿಯಾ ನೀಡಿದ ಕಾಂಗ್ರೆಸ್: RSS ಲಾಠಿ ಬಗ್ಗೆ ವ್ಯಂಗ್ಯ!  

ಜೂನ್ 11 ರಿಂದ ಜೂನ್ 28ರವರೆಗೆ 4 ನಿಗಮದ ಬಸ್‍ಗಳಲ್ಲಿ ಒಟ್ಟು 9,46,35,508 ಮಹಿಳೆಯರು ಪ್ರಯಾಣ ನಡೆಸಿಒದ್ದಾರೆ. ಈ ಎಲ್ಲಾ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ ಒಟ್ಟು ₹222,00,79,232 ಆಗುತ್ತದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News