ಸರ್ಕಾರಿ ನೌಕರರಿಗೆ ಈ ಬಾರಿ ಡಬಲ್ ಜಾಕ್‌ಪಾಟ್: ಎರಡು ಭತ್ಯೆಗಳ ಏರಿಕೆಯೊಂದಿಗೆ ವೇತನದಲ್ಲಿ ಭಾರೀ ಹೆಚ್ಚಳ !

ವರದಿಗಳ ಪ್ರಕಾರ, ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆಯನ್ನು ಶೀಘ್ರದಲ್ಲೇ ಹೆಚ್ಚಿಸಬಹುದು. ಹೀಗಾದಾಗ ನೌಕರರ ವೇತನದಲ್ಲಿ ಗಣನೀಯ ಏರಿಕೆಯಾಗಲಿದೆ. ಇದರೊಂದಿಗೆ ತುಟ್ಟಿಭತ್ಯೆಯಲ್ಲಿ ಕೂಡಾ ಹೆಚ್ಚಳವಾಗಲಿದೆ.  

Written by - Ranjitha R K | Last Updated : Jul 5, 2023, 09:30 AM IST
  • ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆಯನ್ನು ಶೀಘ್ರದಲ್ಲಿ ಹೆಚ್ಚಿಸಬಹುದು.
  • ಇದೇ ವೇಳೆ ನೌಕರರ ವೇತನದಲ್ಲಿ ಗಣನೀಯ ಏರಿಕೆಯಾಗಲಿದೆ.
  • ಸರ್ಕಾರಿ ನೌಕರರ ಎಚ್‌ಆರ್‌ಎ ಅವರು ಕೆಲಸ ಮಾಡುವ ನಗರವನ್ನು ಆಧರಿಸಿದೆ.
ಸರ್ಕಾರಿ ನೌಕರರಿಗೆ ಈ ಬಾರಿ ಡಬಲ್ ಜಾಕ್‌ಪಾಟ್: ಎರಡು ಭತ್ಯೆಗಳ ಏರಿಕೆಯೊಂದಿಗೆ ವೇತನದಲ್ಲಿ ಭಾರೀ ಹೆಚ್ಚಳ ! title=

ಬೆಂಗಳೂರು : ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ. ಶೀಘ್ರದಲ್ಲೇ ಕೇಂದ್ರ ನೌಕರರ ವೇತನದಲ್ಲಿ ಭಾರೀ ಏರಿಕೆಯಾಗಲಿದೆ. ತುಟ್ಟಿಭತ್ಯೆ ಹೆಚ್ಚಳದ ನಂತರ, ಮತ್ತೊಂದು ಭತ್ಯೆಯಲ್ಲಿಯೂ ಹೆಚ್ಚಳವಾಗಲಿದೆ. ಹಾಗಿದ್ದರೆ ನೌಕರರ ವೇತನ ಹೆಚ್ಚಳದ ಹಿಂದಿನ ಲೆಕ್ಕಾಚಾರ ಏನು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. 

ಮನೆ ಬಾಡಿಗೆ ಭತ್ಯೆ (HRA) : 
ಕೇಂದ್ರ ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ ಶೀಘ್ರದಲ್ಲೇ ಹೆಚ್ಚಾಗಬಹುದು ಎಂದು ಮೂಲಗಳು ತಿಳಿಸಿವೆ.  ಮನೆ ಬಾಡಿಗೆ ಭತ್ಯೆ ಅಥವಾ HRAಯನ್ನು ಕೊನೆಯದಾಗಿ ಜುಲೈ 2021 ರಲ್ಲಿ ನವೀಕರಿಸಲಾಗಿತ್ತು. ಈ ನಿಟ್ಟಿನಲ್ಲಿ, ಜನವರಿ 2023 ರ ನಂತರ ಮತ್ತೆ ಮನೆ ಬಾಡಿಗೆ ಪಾವತಿಯಲ್ಲಿ ಬದಲಾವಣೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ : Aadhaar-Ration Card Link: ಆಧಾರ್-ರೇಷನ್ ಕಾರ್ಡ್ ಲಿಂಕ್ ಮಾಡಲು ಸೆ.30 ಕೊನೆಯ ದಿನಾಂಕ

ವರದಿಗಳ ಪ್ರಕಾರ, ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆಯನ್ನು ಶೀಘ್ರದಲ್ಲೇ ಹೆಚ್ಚಿಸಬಹುದು. ಹೀಗಾದಾಗ ನೌಕರರ ವೇತನದಲ್ಲಿ ಗಣನೀಯ ಏರಿಕೆಯಾಗಲಿದೆ. ಸರ್ಕಾರಿ ನೌಕರರ ಎಚ್‌ಆರ್‌ಎ ಅವರು ಕೆಲಸ ಮಾಡುವ ನಗರವನ್ನು ಆಧರಿಸಿರುತ್ತದೆ. ಇದು ಮೂರು ವರ್ಗೀಕರಣಗಳನ್ನು ಹೊಂದಿದೆ: X, Y ಮತ್ತು Z. ಪ್ರಸ್ತುತ, Z ವರ್ಗದ ಕಾರ್ಮಿಕರಿಗೆ ಅವರ ಮೂಲ ವೇತನದ 9% ರಷ್ಟು HRA ಪಾವತಿಸಲಾಗುತ್ತದೆ. 

ಏನು ಹೇಳುತ್ತವೆ ವರದಿ? :
ಸರ್ಕಾರಿ ನೌಕರರಿಗೆ HRA ಶೀಘ್ರದಲ್ಲೇ 3% ವರೆಗೆ ಹೆಚ್ಚಾಗಬಹುದು ಎಂದು ವರದಿಗಳು ಸೂಚಿಸುತ್ತವೆ. ಎಕ್ಸ್-ಕ್ಲಾಸ್ ನಗರಗಳಲ್ಲಿನ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ 3 ಪ್ರತಿಶತದಷ್ಟು, ವೈ-ಕ್ಲಾಸ್ ನಗರಗಳಲ್ಲಿ 2 ಪ್ರತಿಶತದಷ್ಟು ಮತ್ತು Z-ಕ್ಲಾಸ್ ನಗರಗಳಲ್ಲಿನ ಉದ್ಯೋಗಿಗಳಿಗೆ HRA ಶೇಕಡಾ 1 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. 

ಇದನ್ನೂ ಓದಿ : ಹೀರೋ ಮೋಟೋಕಾರ್ಪ್ ಮತ್ತು ಹಾರ್ಲೆ-ಡೇವಿಡ್ಸನ್ ಸಹ-ಅಭಿವೃದ್ಧಿಪಡಿಸಿದ ಪ್ರೀಮಿಯಂ ಮೋಟಾರ್‌ಸೈಕಲ್ 'X440' ಭಾರತದಲ್ಲಿ ಪಾದಾರ್ಪಣೆ

7ನೇ ವೇತನ ಆಯೋಗ: ಡಿಎ ಹೆಚ್ಚಳ :
ಜುಲೈ ಆರಂಭದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಬಹುಮಾನ ಸಿಕ್ಕಿದೆ. ಡಿಎ ಹೆಚ್ಚಳ ಕುರಿತಂತೆ ಮಹತ್ವದ ಸುದ್ದಿಯೊಂದು ಬಂದಿದೆ. ಜುಲೈ 2023 ರಲ್ಲಿ ಸರ್ಕಾರಿ ನೌಕರರು 46 ಪ್ರತಿಶತ ತುಟ್ಟಿಭತ್ಯೆಯನ್ನು ಪಡೆಯುತ್ತಾರೆ ಎಂಬುದು ಈಗ ಅಧಿಕೃತವಾಗಿ ಖಚಿತವಾಗಿದೆ. ಜುಲೈನಿಂದ ನೌಕರರಿಗೆ ಶೇ 42ರ ಬದಲಾಗಿ ಶೇ 46ರಷ್ಟು  ತುಟ್ಟಿ ಭತ್ಯೆ ನೀಡಲಾಗುವುದು.

 ಡಿಎ ಜೊತೆಗೆ ಕೇಂದ್ರ ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆಯೂ ಹೆಚ್ಚಾಗಲಿದೆ. ಏಕೆಂದರೆ ಉದ್ಯೋಗಿಗಳ ಮನೆ ಬಾಡಿಗೆ ಭತ್ಯೆ (HRA) ತುಟ್ಟಿ ಭತ್ಯೆಯೊಂದಿಗೆ ಸಂಬಂಧ ಹೊಂದಿದೆ.  ಡಿಎ ಶೇಕಡಾ 50 ದಾಟಿದ ನಂತರ ಎಚ್‌ಆರ್‌ಎಯನ್ನು ಕೂಡಾ ಪರಿಷ್ಕರಿಸಲಾಗುವುದು ಎಂದು ಸರ್ಕಾರ ಈಗಾಗಲೇ ಅಧಿಸೂಚನೆಯಲ್ಲಿ ತಿಳಿಸಿದೆ. ಜುಲೈ 2023 ರಲ್ಲಿ,  ತುಟ್ಟಿ ಭತ್ಯೆ ಶೇಕಡಾ 4 ರಷ್ಟು ಹೆಚ್ಚಾಗುವುದು ಬಹುತೇಕ ಖಚಿತವಾಗಿದೆ.
 
 ಇದನ್ನೂ ಓದಿ : Gold Price Today: ಆಷಾಢ ಬಂದ್ರೂ ಇಳಿಕೆ ಆಗಲೇ ಇಲ್ಲ ಹಳದಿ ಲೋಹ..!!

ಮನೆ ಬಾಡಿಗೆ ಭತ್ಯೆ ಯಾವಾಗ ಹೆಚ್ಚಾಗುತ್ತದೆ? :
DoPT ಯ ಜ್ಞಾಪಕ ಪತ್ರದ ಪ್ರಕಾರ, ಕೇಂದ್ರ ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆಯನ್ನು  ಡಿಎ  ಹೆಚ್ಚಳದ ಆಧಾರದ ಮೇಲೆ ಪರಿಷ್ಕರಿಸಲಾಗುತ್ತದೆ. ನಗರದ ಪ್ರಕಾರದ ಪ್ರಕಾರ, ಶೇಕಡಾ 27, ಶೇಕಡಾ 18 ಮತ್ತು ಶೇಕಡಾ 9 ರ ದರದಲ್ಲಿ HRA ಅನ್ನು ಒದಗಿಸಲಾಗುತ್ತದೆ. 2015 ರಲ್ಲಿ ನೀಡಲಾದ ಜ್ಞಾಪಕ ಪತ್ರದ ಪ್ರಕಾರ, ಸಬ್ಸಿಡಿಯೊಂದಿಗೆ HRA ಅನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಗುವುದು. ಈಗ ತುಟ್ಟಿಭತ್ಯೆ  50% ದಾಟಿದಾಗ ಆ ತಿದ್ದುಪಡಿ ಮತ್ತೆ ಆಗಬೇಕು. 

HRA ಹೆಚ್ಚಳದಿಂದ ಒಟ್ಟು ಮೊತ್ತ ಎಷ್ಟು ಹೆಚ್ಚಾಗುತ್ತದೆ? : 
7ನೇ ವೇತನ ಆಯೋಗದ ಮ್ಯಾಟ್ರಿಕ್ಸ್ ಪ್ರಕಾರ ಕೇಂದ್ರ ಸರ್ಕಾರಿ ನೌಕರರ ಗರಿಷ್ಠ ಮೂಲ ವೇತನ ಮಾಸಿಕ 56,900 ರೂ. ಆಗಿದ್ದರೆ ಇದರ HRA ಅನ್ನು ಶೇಕಡಾ 27 ರ ದರದಲ್ಲಿ ಲೆಕ್ಕಹಾಕಲಾಗುತ್ತದೆ. 

ಇದನ್ನು ಸರಳ ಲೆಕ್ಕಾಚಾರದಿಂದ ಅರ್ಥಮಾಡಿಕೊಳ್ಳಬಹುದು:
HRA = 56,900 x 27/100 = Rs 15,363/ತಿಂಗಳು
30% HRA = 56,900 x 30/100 = Rs 17,070/ತಿಂಗಳು
HRA ನಲ್ಲಿ ಒಟ್ಟು ಹೆಚ್ಚಳ = Rs 1,707/ತಿಂಗಳು 
ವಾರ್ಷಿಕ HRA ಹೆಚ್ಚಳ = 20,484

ಇದನ್ನೂ ಓದಿ : ಫ್ರೀ ರೇಶನ್ ಜೊತೆಗೆ ಈ ಸೌಲಭ್ಯ ಕೂಡಾ ಇನ್ನು ಸಂಪೂರ್ಣ ಉಚಿತ ! ಪಡಿತರ ಚೀಟಿದಾರರಿಗೆ ಜಾಕ್ ಪಾಟ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News