"ಶೇರ್" ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕ್ರಿಸ್ ರೋಡ್ರಿಗಸ್

Sher Film : ಕಿರುತೆರೆಯ ಜನಪ್ರಿಯ ನಾಯಕ ಕಿರಣ್ ರಾಜ್, ಈಗ ಹಿರಿತೆರೆಯಲ್ಲೂ ಬ್ಯುಸಿ ನಟ. ಪ್ರಸ್ತುತ ಕಿರಣ್ ರಾಜ್ ನಾಯಕರಾಗಿ ನಟಿಸುತ್ತಿರುವ "ಶೇರ್" ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ.  

Written by - YASHODHA POOJARI | Last Updated : Jul 13, 2023, 05:14 PM IST
  • "ಶೇರ್" ಚಿತ್ರ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದೆ
  • ಆರು ತಿಂಗಳನಿಂದ ಈ ಚಿತ್ರಕ್ಕಾಗಿ ಕ್ರಿಸ್,‌ ಸಾಕಷ್ಟು ಅಭ್ಯಾಸ ಮಾಡಿಕೊಂಡಿದ್ದಾರೆ.
  • ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ.
"ಶೇರ್" ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕ್ರಿಸ್ ರೋಡ್ರಿಗಸ್   title=

ಪ್ರಸಿದ್ಧ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ "ಶೇರ್" ಚಿತ್ರ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಕ್ರಿಸ್ ರೋಡ್ರಿಗಸ್ ಎಂಬ ಇಪ್ಪತ್ತು ವರ್ಷದ ಯುವನಟ ಈ ಚಿತ್ರದಲ್ಲಿ ಖಳನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆರು ತಿಂಗಳನಿಂದ ಈ ಚಿತ್ರಕ್ಕಾಗಿ ಕ್ರಿಸ್,‌ ಸಾಕಷ್ಟು ಅಭ್ಯಾಸ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಇವರ ಅಭಿನಯದ ಕೆಲವು ಸನ್ನಿವೇಶಗಳನ್ನು ಹೆಚ್ ಎಂ ಟಿ ಫ್ಯಾಕ್ಟರಿ ಆವರಣದಲ್ಲಿ ಚಿತ್ರಿಸಿಕೊಳ್ಳಲಾಗಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. 

ಇದನ್ನೂ ಓದಿ-ಗಾಳಿಪಟ ಚಿತ್ರದ ಚೆಲುವೆಯರಿವರು..ಇದರಲ್ಲಿ ನಿಮ್ಮ ನಿದ್ದೆಗೆಡಿಸಿದ ಕ್ಯಾರೆಕ್ಟರ್‌ ಯಾವುದು..?

ಬೀದರ್ ನ ಸುದರ್ಶನ್ ಸುಂದರರಾಜ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಿಟ್ಟಿ ಕೌಶಿಕ್ ಛಾಯಾಗ್ರಹಣ ಹಾಗೂ ಗುಮ್ಮಿನೇನಿ‌ ವಿಜಯ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. 

ಕಿರಣ್ ರಾಜ್ ಅವರಿಗೆ ನಾಯಕಿಯಾಗಿ ಸುರೇಖ ಅಭಿನಯಿಸುತ್ತಿದ್ದಾರೆ‌. ಕ್ರಿಸ್ ರೋಡ್ರಿಗಸ್, ತನೀಶಾ, ವೀಣಾಸುಂದರ್ ಮುಂತಾದವರ ತಾರಾಬಳಗ "ಶೇರ್" ಚಿತ್ರದಲ್ಲಿದೆ.

ಇದನ್ನೂ ಓದಿ-ಎರಡನೇ ಪತ್ನಿ ಜೊತೆ ಹನಿಮೂನ್‌ಗೆ ಬಾಲಿಗೆ ತೆರಳಿದ ನಟ ಆಶಿಷ್ ವಿದ್ಯಾರ್ಥಿ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News