ಹಾಲಿಗೆ ಈ ಒಂದು ವಸ್ತುವನ್ನು ಬೆರೆಸಿ ಕುಡಿದರೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವುದು ಬ್ಲಡ್ ಶುಗರ್

ಮಧುಮೇಹದಲ್ಲಿ ಒಂದೋ ದೇಹದಲ್ಲಿ ಇನ್ಸುಲಿನ್ ಸ್ರವಿಸುವಿಕೆಯು ಸರಿಯಾಗಿ ಆಗುವುದಿಲ್ಲ ಅಥವಾ ನಮ್ಮ ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ.

Written by - Ranjitha R K | Last Updated : Jul 14, 2023, 02:42 PM IST
  • ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ.
  • ಅಗಸೆ ಬೀಜದ ಪುಡಿಯನ್ನು ಹಾಲಿಗೆ ಸೇರಿಸುವ ಪ್ರಯೋಜನಗಳು
  • ಮಧುಮೇಹ ರೋಗಿಗಳು ಆಹಾರ ಮತ್ತು ದೈನಂದಿನ ಚಟುವಟಿಕೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಹಾಲಿಗೆ ಈ ಒಂದು ವಸ್ತುವನ್ನು ಬೆರೆಸಿ ಕುಡಿದರೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವುದು ಬ್ಲಡ್ ಶುಗರ್ title=

Milk and Flaxseed Powder For Diabetes : ಭಾರತ ಸೇರಿದಂತೆ ಪ್ರಪಂಚದಾದ್ಯಂತ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಯಾರಿಗೇ ಆಗಲಿ ಒಮ್ಮೆ ಈ ಕಾಯಿಲೆ ಬಂದರೆ ಸಾಕು ನಂತರ ಜೀವನದುದ್ದಕ್ಕೂ ಈ ಸಮಸ್ಯೆ ಕಾಡುತ್ತಲೇ ಇರುತ್ತದೆ. ಮಧುಮೇಹದಲ್ಲಿ ಒಂದೋ ದೇಹದಲ್ಲಿ ಇನ್ಸುಲಿನ್ ಸ್ರವಿಸುವಿಕೆಯು ಸರಿಯಾಗಿ ಆಗುವುದಿಲ್ಲ ಅಥವಾ ನಮ್ಮ ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ. ಇಂಥಹ ಸ್ಥಿತಿಯಲ್ಲಿ ಮಧುಮೇಹ ರೋಗಿಗಳು ತಮ್ಮ ಆಹಾರ ಮತ್ತು ದೈನಂದಿನ ಚಟುವಟಿಕೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣಕ್ಕೆ ಬರುವುದಿಲ್ಲ. 

 ಅಗಸೆ ಬೀಜದ ಪುಡಿಯನ್ನು ಹಾಲಿಗೆ ಸೇರಿಸುವ ಪ್ರಯೋಜನಗಳು : 
ಮಧುಮೇಹ ರೋಗಿಗಳಿಗೆ ಹಾಲು ಕುಡಿಯಲು ಸಲಹೆ ನೀಡಲಾಗುತ್ತದೆ. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಈ ಕಾರಣದಿಂದ ಹಾಲು ನಮ್ಮ ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ. ನಾವು ಹಾಲಿನಲ್ಲಿ ಅನೇಕ ವಸ್ತುಗಳನ್ನು ಬೆರೆಸಿ ಕುಡಿಯಬಹುದು.

ಇದನ್ನೂ ಓದಿ : ಹಲವು ಗಂಭೀರ ಕಾಯಿಲೆಗಳನ್ನು ತೊಡೆದು ಹಾಕುತ್ತೆ ಹಿಮಾಲಯದಲ್ಲಿ ಕಂಡುಬರುವ ಈ ಗಿಡಮೂಲಿಕೆ!

ಹಾಲು ಮತ್ತು ಅಗಸೆ ಬೀಜದ ಪುಡಿ : 
ಹಾಲು ಮತ್ತು ಅಗಸೆ ಬೀಜದ ಪುಡಿ ಮಧುಮೇಹ ರೋಗಿಗಳಿಗೆ ರಾಮಬಾಣಕ್ಕಿಂತ ಕಡಿಮೆಯಿಲ್ಲ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು  ನಿಯಂತ್ರಿಸುತ್ತದೆ. ಇದನ್ನು ಸೇವಿಸುವುದಕ್ಕೆ ಮುನ್ನ ನಿಮ್ಮ ದೇಹಕ್ಕೆ ಅನುಗುಣವಾಗಿ ಎಷ್ಟು ಪ್ರಮಾಣದ ಅಗಸೆ ಪುಡಿಯನ್ನು ನೀವು ಬಳಸಬಹುದು ಎನ್ನುವುದನ್ನು ತಿಳಿದುಕೊಳ್ಳಬೇಕು. 

ಕೀಲು ನೋವು : 
ವಯಸ್ಸು ಹೆಚ್ಚಾದಂತೆ ಕೀಲು ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಇದಕ್ಕಾಗಿ ಹಾಲು ಕುಡಿಯುವುದು ಬಹಳ ಮುಖ್ಯ. ಏಕೆಂದರೆ ಇದರಲ್ಲಿ ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ಈ ಹಾಲಿಗೆ ಅಗಸೆ ಬೀಜದ ಪುಡಿಗಳನ್ನು ಬೆರೆಸಿದರೆ ಇದರ ಪರಿಣಾಮ ಮತ್ತಷ್ಟು ಹೆಚ್ಚುತ್ತದೆ. 

ಇದನ್ನೂ ಓದಿ : ನೀವು ಮಾಡುವ ಈ ತಪ್ಪಿನಿಂದಲೇ ಮುಖ ತುಂಬಾ ಮೊಡವೆ ಮೂಡುತ್ತದೆ

ಜೀರ್ಣಕ್ರಿಯೆ ಸುಧಾರಿಸುತ್ತದೆ : 
ಹಾಲು ಮತ್ತು ಅಗಸೆ ಬೀಜದ ಪುಡಿಯನ್ನು ಸೇವಿಸುವುದರಿಂದ   ಜೀರ್ಣಾಂಗ ವ್ಯವಸ್ಥೆ ಸುಧಾರಣೆಯಾಗುತ್ತದೆ. ಇದು  ಚಯಾಪಚಯವನ್ನು ಹೆಚ್ಚಿಸುತ್ತದೆ. ಇದರಿಂದ ಗ್ಯಾಸ್, ಅಸಿಡಿಟಿ, ಮಲಬದ್ಧತೆ ಮತ್ತು ಲೂಸ್ ಮೋಷನ್ ಸಮಸ್ಯೆ ದೂರವಾಗುತ್ತದೆ.

ನೋವಿನಿಂದ ಉಪಶಮನ : 
ರಾತ್ರಿ ಮಲಗುವ ಮುನ್ನ  ಅಗಸೆ ಬೀಜದ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿದರೆ, ದೇಹದಲ್ಲಿನ ಅನೇಕ ರೀತಿಯ ನೋವಿನಿಂದ ಪರಿಹಾರ ಸಿಗುತ್ತದೆ. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News