Tea and Coffee Health : ಭಾರತದಲ್ಲಿ ಲಕ್ಷಾಂತರ ಜನರು ತಮ್ಮ ದಿನವನ್ನು ಒಂದು ಕಪ್ ಚಹಾ ಅಥವಾ ಕಾಫಿಯೊಂದಿಗೆ ಪ್ರಾರಂಭಿಸುತ್ತಾರೆ. ನಮ್ಮ ದೇಶದಲ್ಲಿ ಅತಿ ಹೆಚ್ಚು ಚಹಾ ಮತ್ತು ಕಾಫಿ ಪ್ರಿಯರನ್ನು ಹೊಂದಿದೆ. ಒಂದು ಕಪ್ ಬಿಸಿ ಚಹಾ ಅಥವಾ ಕಾಫಿ ಕುಡಿಯುವುದರಿಂದ ದೇಹಕ್ಕೆ ತ್ವರಿತ ಶಕ್ತಿ ದೊರೆಯುತ್ತದೆ. ಟೀ, ಕಾಫಿ ಕುಡಿಯುವ ಅಭ್ಯಾಸವಿರುವವರಿಗೆ ಒಂದು ತಿಂಗಳು ಟೀ, ಕಾಫಿ ಕುಡಿಯಬೇಡಿ ಎಂದು ಹೇಳಿದರೆ ಅವರ ಸ್ಥಿತಿ ಏನಾಗುತ್ತದೆ ಎಂದು ತಿಳಿಯೋಣ ಬನ್ನಿ.
ನೀವು ಚಹಾ ಅಥವಾ ಕಾಫಿ ಪ್ರಿಯರಾಗಿದ್ದು, 30 ದಿನಗಳವರೆಗೆ ಚಹಾ ಅಥವಾ ಕಾಫಿಯನ್ನು ಸೇವಿಸದಿದ್ದರೆ, ನಿಮ್ಮ ದೇಹದಲ್ಲಿ ಮೂರು ಪ್ರಮುಖ ಬದಲಾವಣೆಗಳು ಆಗುತ್ತವೆ. ಕೆಫೀನ್ ದೇಹದಿಂದ ಹೊರ ಹೋದರೆ, ದೇಹದ ಮೇಲೆ ಕೆಲವು ಸಕಾರಾತ್ಮಕ ಬದಲಾವಣೆಗಳಾಗುತ್ತವೆ. ಚಹಾ ಮತ್ತು ಕಾಫಿ ಕುಡಿಯುವುದನ್ನು ನಿಲ್ಲಿಸಿದಾಗ ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?
ಚಹಾ ಅಥವಾ ಕಾಫಿ ಕುಡಿಯುವುದರಿಂದ ಆಯಾಸವನ್ನು ತಕ್ಷಣವೇ ನಿವಾರಿಸುತ್ತದೆ ಏಕೆಂದರೆ ಅದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಒಂದು ತಿಂಗಳ ಕಾಲ ಚಾಕಿ ಕಾಫಿಯ ಮೂಲಕ ಕೆಫೀನ್ ದೇಹವನ್ನು ಪ್ರವೇಶಿಸುವುದನ್ನು ನಿಲ್ಲಿಸಿದರೆ, ಅದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
ಟೀ ಕುಡಿಯುವುದನ್ನು ನಿಲ್ಲಸಿದರೆ ನಿದ್ರೆಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಏಕೆಂದ್ರೆ ನೀವು ಕಾಫಿಯ ಮೂಲಕ ಕೆಫೀನ್ ಸೇವನೆ ಮಾಡುತ್ತೀರ ಇದರಿಂದ ನಿದ್ರೆ ಬರುವುದಿಲ್ಲ. ಒಂದು ವೇಳೆ ಚಹಾ ಅಥವಾ ಕಾಫಿ ಕುಡಿಯುವುದನ್ನು ನಿಲ್ಲಿಸಿದರೆ ಒಂದು ವಾರದಲ್ಲಿ ನಿಮ್ಮ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಮಾಯವಾಗುತ್ತವೆ. ಆರೋಗ್ಯವೂ ಸಹ ಸುಧಾರಿಸುತ್ತದೆ.
ಇದನ್ನೂ ಓದಿ: ಕ್ಯಾನ್ಸರ್ ಅನ್ನು ಸಹ ನಿಯಂತ್ರಿಸುತ್ತದೆ ಬ್ಲಾಕ್ ಕಾಫಿ.! ಈ ಸಮಯದಲ್ಲಿ ಹೀಗೆ ಕುಡಿಯಿರಿ
ಚಹಾ ಅಥವಾ ಕಾಫಿಯಂತಹ ಬಿಸಿ ಪದಾರ್ಥಗಳನ್ನು ಕುಡಿಯುವುದರಿಂದ ಹಲ್ಲುಗಳಿಗೆ ಹಾನಿಯಾಗುತ್ತದೆ. ಹೆಚ್ಚು ಕಾಫಿ ಕುಡಿಯುವವರು ಕ್ರಮೇಣ ತಮ್ಮ ಹಲ್ಲುಗಳ ಬಣ್ಣವನ್ನು ಬದಲಾಯಿಸಬಹುದು. ಅಲ್ಲದೆ ಇದರಲ್ಲಿರುವ ಸಕ್ಕರೆ ಹಲ್ಲುಗಳನ್ನು ದುರ್ಬಲಗೊಳಿಸುತ್ತದೆ. ಚಹಾ ಅಥವಾ ಕಾಫಿ ಕುಡಿಯುವುದನ್ನು ನಿಲ್ಲಿಸಿ ನೋಡಿ ಒಂದು ತಿಂಗಳೊಳಗೆ ನೀವು ನೈಸರ್ಗಿಕವಾಗಿ ನಿಮ್ಮ ಹಲ್ಲುಗಳಲ್ಲಿ ವ್ಯತ್ಯಾಸ ಕಾಣುವಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.