ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗ ಹೊಸ ಅಲೆಯನ್ನೇ ಸೃಷ್ಟಿಸಿದೆ. ಹೊಸ ಹೊಸ ಪ್ರಯೋಗಶೀಲ ಸಿನಿಮಾಗಳು ಸಕ್ಸಸ್ ಕಾಣುತ್ತಿದ್ದು, ಸಿನಿ ಪ್ರೇಮಿಗಳಿಗೆ ಭರ್ಜರಿ ಮನರಂಜನೆ ನೀಡುತ್ತಿವೆ. ಬಾಕ್ಸ್ ಆಫೀಸ್ನಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಕನ್ನಡ ಸಿನಿಮಾಗಳು ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿವೆ. ಕನ್ನಡ ಚಿತ್ರಗಳು ಇಂದು ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶ-ವಿದೇಶಗಳಲ್ಲಿ ಸಖತ್ ಸೌಂಡ್ ಮಾಡುತ್ತಿವೆ. ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಬದಲಾಗಿರುವ ಕನ್ನಡ ಸಿನಿಮಾಗಳು ಅದ್ಭುತಗಳನ್ನು ಸೃಷ್ಟಿಸುತ್ತಿವೆ.
ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್: ಅಧ್ಯಾಯ 1 ಮತ್ತು 2, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ, ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಮತ್ತು ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿಯಂತಹ ಪ್ಯಾನ್-ಇಂಡಿಯಾ ಚಲನಚಿತ್ರಗಳು ಭರ್ಜರಿ ಯಶಸ್ಸು ಕಂಡಿದ್ದು, ಭಾರತೀಯ ಚಿತ್ರರಂಗವೇ ಕನ್ನಡ ಸಿನಿಮಾಗಳತ್ತ ತಿರುಗಿ ನೋಡುವಂತೆ ಮಾಡಿವೆ. ಹೀಗಾಗಿ ಸ್ಯಾಂಡಲ್ವುಡ್ ಉದ್ಯಮವು ಪ್ರಪಂಚದಾದ್ಯಂತದ ಚಲನಚಿತ್ರ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಗಳಿಸಿದೆ. ಸ್ಯಾಂಡಲ್ವುಡ್ನ ಹೈ-ಪ್ರೊಫೈಲ್ ಸೆಲೆಬ್ರಿಟಿಗಳು ಪ್ರತಿ ಚಿತ್ರಕ್ಕೂ ಉತ್ತಮ ಸಂಭಾವನೆ ಪಡೆಯುತ್ತಿದ್ದಾರೆ.
ಮೊದಲು ಕಡಿಮೆ ಸಂಭಾವಣೆ ಪಡೆಯುತ್ತಿದ್ದ ನಟರು ಇದೀಗ ಪ್ಯಾನ್ ಇಂಡಿಯಾ ಸ್ಟಾರ್ಗಳಾಗಿ ಮಿಂಚುತ್ತಿದ್ದು, ಪ್ರತಿ ಚಿತ್ರಕ್ಕೆ ಕೋಟಿ ಕೋಟಿ ಸಂಭಾವಣೆ ಪಡೆಯುತ್ತಿದ್ದಾರೆ. 2023ರಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ಕನ್ನಡ ನಟರ ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: Bhagya Lakshmi: 'ಭಾಗ್ಯಲಕ್ಷ್ಮಿ' ಸೀರಿಯಲ್ ನಟನ ಕಾರು ಅಪಘಾತ
1) ರಾಕಿಂಗ್ ಸ್ಟಾರ್ ಯಶ್
ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಯಾವುದೇ ಪರಿಚಯದ ಅಗತ್ಯವಿಲ್ಲ. ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್ ಆಗಿ ಅಬ್ಬರಿಸಿದ ಯಶ್ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಕನ್ನಡ ಚಿತ್ರರಂಗದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ನಟ ಅನ್ನೋ ಹೆಗ್ಗಳಿಕೆ ಹೊಂದಿದ್ದಾರೆ. ಯಶ್ ಪ್ರತಿ ಸಿನಿಮಾಗೆ ಇದೀಗ 50-100 ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ.
2) ಚಾಲೇಜಿಂಗ್ ಸ್ಟಾರ್ ದರ್ಶನ್
‘ಡಿ ಬಾಸ್’ ಖ್ಯಾತಿಯ ನಟ ಚಾಲೇಜಿಂಗ್ ಸ್ಟಾರ್ ದರ್ಶನ್ ಕೂಡ ಮಾಸ್ ಸಿನಿಮಾಗಳಿಗೆ ಹೆಸರುವಾಸಿ. ಇತ್ತೀಚೆಗೆ ‘ಕ್ರಾಂತಿ’ ಸಿನಿಮಾದಲ್ಲಿ ಮಿಂಚಿದ್ದ ದರ್ಶನ್ ಅತಿಹೆಚ್ಚಿನ ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ಪ್ರತಿ ಸಿನಿಮಾಗೆ ಅವರು 22-26 ಕೋಟಿ ರೂ. ಪಡೆಯುತ್ತಾರಂತೆ.
3) ಕಿಚ್ಚ ಸುದೀಪ್
ಅಭಿನಯ ಚಕ್ರವರ್ತಿ, ಕನ್ನಡ ಚಿತ್ರರಂಗದ ಬಾದ್ಶಾ ಖ್ಯಾತಿಯ ನಟ ಕಿಚ್ಚ ಸುದೀಪ್ ಸ್ಯಾಂಡಲ್ವುಡ್ನಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ‘ವಿಕ್ರಾಂತ್ ರೋಣ’ದಲ್ಲಿ ಮಿಂಚಿದ್ದ ಸುದೀಪ್ ಬಳಿಕ ‘ಕಬ್ಜಾ’ದಲ್ಲಿ ಸದ್ದು ಮಾಡಿದ್ದರು. ಇವರು ಪ್ರತಿ ಸಿನಿಮಾಗೆ ಸುಮಾರು 20-25 ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ.
4) ರಿಯಲ್ ಸ್ಟಾರ್ ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ನಟನಷ್ಟೇ ಅಲ್ಲ, ನಿರ್ದೇಶಕ, ನಿರ್ಮಾಪಕ ಮತ್ತು ಕಥೆಗಾರ ಕೂಡ ಆಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ನಟನೆ, ನಿರ್ದೇಶನದ ಮೂಲಕ ಹೆಸರಾಗಿರುವ ಈ ಬುದ್ಧಿವಂತ ಪ್ರತಿ ಚಿತ್ರಕ್ಕೆ 10-15 ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ.
5) ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ
‘ಕಾಂತಾರ’ ಬ್ಲಾಕ್ಬಸ್ಟರ್ ಸಿನಿಮಾ ಮೂಲಕ ನಟ-ನಿರ್ದೇಶಕ ರಿಶಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಅತ್ಯಂತ ಕಡಿಮೆ ಬಜೆಟ್ನಲ್ಲಿ ನಿರ್ಮಾಣವಾದ ‘ಕಾಂತಾರ’ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತ್ತು. ಈ ಚಿತ್ರಕ್ಕೆ ರಿಷಬ್ ಶೆಟ್ಟಿ 10 ಕೋಟಿ ರೂ. ಸಂಭಾವನೆ ಪಡೆದಿದ್ದರಂತೆ. ಈ ಚಿತ್ರದ ಯಶಸ್ಸಿನ ನಂತರ ಸಂಭಾವನೆ ಹೆಚ್ಚಿಸಿಕೊಂಡಿರುವ ರಿಷಬ್ ಶೆಟ್ಟಿ ಪ್ರತಿ ಚಿತ್ರಕ್ಕೆ 10-15 ಕೋಟಿ ರೂ. ಚಾರ್ಜ್ ಮಾಡ್ತಾರಂತೆ.
6) ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ
ಸ್ಯಾಂಡಲ್ವುಡ್ನ ಯಶಸ್ವಿ ನಟ-ನಿರ್ದೇಶಕ ಮತ್ತು ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ರಕ್ಷಿತ್ ಶೆಟ್ಟಿ ಪ್ರಯೋಗಶೀಲ ಸಿನಿಮಾಗಳ ಮೂಲಕ ಸದ್ದು ಮಾಡುತ್ತಿದ್ದಾರೆ. 777 ಚಾರ್ಲಿ ಬಳಿಕ ರಕ್ಷಿತ್ ಶೆಟ್ಟಿ ಪ್ರತಿಚಿತ್ರಕ್ಕೆ 5-10 ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ.
7) ಹ್ಯಾಟ್ರಿಕ್ ಹಿರೋ ಶಿವರಾಜ್ಕುಮಾರ್
ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹಿರೋ ಖ್ಯಾತಿಯ ಶಿವರಾಜಕುಮಾರ್ ಕೂಡ ಅತಿಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ಪ್ರತಿ ಚಿತ್ರಕ್ಕೆ ಶಿವಣ್ಣ 6 ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ.
8) ಶ್ರೀ ಮುರಳಿ
ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ದೇಶನದ ‘ಉಗ್ರಂ’ ಮೂಲಕ ಸಖತ್ ಸೌಂಡ್ ಮಾಡಿದ್ದ ಶ್ರೀ ಮುರಳಿ ಇದೀಗ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಅವರು ಪ್ರತಿ ಚಿತ್ರಕ್ಕೆ 4-6 ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ.
9) ಗೋಲ್ಡನ್ ಸ್ಟಾರ್ ಗಣೇಶ್
ಗೋಲ್ಡನ್ ಸ್ಟಾರ್ ಖ್ಯಾತಿಯ ಗಣೇಶ್ ಮುಂಗಾರು ಮಳೆ, ಚೆಲುವಿನ ಚಿತ್ತಾರ, ಗಾಳಿಪಟ ಸೇರಿದಂತೆ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ಗಣೇಶ್ ಪ್ರತಿ ಚಿತ್ರಕ್ಕೆ 3-6 ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ.
10) ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ
ಆ್ಯಕ್ಷನ್ ಪ್ರಿನ್ಸ್ ಖ್ಯಾತಿಯ ಧ್ರುವ ಸರ್ಜಾ ಇತ್ತೀಚೆಗೆ ‘ಪೊಗರು’ ಸೂಪರ್ ಹಿಟ್ ಸಿನಿಮಾ ಮೂಲಕ ಸದ್ದು ಮಾಡಿದ್ದರು. 34 ವರ್ಷ ವಯಸ್ಸಿನ ಧ್ರುವ ಸರ್ಜಾ ಪ್ರಸ್ತುತ ಮಾರ್ಟಿನ್ ಮತ್ತು ‘ಕೆಡಿ: ದಿ ಡೆವಿಲ್’ ಪ್ಯಾನ್-ಇಂಡಿಯನ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಟ ಪ್ರತಿ ಚಿತ್ರಕ್ಕೆ 3-5 ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ.
ಇದನ್ನೂ ಓದಿ: ಸಂಕಷ್ಟದಲ್ಲಿ ರಜನಿ 'ಜೈಲರ್'.. ಟೈಟಲ್ ಬದಲಾಯಿಸಲು ಕೋರ್ಟ್ ಮೊರೆ ಹೋದ ಡೈರೆಕ್ಟರ್!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.