ಬ್ರಿಟಿಷ್ ನಟಿ ಮಿಯಾ-ಲೆಸಿಯಾ ನೇಲರ್ ಸಾವು

ಬ್ರಿಟಿಶ್ ನ ಉದಯೋನ್ಮುಖ ನಟಿ ಮ್ಯಾ-ಲೆಸಿಯಾ ನೇಲರ್ ತಮ್ಮ 16ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ.

Last Updated : Apr 18, 2019, 08:03 PM IST
ಬ್ರಿಟಿಷ್ ನಟಿ ಮಿಯಾ-ಲೆಸಿಯಾ ನೇಲರ್ ಸಾವು  title=
file photo

ನವದೆಹಲಿ: ಬ್ರಿಟಿಶ್ ನ ಉದಯೋನ್ಮುಖ ನಟಿ ಮ್ಯಾ-ಲೆಸಿಯಾ ನೇಲರ್ ತಮ್ಮ 16ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ.ಜನಪ್ರಿಯ ಮಕ್ಕಳ ಸರಣಿ ಶೋ ನೆಲರ್ ಮಿಲ್ಲಿ ಇನ್ಬಿಟ್ವೀನ್ ಮತ್ತು ಆಲ್ಮೋಸ್ಟ್ ನೆವರ್ ನಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು.

ಈಗ ಬಿಬಿಸಿ ಚೈಲ್ಡ್ರನ್ ನ ಡೈರೆಕ್ಟರ್ ಅಲಿಸ್ ವೆಬ್ ಸಂತಾಪ ವ್ಯಕ್ತಪಡಿಸಿ "ಮಿಯಾ ಸಾವಿನ ಸುದ್ದಿ ತಮಗೆ ದುಃಖ ತಂದಿದೆ. ಅವರು ನಮ್ಮ ಶೋ ಮಿಲ್ಲಿ ಇಬೇಟ್ವೀನ್ ಮತ್ತು "ಆಲ್ಮೋಸ್ಟ್ ನೆವರ್  ನಲ್ಲಿ ಇನ್ನು ಮುಂದೆ ಇರುವುದಿಲ್ಲವೆನ್ನುವುದು ನಿಜಕ್ಕೂ ಯೋಚಿಸಲು ಅಸಾಧ್ಯವಾಗಿದೆ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. 

"ನಮ್ಮ ಪ್ರೇಕ್ಷಕರ ಮಧ್ಯ ನರ್ತಕಿ ಮತ್ತು ಗಾಯಕಿಯಾಗಿ ಅವರು ಜನಪ್ರೀಯರಾಗಿದ್ದ ಅವರು ಯುವ ಅಭಿಮಾನಿಗಳಿಗೆ ಆದರ್ಶಪ್ರಾಯರಾಗಿದ್ದರು ಎಂದು ವೆಬ್ ಹೇಳಿದ್ದಾರೆ. ಸುದ್ದಿ ಮೂಲಗಳ ಪ್ರಕಾರ ಅವರು ಏಪ್ರಿಲ್ 7 ರಂದೇ ಮೃತಪಟ್ಟಿದ್ದರು ಎನ್ನಲಾಗಿದೆ.ಆದರೆ ಅವರ ಸಾವು ಇನ್ನು ನಿಗೂಢವಾಗಿದೆ.ಬುಧುವಾರವಷ್ಟೇ ಅವರ ಸಾವಿನ ಸುದ್ದಿಯನ್ನು ಪ್ರಕಟಿಸಲಾಗಿತ್ತು ಎನ್ನಲಾಗಿದೆ 
 

Trending News