Rahu gochara effect : ರಾಹು ಒಂದೂವರೆ ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಿಸುತ್ತಾನೆ. ಹಾಗಾಗಿ ಇನ್ನು ಮುಂದಿನ ಒಂದೂವರೆ ವರ್ಷದವರೆಗೆ ಈ ರಾಶಿಯವರ ಜೀವನದಲ್ಲಿ ಕಷ್ಟಗಳು ದೂರ ಸರಿಯಲಿವೆ.
ಬೆಂಗಳೂರು : ರಾಹು ಪ್ರತಿಯೊಬ್ಬರ ಜೀವನದಲ್ಲಿ ಗರಿಷ್ಟ ಪರಿಣಾಮವನ್ನು ಉಂಟು ಮಾಡುತ್ತಾನೆ. ಯಾವ ರಾಶಿಗೆ ಯಾವ ಗ್ರಹದ ಅಧಿಪತ್ಯ ಎನ್ನುವ ಆಧಾರದ ಮೇಲೆ ರಾಹು ತನ್ನ ಫಲವನ್ನು ನೀಡುತ್ತಾನೆ. ಜ್ಯೋತಿಷ್ಯದಲ್ಲಿ, ರಾಹು ಗ್ರಹದ ರಾಶಿ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಅಕ್ಟೋಬರ್ 30 ರಂದು ಮಧ್ಯಾಹ್ನ 12.30 ಕ್ಕೆ ರಾಹು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರೊಂದೊಂದಿಗೆ 5 ರಾಶಿಯವರಿಗೆ ಸಿರಿ ಸಂಪತ್ತು ಕೂಡಾ ಕರುಣಿಸಲಿದ್ದಾನೆ. ಈ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ. ಅಂದ ಹಾಗೆ ರಾಹು ಒಂದೂವರೆ ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಿಸುತ್ತಾನೆ. ಹಾಗಾಗಿ ಇನ್ನು ಮುಂದಿನ ಒಂದೂವರೆ ವರ್ಷದವರೆಗೆ ಈ ರಾಶಿಯವರ ಜೀವನದಲ್ಲಿ ಕಷ್ಟಗಳು ದೂರ ಸರಿಯಲಿವೆ.
ಮೀನ ರಾಶಿಯಲ್ಲಿ ರಾಹುವಿನ ಸಂಚಾರವು ಮೇಷ ರಾಶಿಯವರಿಗೆ ಪ್ರಯೋಜನವನ್ನು ನೀಡುತ್ತದೆ. ಮೇಷ ರಾಶಿಯ ರಾಹು ಸಂಕ್ರಮಣದ ಪರಿಣಾಮ, ಹಣಕಾಸಿನ ಲಾಭವನ್ನು ಪಡೆಯುತ್ತಾರೆ. ಈ ಸಮಯದಲ್ಲಿ, ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಉದ್ಯೋಗದಲ್ಲಿ ಪ್ರಗತಿಯ ಜೊತೆಗೆ ಆದಾಯವೂ ಹೆಚ್ಚಾಗುತ್ತದೆ.
ಮೀನ ರಾಶಿಯಲ್ಲಿ ರಾಹುವಿನ ಸಂಚಾರವು ವೃಷಭ ರಾಶಿಯವರಿಗೆ ಆರ್ಥಿಕ ಲಾಭವನ್ನು ನೀಡುತ್ತದೆ. ರಾಹು ಸಂಕ್ರಮಣದಿಂದ ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ವಿದೇಶ ಪ್ರವಾಸದ ಸಾಧ್ಯತೆಗಳೂ ಕಂಡುಬರುತ್ತಿವೆ. ವೃತ್ತಿ ಜೀವನದಲ್ಲಿ ಹೊಸ ಆಯಾಮ ದೊರೆಯಬಹುದು.
ಮೀನ ರಾಶಿಯಲ್ಲಿ ರಾಹುವಿನ ಸಂಚಾರವು ಕರ್ಕಾಟಕ ರಾಶಿಯವರಿಗೆ ಆರ್ಥಿಕ ಲಾಭವನ್ನು ತರುತ್ತದೆ. ವೃತ್ತಿಜೀವನದಲ್ಲಿ ಹೊಸ ಎತ್ತರಕ್ಕೆ ಏರುವ ಅವಕಾಶ ಸಿಗುವುದು. ಉದ್ಯೋಗವೂ ಬದಲಾಗಬಹುದು. ಅದರೊಂದಿಗೆ ಹೆಚ್ಚಿನ ಜವಾಬ್ದಾರಿಯೂ ಹೆಗಲೇರುತ್ತದೆ.
ರಾಹುವಿನ ಸಂಚಾರದಿಂದ ತುಲಾ ರಾಶಿಯವರ ಕಷ್ಟಗಳೆಲ್ಲಾ ಕಳೆಯುವುದು. ಜೀವನದಲ್ಲಿ ಸಿರಿ ಸಂಪತ್ತು ತುಂಬುವುದು. ಬಹುಕಾಲದಿಂದ ಪೂರ್ಣಗೊಳ್ಳದೆ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಎಲ್ಲಾ ಕಡೆಯಿಂದ ಹಣ ಹರಿದು ಬರುತ್ತದೆ. ಕಚೇರಿಯಲ್ಲಿ ಉತ್ತಮ ಯಶಸ್ಸು ಸಿಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.
ಅಕ್ಟೋಬರ್ 30 ರಂದು ರಾಹು ಮೇಷ ರಾಶಿಯಿಂದ ಮೀನ ರಾಶಿಗೆ ಸಂಚಾರ ಬೆಳೆಸಲಿದ್ದಾನೆ. ಮೀನ ರಾಶಿಯವರಿಗೆ ರಾಹುವಿನ ಆಗಮನದಿಂದ ಹೆಚ್ಚಿನ ಲಾಭವಾಗಲಿದೆ. ಈ ಸಮಯದಲ್ಲಿ ಆದಾಯವೂ ಹೆಚ್ಚಾಗುತ್ತದೆ. ದೀರ್ಘ ಕಾಲದಿಂದ ಸಾಲವಾಗಿ ಕೊಟ್ಟ ಹಣ ಮರಳಿ ಸಿಗುತ್ತದೆ.