3 ವರ್ಷ ಪ್ರೀತಿಸಿ ಕೈಕೊಟ್ಟ ಯುವತಿ : ಮನನೊಂದು ಯುವಕ ಆತ್ಮಹತ್ಯೆ

ಯುವತಿಯನ್ನು ಕನ್ವಿನ್ಸ್ ಮಾಡೋಕೆ ಸಾಕಷ್ಟು ಪ್ರಯತ್ನಪಟ್ಟಿದ್ದ ಆದರೂ ಯುವತಿ ಮಾತ್ರ ಡೋಂಟ್ ಕೇರ್ ಅನ್ನೋ ರೀತಿ ವರ್ತಿಸೋಕೆ ಶುರು ಮಾಡಿದ್ಲು. ಈ ಮಧ್ಯೆ ಯುವತಿ ಮತ್ತೊಬ್ಬ ಹುಡುಗನ ಜೊತೆಗೆ ಓಡಾಡ್ತಿದ್ದಾಳೆ ಅನ್ನೋ ವಿಚಾರ ತಿಳಿದ ಯುವಕ ನವೀನ್, ಮತ್ತಷ್ಟು ನೊಂದಿದ್ದ.

Written by - VISHWANATH HARIHARA | Edited by - Krishna N K | Last Updated : Jul 24, 2023, 06:50 PM IST
  • ಸಿಲಿಕಾನ್ ಸಿಟಿಯಲ್ಲಿ ಲವ್ ದೋಖಾ ಪ್ರಕರಣ ವರದಿಯಾಗಿದೆ.
  • 3 ವರ್ಷ ಪ್ರೀತಿಸಿದ್ದ ಯುವತಿ ಕೈಕೊಟ್ಟಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ.
  • ಹುಡುಗಿ ಕೈಕೊಟ್ಲು ಅಂತಾ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
3 ವರ್ಷ ಪ್ರೀತಿಸಿ ಕೈಕೊಟ್ಟ ಯುವತಿ : ಮನನೊಂದು ಯುವಕ ಆತ್ಮಹತ್ಯೆ title=

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಲವ್ ದೋಖಾ ಪ್ರಕರಣ ವರದಿಯಾಗಿದೆ. ಪ್ರೀತಿಸಿದ ಹುಡುಗಿ ಕೈಕೊಟ್ಲು ಅಂತಾ ಯುವಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಹಾಲಕ್ಷ್ಮಿ ಲೇಔಟ್ ನ ಎಸ್ ಜೆ ನಗರದಲ್ಲಿ  ಘಟನೆ ನಡೆದಿದ್ದು, ಭಗ್ನ ಪ್ರೇಮಿ ನವೀನ್ ನೇಣಿಗೆ ಶರಣಾದವನು.

ಚಾಮರಾಜನಗರ ಮೂಲದ ನವೀನ್ ಬದುಕೋಕೆ ಕುಟುಂಬದವರೇ ಬಾಳೆ ಕಾಯಿ ಮಂಡಿ ಹಾಕಿಕೊಟ್ಟಿದ್ರು. ಈ ವೇಳೆ ಯುವತಿಯೊಬ್ಬಳು ಪರಿಚಯವಾಗಿ ಇಬ್ಬರ ಮಧ್ಯೆ ಪ್ರೀತಿ ಶುರುವಾಗಿತ್ತು. ಇಬ್ಬರು ಪರಸ್ಪರ ಕೈ ಕೈ ಹಿಡಿದು ಸುತ್ತಾಡಿ ಮದುವೆ ಕನಸು ಕೂಡ ಕಂಡಿದ್ರು. ಈ ವಿಚಾರವನ್ನು ಮೃತ ನವೀನ್ ಮನೆಯಲ್ಲೂ ತಿಳಿಸಿದ್ದ. ಆದರೆ ಯುವತಿ ಇತ್ತೀಚೆಗೆ ಪ್ರಿಯಕರ ನವೀನ್ ನನ್ನ ಅವಾಯ್ಡ್ ಮಾಡೋಕೆ ಶುರುಮಾಡಿದ್ಲು.

ಇದನ್ನೂ ಓದಿ: ತನ್ನ ಪ್ರಚಾರಕ್ಕೆ ಜನರ ಬೆವರಿನ ಹಣ ಬಳಸುವ ಮೋದಿಗೆ ಪ್ರಧಾನಿ ಎನ್ನಬೇಕೋ, ಪ್ರಚಾರಮಂತ್ರಿ ಎನ್ನಬೇಕೋ?: ಕಾಂಗ್ರೆಸ್

ಇದರಿಂದ ನೊಂದ ನವೀನ್, ಯುವತಿಯನ್ನು ಕನ್ವಿನ್ಸ್ ಮಾಡೋಕೆ ಸಾಕಷ್ಟು ಪ್ರಯತ್ನಪಟ್ಟಿದ್ದ ಆದರೂ ಯುವತಿ ಮಾತ್ರ ಡೋಂಟ್ ಕೇರ್ ಅನ್ನೋ ರೀತಿ ವರ್ತಿಸೋಕೆ ಶುರು ಮಾಡಿದ್ಲು. ಈ ಮಧ್ಯೆ ಯುವತಿ ಮತ್ತೊಬ್ಬ ಹುಡುಗನ ಜೊತೆಗೆ ಓಡಾಡ್ತಿದ್ದಾಳೆ ಅನ್ನೋ ವಿಚಾರ ತಿಳಿದ ಯುವಕ ನವೀನ್, ಮತ್ತಷ್ಟು ನೊಂದಿದ್ದ. ಮದುವೆ ಆಗೋದಾಗಿ ಹೇಳಿ ಮೋಸ ಮಾಡಿದ್ದಾಳೆ ಅಂತಾ ಯುವತಿ‌ ಕಡೆಯವರಿಗು ರಾಜಿ ಸಂಧಾನಕ್ಕೆ ಒತ್ತಾಯಿಸಿದ್ನಂತೆ.

ಈ ಬಗ್ಗೆ ಮನೆಯವರು ಕೂಡ ಬುದ್ದಿ ಹೇಳಿದ್ರೂ, ಏನೂ ಉಪಯೋಗವಾಗಿರಲಿಲ್ಲ. ಕೊನೆಗೂ ಪ್ರೀತಿಸಿದ ಹುಡುಗಿ ಕೈಕೊಟ್ಲು ಅಂತಾ ನೊಂದ ಪ್ರಿಯಕರ ನವೀನ್ ಕೊನೆಯದಾಗಿ ನಿನ್ನೆ ಸಂಜೆ ಯುವತಿಗೆ ಕರೆ ಮಾಡಿ ಆತ್ಮಹತ್ಯೆ ಮಾಡ್ಕೊತಿದ್ದೀನಿ ಅಂತಾ ಪೋನ್ ಕಟ್ ಮಾಡಿದ್ದ. ಇದರಿಂದ ಗಾಬರಿಯಾದ ಯುವತಿ ನೂರಕ್ಕೂ ಹೆಚ್ಚು ಬಾರಿ ವಾಪಸ್ ಕರೆ ಮಾಡಿದ್ದಾಳೆ.

ಇದನ್ನೂ ಓದಿ: Karnataka Dam Water Level: ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ

ಆದ್ರೂ ನವೀನ್ ಪೋನ್ ರಿಸಿವ್ ಮಾಡಿಲ್ಲ. ಬದಲಾಗಿ ಇಬ್ಬರ ಪ್ರೀತಿ, ಹುಡುಗಿ ಮದುವೆ ಆಗೋದಾಗಿ ಹೇಗೆ ಮೋಸ ಮಾಡಿದ್ಲು ಅನ್ನೋದನ್ನು ಡಿಟೇಲ್ ಆಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ. ಇತ್ತೀಚಿಗೆ ಲವ್ ಬ್ರೇಕಪ್ ಸ್ಟೋರಿಗಳು, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಫಾಸ್ಟ್ ಪುಡ್ ಲವ್ ಸ್ಟೋರಿಗಳ ಬಗ್ಗೆ ಯುವಕ-ಯುವತಿಯರು ಎಚ್ಚರಿಕೆ ವಹಸಿಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News