Weight Loss Habits : ನಮ್ಮಲ್ಲಿ ಹಲವರು ತೂಕ ಹೆಚ್ಚಳದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ತೂಕ ಇಳಿಸಿಕೊಳ್ಳಲು ನಾವು ಹಲವಾರು ಮಾರ್ಗಗಳನ್ನು ಪ್ರಯತ್ನಿಸುತ್ತೇವೆ. ಆದರೆ ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದರೂ ಬಯಸಿದ ಫಲಿತಾಂಶ ಸಿಗುವುದಿಲ್ಲ. ಆದರೆ ವ್ಯಾಯಾಮದ ಜೊತೆಗೆ ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕವೂ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು. ಅಂತಹ ಒಂದು ನೈಸರ್ಗಿಕ ಮಾರ್ಗ ಇಲ್ಲಿದೆ.
ತೂಕ ಹೆಚ್ಚಾಗುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಬೊಜ್ಜು ಇರುವ ವ್ಯಕ್ತಿ ಖಿನ್ನತೆಗೂ ಒಳಗಾಗುತ್ತಾನೆ. ಅನೇಕ ಜನರು ತಮ್ಮ ಸ್ಥೂಲಕಾಯತೆಯಿಂದ ಸಾಮಾಜಿಕ ಜೀವನದಿಂದಲೇ ದೂರ ಉಳಿದು ಬಿಡುತ್ತಾರೆ. ದೇಹ ತೂಕ ಕಡಿಮೆ ಮಾಡಿಕೊಳ್ಳಲು ಸಾಮಾನ್ಯವಾಗಿ ಅನುಸರಿಸುವ ವಿಧಾನವೆಂದರೆ ಜಿಮ್ಗೆ ಹೋಗುವುದು ಮತ್ತು ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸುವುದು. ಆದರೆ ಇಷ್ಟು ಮಾಡಿದರೆ ದೇಹ ತೂಕ ಕಳೆದುಕೊಳ್ಳುತ್ತದೆ ಎಂದು ನಿಖರವಾಗಿ ಹೇಳುವುದು ಸಾಧ್ಯವಿಲ್ಲ. ಕೆಲವು ಸರಳ ನೈಸರ್ಗಿಕ ವಿಧಾನಗಳ ಮೂಲಕ ತೂಕವನ್ನು ಕಳೆದುಕೊಳ್ಳಬಹುದು.
ಇದನ್ನೂ ಓದಿ : ಅಳು ಬಂದಾಗ ಅತ್ತು ಬಿಡಿ ! ಕಣ್ಣೀರು ಹೊರ ಹಾಕುವುದರಿಂದಲೂ ಆರೋಗ್ಯಕ್ಕಿದೆ ಪ್ರಯೋಜನ
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮತ್ತು ತೂಕವನ್ನು ಕಡಿಮೆ ಮಾಡಲು ಕೆಲವು ಸರಳ ಮತ್ತು ಪರಿಣಾಮಕಾರಿ ಮಾರ್ಗಗಳಿವೆ. ಇವುಗಳ ಗಮನಹರಿಸಿ.
ವಾಕ್ ಮಾಡಲು ಪ್ರಾರಂಭಿಸಿ :
ತೂಕವನ್ನು ಕಳೆದುಕೊಳ್ಳುವ ಪ್ರಮುಖ ವಿಧಾನಗಳಲ್ಲಿ ವಾಕಿಂಗ್ ಒಂದಾಗಿದೆ. ನಿತ್ಯ 40 ನಿಮಿಷಗಳ ವಾಕ್ ಬಹಳ ಮುಖ್ಯವಾಗಿರುತ್ತದೆ. ವಾಕಿಂಗ್ ಅನೇಕ ಬಾರಿ ಕೊಬ್ಬನ್ನು ಕಡಿಮೆ ಮಾಡಬಹುದು. ನಿಯಮಿತವಾಗಿ 40 ನಿಮಿಷಗಳ ವಾಕ್ ಮಾಡುತ್ತಾ ಬಂದರೆ ಅದರ ಪರಿಣಾಮ ಖಂಡಿತವಾಗಿಯೂ ದೇಹ ತೂಕದ ಮೇಲೆ ಕಾಣಿಸುತ್ತದೆ. ಪ್ರತಿದಿನ ವಾಕ್ ಮಾಡುವುದರಿಂದ ದೇಹವು ಸರಿಯಾದ ಶೇಪ್ ಗೆ ಬರಲು ಆರಂಭಿಸುತ್ತದೆ. ಆದ್ದರಿಂದ ವಾಕಿಂಗ್ ನಿಮ್ಮ ದಿನಚರಿಯಲ್ಲಿ ಇರಲಿ.
ಬೆಚ್ಚಗಿನ ನೀರು ಕುಡಿಯುವುದು :
ಬೆಚ್ಚಗಿನ ಅಥವಾ ಉಗುರುಬೆಚ್ಚನೆಯ ನೀರನ್ನು ಕುಡಿಯುವುದು ಹೊಟ್ಟೆಯ ಕೊಬ್ಬಿನ ಮೇಲೆ ಪರಿಣಾಮ ಬೀರುತ್ತದೆ. ಆದರೆ ನೀರು ಯಾವಾಗ ಕುಡಿಯಬೇಕು ಎನ್ನುವುದು ಕೂಡಾ ಇಲ್ಲಿ ಬಹಳ ಮುಖ್ಯ. ಏನನ್ನಾದರೂ ತಿಂದ 20 ನಿಮಿಷಗಳ ನಂತರ ಬೆಚ್ಚಗಿನ ನೀರನ್ನು ಕುಡಿದರೆ, ಅದರ ಪರಿಣಾಮವು ಹೊಟ್ಟೆಯ ಕೊಬ್ಬಿನ ಮೇಲೆ ವೇಗವಾಗಿ ಕಂಡುಬರುತ್ತದೆ.
ಇದನ್ನೂ ಓದಿ : ಕೆಟ್ಟ ಕೊಲೆಸ್ಟ್ರಾಲ್ ನಿಂದ ಸಂಭವಿಸುವ ಕಾಯಿಲೆಗಳಿಂದ ಪಾರಾಗಲು ನಿತ್ಯ 3 ಬಾರಿ 1 ಚಮಚೆ ಈ ಸೂಪರ್ ಫುಡ್ ಸೇವಿಸಿ!
ಫೈಬರ್ ಭರಿತ ಆಹಾರಗಳನ್ನು ಸೇವಿಸಿ :
ಆಹಾರದಲ್ಲಿ ಫೈಬರ್ ಪ್ರಮಾಣವನ್ನು ಹೆಚ್ಚಿಸಿಕೊಳ್ಳಿ. ನಾರಿನಂಶವಿರುವ ಹಣ್ಣುಗಳು, ತರಕಾರಿಗಳು ಮತ್ತು ಇತರ ಆಹಾರಗಳು ಹೊಟ್ಟೆಯನ್ನು ಹೆಚ್ಚು ಕಾಲ ತುಂಬಿರುವಂತೆ ಮಾಡುತ್ತದೆ. ಇದು ಆಹಾರ ಸೇವನೆಯನ್ನು ಕಡಿಮೆ ಮಾಡಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ದಿನಕ್ಕೆ ಕನಿಷ್ಠ ಒಂದು ಹಣ್ಣನ್ನು ಸೇವಿಸಬೇಕು :
ದಿನಕ್ಕೆ ಒಮ್ಮೆಯಾದರೂ ಕೆಲವು ಕಾಲೋಚಿತ ಹಣ್ಣುಗಳನ್ನು ತಿನ್ನಲು ಪ್ರಯತ್ನಿಸಿ. ಸೇಬು, ಪೇರಳೆ ವರ್ಷವಿಡೀ ಲಭ್ಯವಿರುತ್ತವೆ. ಈ ಹಣ್ಣುಗಳು ಫೈಬರ್ನ ಉತ್ತಮ ಮೂಲವಾಗಿದೆ. ಹಣ್ಣುಗಳನ್ನು ತಿನ್ನಬಹುದು.
ನಿಮ್ಮ ಆಹಾರದಲ್ಲಿ ಪ್ರೋಟೀನ್ ಸೇರಿಸಿ :
ಕೊಬ್ಬನ್ನು ಅನ್ನು ಕಡಿಮೆ ಮಾಡಲು ಪ್ರೋಟೀನ್ ಪರಿಣಾಮಕಾರಿಯಾಗಿದೆ. ಇದರಿಂದ ದೇಹಕ್ಕೂ ಹೆಚ್ಚಿನ ಶಕ್ತಿ ದೊರೆಯುತ್ತದೆ ಮತ್ತು ಸ್ನಾಯುಗಳು ಸಹ ಬಲಗೊಳ್ಳುತ್ತವೆ. ಇದಕ್ಕಾಗಿ ಮೊಟ್ಟೆ, ಹಾಲು ಮತ್ತು ಒಣ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು.
ಇದನ್ನೂ ಓದಿ : ಮಧುಮೇಹಿಗಳಿಗೆ ಮಶ್ರೂಮ್ ವರದಾನವಿದ್ದಂತೆ...ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ..!
ಸಾಕಷ್ಟು ನಿದ್ರೆ :
ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ತೂಕವನ್ನು ಕಳೆದುಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾನೆ. ಆದರೂ ತೂಕ ಕಡಿಮೆಯಾಗುವುದಿಲ್ಲ. ಇದಕ್ಕೆ ಒಂದು ಕಾರಣವು ಸಾಕಷ್ಟು ನಿದ್ರೆಯಾಗಿರಬಹುದು. ಪ್ರತಿಯೊಬ್ಬರೂ ಪ್ರತಿದಿನ ಸಾಕಷ್ಟು ನಿದ್ದೆ ಮಾಡಬೇಕು. ನಿದ್ರೆಯು ಅಪೂರ್ಣವಾದಾಗ, ದೈಹಿಕ ಆರೋಗ್ಯದ ಮೇಲೆ ಅದರ ಪ್ರಭಾವವು ಕಾಣಿಸುತ್ತದೆ.
(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ