ಜೈಪುರ್: ರಾಜಸ್ಥಾನದ ಜೈಪುರ ಜಿಲ್ಲೆಯ ನ್ಯಾಯಾಲಯದಲ್ಲಿ ವಿಚಿತ್ರ ದೃಶ್ಯವೊಂದು ಕಂಡುಬಂದಿದೆ. ಎಮ್ಮೆಯೊಂದನ್ನು ನ್ಯಾಯಾಲಯದ ಒಳಗೆ ಹಾಜರುಪಡಿಸಿದಾಗ ಅದನ್ನು ನೋಡಿದ ಜನರು ಭಾರಿ ಆಶ್ಚರ್ಯಚಕಿತರಾಗಿದ್ದಾರೆ, ಅಲ್ಲಿ ಅದರ ಗುರುತನ್ನು ಪತ್ತೆಹಚ್ಚಲಾಗಿದೆ. ಸುಮಾರು 10 ವರ್ಷಗಳ ಹಿಂದಿನ ಪ್ರಕರಣವೊಂದರ ವಿಚಾರಣೆ ನಡೆಯುತ್ತಿದ್ದ ಜೈಪುರದ ಚೌಮುನ್ ನ್ಯಾಯಾಲಯದಲ್ಲಿ ಈ ವಿಶಿಷ್ಟ ಪ್ರಕರಣ ಕಂಡುಬಂದಿದೆ. ಕೋರ್ಟಿಗೆ ಬಂದ ಎಮ್ಮೆಯನ್ನು ಕಂಡ ಜನರಿಗೆ ಹಲವು ವರ್ಷಗಳ ಹಿಂದೆ ಬಿಡುಗಡೆಯಾಗಿರುವ ಬಾಲಿವುಡ್ ಸಿನಿಮಾ ‘ಮಿಸ್ ಟನಕ್ಪುರ್ ಹಾಜಿರ್ ಹೋ’ ನೆನಪು ಮರುಕಳಿಸಿದೆ (Trending News In Kannada). ಅದರಲ್ಲಿಯೂ ಕೂಡ ಇದೇ ರೀತಿ ಎಮ್ಮೆಯನ್ನು ಸಾಕ್ಷಿಗಾಗಿ ಹಾಜರುಪಡಿಸಿದ ದೃಶ್ಯ ಸೆರೆಹಿಡಿಯಲಾಗಿತ್ತು. ಇಡೀ ಪ್ರದೇಶದಲ್ಲಿ ಇದೀಗ ಈ ವಿಷಯ ಭಾರಿ ಚರ್ಚೆಗೆ ಗ್ರಾಸವಾಗಿದೆ.
10 ವರ್ಷಗಳ ಹಿಂದೆ ಎಮ್ಮೆ ಕಳ್ಳತನವಾಗಿತ್ತು
ವಾಸ್ತವವಾಗಿ, ಜೈಪುರದ ಹರ್ಮಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 10 ವರ್ಷಗಳ ಹಿಂದೆ ಎಮ್ಮೆಯನ್ನು ಕಳವು ಮಾಡಲಾಗಿತ್ತು. ಎಮ್ಮೆಯ ಮಾಲೀಕ ಚರಣ್ ಸಿಂಗ್ ಶೇಖಾವತ್ ಅವರು ಹರ್ಮಾಡ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಬಗ್ಗೆ ದೂರು ನೀಡಿದ್ದಾರೆ. ಭರತ್‌ಪುರ ಪೊಲೀಸರಿಗೆ ಕೈಬಿಟ್ಟ ಸ್ಥಿತಿಯಲ್ಲಿ ಈ ಎಮ್ಮೆ ಪತ್ತೆಯಾಗಿದೆ. ಈ ಮಾಹಿತಿಯನ್ನು ಹರ್ಮಾಡ ಪೊಲೀಸ್ ಠಾಣೆಗೆ ನೀಡಲಾಗಿದ್ದು, ಬಳಿಕ ಹರ್ಮಾಡ ಪೊಲೀಸರು ಚರಣ್ ಸಿಂಗ್ ಶೇಖಾವತ್ ಎಂಬುವವರಿಂದ ಎಮ್ಮೆಯನ್ನು ಗುರುತಿಸಿ ಆತನಿಗೆ ಹಸ್ತಾಂತರಿಸಿದ್ದಾರೆ.
ಕಳ್ಳತನದ ತನಿಖೆ ಇನ್ನೂ ನಡೆಯುತ್ತಿದೆ
ಎಮ್ಮೆ ಕಳ್ಳತನದ ಬಗ್ಗೆ ಹರ್ಮಾಡ ಪೊಲೀಸ್ ಠಾಣೆ ಇನ್ನೂ ತನಿಖೆ ನಡೆಸುತ್ತಿದೆ, ಏಕೆಂದರೆ ಕಳ್ಳ ಇದುವರೆಗೂ ಸಿಕ್ಕಿಬಿದ್ದೀಲ್ಲ. ಕಳ್ಳ ಸಿಕ್ಕಿಬೀಳದ ಕಾರಣ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆ ನಡೆಸಲಾಗುತ್ತಿದೆ. ಈ ಸಂಬಂಧ ನ್ಯಾಯಾಲಯವು ಇದೀಗ ಚರಣ್ ಸಿಂಗ್ ಶೇಖಾವತ್ ಅವರಿಗೆ ಸಮನ್ಸ್ ನೀಡಿದ್ದು, ಎಮ್ಮೆಯನ್ನು ಗುರುತಿಸಲು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿದೆ. ನ್ಯಾಯಾಲಯದ ಸಮನ್ಸ್ ಸ್ವೀಕರಿಸಿದ ನಂತರ, ಚರಣ್ ಸಿಂಗ್ ತನ್ನ ಎಮ್ಮೆಯನ್ನು ಪಿಕ್ ಅಪ್ ವಾಹನದಲ್ಲಿ ತೆಗೆದುಕೊಂಡು ಚೌಮು ನ್ಯಾಯಾಲಯಕ್ಕೆ ತಲುಪಿದ್ದಾರೆ, ಅಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಮ್ಮೆಯನ್ನು ನೋಡಿ ಅದರ ಬಗ್ಗೆ ವಿಚಾರಣೆ ನಡೆಸಿದ್ದಾರೆ. ನಂತರ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯದ ಮುಂದೆ ಪ್ರಕರಣವನ್ನು ಮಂಡಿಸಿದ್ದಾರೆ.
ಇದನ್ನೂ ಓದಿ-ಈ ವಿಚಿತ್ರ ಹಬ್ಬದಾಚಾರಣೆಯಲ್ಲಿ ಜನ ಬೆಟ್ಟದಿಂದ ಜಿಗಿದು ಕೈ-ಕಾಲು ಮೂಳೆ ಮುರಿಸಿಕೊಂಡು ರೇಸ್ ಗೆದ್ದು ಬೀಗುತ್ತಾರಂತೆ!
ಮತ್ತೊಮ್ಮೆ ಎಮ್ಮೆಗೆ ನ್ಯಾಯಾಲಯಕ್ಕೆ ಬರಬೇಕಾಗಬಹುದು
ಕಾನೂನು ಪ್ರಕ್ರಿಯೆಯ ಭಾಗವಾಗಿ, ಎಮ್ಮೆಯ ವೈದ್ಯಕೀಯ ಪರೀಕ್ಷೆ ನಡೆಯಬೇಕು ಮತ್ತು ಪರಿಶೀಲನೆಯಾಗಬೇಕು. ಈ ಕೆಲಸ ಇನ್ನೂ ಬಾಕಿ ಉಳಿದಿದೆ. ಕಳೆದ 10 ವರ್ಷಗಳಿಂದ, ಎಮ್ಮೆ ತಾತ್ಕಾಲಿಕವಾಗಿ ಚರಣ್ ಸಿಂಗ್ ಅವರ ವಶದಲ್ಲಿದ್ದು ನ್ಯಾಯಾಲಯ ಮತ್ತು ಪೊಲೀಸ್ ಠಾಣೆ ಹರ್ಮಾಡಾ ದಾಖಲೆಗಳಲ್ಲಿದೆ. ಸದ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ಇನ್ನೆರಡು ಬಾರಿ ಕೋರ್ಟ್ ಆವರಣಕ್ಕೆ ಎಮ್ಮೆಯನ್ನು ತರಬೇಕಾಗಬಹುದು ಎನ್ನಲಾಗುತ್ತಿದೆ. ಇದರಿಂದಾಗಿ ಈ ವಿಷಯ ಇದೀಗ ಜನರಲ್ಲಿ ಚರ್ಚೆಗೆ ಗ್ರಾಸವಾಗಿದೆ.
Rajasthan--चौमू न्यायालय में आया अनोखा मामला सामने,
न्यायालय मे पहली बार आया इस तरह का मामला,
कोर्ट में पेशी के लिए आई एक भैंस,
अधिवक्ताओं व पक्षकारों के लिए मामला बना कोतूहल pic.twitter.com/M3LmSCBcj8— Dharmendra Singh (@DharmendraSing7) August 10, 2023
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ