ನಟ ಉಪೇಂದ್ರ ವಿರುದ್ದ 'ಅಟ್ರಾಸಿಟಿ ಕೇಸ್‌' ದಾಖಲು

FIR against Upendra : ಉಪೇಂದ್ರ ಅವರು ವಿಡಿಯೋ ಸಂದೇಶದಲ್ಲಿ ಮಾತನಾಡುವಾಗ ಉಲ್ಲೇಖಿಸಿದ ಗಾದೆ ಮಾತು ದಲಿತ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ. 

Written by - Chetana Devarmani | Last Updated : Aug 13, 2023, 05:15 PM IST
  • ಸ್ಯಾಂಡಲ್‌ವುಡ್‌ ನಟ ರಿಯಲ್‌ ಸ್ಟಾರ್‌ ಉಪೇಂದ್ರ
  • ನಟ ಉಪೇಂದ್ರ ವಿರುದ್ದ ಎಫ್‌ಐಆರ್‌
  • ಉಪೇಂದ್ರ ವಿರುದ್ದ 'ಅಟ್ರಾಸಿಟಿ ಕೇಸ್‌' ದಾಖಲು
ನಟ ಉಪೇಂದ್ರ ವಿರುದ್ದ 'ಅಟ್ರಾಸಿಟಿ ಕೇಸ್‌' ದಾಖಲು   title=
Upendra

Atrocity case against Upendra : ಸ್ಯಾಂಡಲ್‌ವುಡ್‌ ನಟ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಮಾತನಾಡುವಾಗ ಹೇಳಿದ ಒಂದು ಮಾತು ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅವರು ಆಡಿದ ಗಾದೆ ಮಾತೊಂದು ಇದೀಗ ವಿವಾದಾತ್ಮಕ ತಿರುವು ಪಡೆದುಕೊಂಡಿದೆ. ಉಪೇಂದ್ರ ಅವರು ವಿಡಿಯೋ ಸಂದೇಶದಲ್ಲಿ ಮಾತನಾಡುವಾಗ ಉಲ್ಲೇಖಿಸಿದ ಗಾದೆ ಮಾತು ದಲಿತ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ. ಈ ಮಾತನ್ನು ಹೇಳುವ ಮೂಲಕ ಉಪೇಂದ್ರ ದಲಿತ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ.  

ಇದನ್ನೂ ಓದಿ: ʼಹೊಲ್ಗೇರಿʼ ಕುರಿತು ನಟ ಉಪೇಂದ್ರ ಹೇಳಿಕೆಗೆ ನೆಟ್ಟಿಗರ ಆಕ್ರೋಶ..! ಕ್ಷಮೇ ಕೇಳಿದ ಬುದ್ದಿವಂತ

ಉಪೇಂದ್ರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಟ ಉಪೇಂದ್ರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅವರ ಹೇಳಿಕೆ ವಿವಾದವಾಗುತ್ತಿದ್ದಂತೆ, ಉಪೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮೆಯಾಚಿಸಿದ್ದು, ಈ ಗಾದೆ ತಪ್ಪಿ ಬಾಯಿಯಿಂದ ಬಂದಿದೆ ಎಂದು ಹೇಳಿದ್ದಾರೆ. ಇದರಿಂದ ಹಲವರ ಭಾವನೆಗಳಿಗೆ ಧಕ್ಕೆಯಾಗಿರುವುದನ್ನು ಗಮನಿಸಿದ ತಕ್ಷಣ ಲೈವ್ ವಿಡಿಯೋ ಡಿಲೀಟ್ ಮಾಡಿದ್ದಾರೆ. ತಾವಾಡಿದ ಮಾತಿಗೆ ಉಪೇಂದ್ರ ಕ್ಷಮೆ ಕೇಳಿದ್ದಾರೆ. 

 

 

ಉಪೇಂದ್ರ ಹೇಳಿಕೆ ವಿವಾದಾತ್ಮಕ ತಿರುವು ಪಡೆಯುತ್ತಿದ್ದಂತೆ ಬೆಂಗಳೂರು ದಕ್ಷಿಣ ವಿಭಾಗದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಧುಸೂದನ್ ಅವರು ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಟ ಉಪೇಂದ್ರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣದ ಲೈವ್‌ ಕಾರ್ಯಕ್ರಮದಲ್ಲಿ ಮಾತನಾಡುವಾಗ  'ಊರು ಅಂದ್ಮೇಲೆ ಹೊಲೆಗೇರಿ ಇರುತ್ತೆ' ಎಂದು ನಟ ಉಪೇಂದ್ರ ಹೇಳಿದ್ದರು.  

ಇದನ್ನೂ ಓದಿ: ಜೈಲರ್‌ 4ನೇ ದಿನದ ಕಲೆಕ್ಷನ್‌ ಎಷ್ಟು ಗೊತ್ತಾ? ಬಾಕ್ಸ್‌ಆಫೀಸ್‌ನಲ್ಲಿ ತಲೈವಾ ಮಿಂಚಿಂಗ್‌!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News