Sanvi Sudeep : ಸಾನ್ವಿ ಸುದೀಪ್‌ ಸೌಂದರ್ಯಕ್ಕೆ ಮನಸೋತ ನೆಟ್ಟಿಜನ್‌, ಕಿಚ್ಚನ ಪುತ್ರಿಯ ಸಿನಿಮಾ ಎಂಟ್ರಿ ಯಾವಾಗ?

Sanvi Sudeep Photos and videos : ಭಾರತೀಯ ಚಿತ್ರರಂಗದಲ್ಲಿ ಕಿಚ್ಚ ಸುದೀಪ್‌ ತಮ್ಮದೇ ಛಾಪು ಮೂಡಿಸಿದ್ದಾರೆ. ನಟ ಸುದೀಪ್‌ ಮಗಳು ಸಾನ್ವಿಯ ಮುದ್ದಾದ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ.   

Written by - Chetana Devarmani | Last Updated : Aug 13, 2023, 06:09 PM IST
  • ನಟ ಸುದೀಪ್‌ ಮಗಳು ಸಾನ್ವಿ
  • ಸಾನ್ವಿಯ ಮುದ್ದಾದ ವಿಡಿಯೋ ವೈರಲ್‌
  • ಸಾನ್ವಿ ಸೌಂದರ್ಯಕ್ಕೆ ಮನಸೋತ ನೆಟ್ಟಿಜನ್‌
Sanvi Sudeep : ಸಾನ್ವಿ ಸುದೀಪ್‌ ಸೌಂದರ್ಯಕ್ಕೆ ಮನಸೋತ ನೆಟ್ಟಿಜನ್‌, ಕಿಚ್ಚನ ಪುತ್ರಿಯ ಸಿನಿಮಾ ಎಂಟ್ರಿ ಯಾವಾಗ?  title=
Sanvi Sudeep

Sanvi Sudeep video : ದಕ್ಷಿಣ ಭಾರತದ ಸ್ಟಾರ್‌ ನಟರ ಪಟ್ಟಿಯಲ್ಲಿರುವ ನಟ ಸುದೀಪ್‌ ಮಗಳು ಸಾನ್ವಿಯ ಮುದ್ದಾದ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಕಿಚ್ಚ ಸುದೀಪ್‌ ತಮ್ಮದೇ ಛಾಪು ಮೂಡಿಸಿದ್ದಾರೆ. ಅನೇಕ ಸಿನಿಮಾಗಳಲ್ಲಿ ತಮ್ಮ ಅದ್ಭುತ ಅಭಿನಯದಿಂದ ಅಭಿನಯ ಚಕ್ರವರ್ತಿ ಎಂದು ಅಭಿಮಾನಿಗಳಿಂದ ಬಿರುದು ಪಡೆದಿದ್ದಾರೆ. ಕಿಚ್ಚ ಸುದೀಪ್‌ ಸದ್ಯ ಕಿಚ್ಚ 46 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 

ಸುದೀಪ್‌ ಅವರ ಮುದ್ದು ಮಗಳು ಸಾನ್ವಿ. ಅಪ್ಪನಂತೆಯೇ ಕಂಚಿನ ಕಂಠ. ತಮ್ಮ ಹಾಡಿನ ಮೂಲಕ ಜನರ ಹೃದಯ ಗೆದ್ದಿದ್ದಾರೆ. ಇದೀಗ ಸಾನ್ವಿ ಸುದೀಪ್‌ ಅವರ ಕ್ಯೂಟ್‌ ವಿಡಿಯೋ ಮತ್ತು ಫೋಟೋಗಳು ಎಲ್ಲೆಡೆ ವೈರಲ್‌ ಅಗುತ್ತಿವೆ. ಸುದೀಪ್‌ ಪುತ್ರಿಯ ಅಂದಕ್ಕೆ ಜನರು ಮನಸೋತಿದ್ದಾರೆ. ಎಂಥ ಸೌಂದರ್ಯವತಿ ಎಂದು ಹೊಗಳುತ್ತಿದ್ದಾರೆ.

 

 

ಇದನ್ನೂ ಓದಿ: ನಟಿ ಮೇಘನಾಗೆ ನೆಮ್ಮದಿ ಕೊಟ್ಟ ‘ತತ್ಸಮ ತದ್ಭವ’.. ಸೋಮವಾರ ಮೊದಲ ಹಾಡು ರಿಲೀಸ್!

ಸಾನ್ವಿ ಸುದೀಪ್‌ ಅವರ ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸಿನಿಮಾ ಎಂಟ್ರಿಗೆ ಸಜ್ಜಾಗಿದ್ದಾರಾ ಎಂಬ ಪ್ರಶ್ನೆ ಹಲವರಲ್ಲಿ ಕಾಡುತ್ತಿದೆ. ಅನೇಕರು ಸಾನ್ವಿ ಸಿನಿಮಾ ಎಂಟ್ರಿ ಯಾವಾಗ ಎಂದು ಕೇಳುತ್ತಿದ್ದಾರೆ. ಸಾನ್ವಿ ಸುದೀಪ್‌ ಚಿತ್ರರಂಗಕ್ಕೆ ನಾಯಕಿಯಾಗಿ ಯಾವಾಗ ಕಾಲಿಡುತ್ತಾರೆ ಎಂಬ ಕುತೂಹಲ ಕೆರಳುತ್ತಿದೆ. 

 

 

ಇತ್ತೀಚೆಗೆ ಸಾನ್ವಿ ಸುದೀಪ್‌ ಜಿಮ್ಮಿ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದಾರೆ. ಈ ಮೂಲಕ ಸಾನ್ವಿ ಸಿನಿರಂಗಕ್ಕೆ ಗಾಯಕಿಯಾಗಿ ಪದಾರ್ಪಣೆ ಮಾಡಿದ್ದಾರೆ. ಜಿಮ್ಮಿ ಚಿತ್ರದಲ್ಲಿ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ನಟಿಸಿದ್ದಾರೆ. ಈ ಮೂಲಕ ಸುದೀಪ್‌ ಅವರ ಮಗಳು ಸಾನ್ವಿ ಸಹ ಸಿನಿರಂಗ ಪ್ರವೇಶಿಸಿದ್ದಾರೆ. 

ಇದೀಗ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸಾನ್ವಿ ಸುದೀಪ್ ಫೋಟೋಶೂಟ್​ ಮಾಡಿಸಿಕೊಂಡು ಫೋಟೋಗಳನ್ನು ಶೇರ್​ ಮಾಡಿದ್ದಾರೆ. ಫೋಟೋಸ್‌ ಜೊತೆ ವಿಡಿಯೋ ಒಂದನ್ನು ಅಪ್​ಲೋಡ್​ ಮಾಡಿದ್ದಾರೆ. ಇದರಲ್ಲಿ ಸಾನ್ವಿ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ಇದೆಲ್ಲಾ ನೋಡಿದ ಅನೇಕರು ಸುದೀಪ್‌ ಪುತ್ರಿ ಸಿನಿಮಾ ನಾಯಕಿಯಾಗಿ ಎಂಟ್ರಿ ಕೊಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುತ್ತಿದ್ದಾರೆ.

 

 

ಇದನ್ನೂ ಓದಿ: ನಟ ಉಪೇಂದ್ರ ವಿರುದ್ದ 'ಅಟ್ರಾಸಿಟಿ ಕೇಸ್‌' ದಾಖಲು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News