ಬೆಂಗಳೂರು: ಹೈಕಮಾಂಡ್ ನಾಯಕರು ಕರ್ನಾಟಕದ ಬಿಜೆಪಿ ಮೇಲೆ ಎಳ್ಳಷ್ಟೂ ಭರವಸೆ ಇಟ್ಟುಕೊಂಡಿಲ್ಲವೇ? ಎಂದು ಕಾಂಗ್ರೆಸ್ ವ್ಯಂಗ್ಯವಾಗಿ ಪ್ರಶ್ನಿಸಿದೆ. ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ಕರ್ನಾಟಕ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದೆ.
ಇದನ್ನೂ ಓದಿ: ಬಿಜೆಪಿ ಸರ್ಕಾರದ ಅವಧಿಯ 40% ಕಮಿಷನ್ ಪ್ರಕರಣ ತನಿಖೆಗೆ ಸಮಿತಿ ರಚನೆ
#BJPvsBJP ಹ್ಯಾಶ್ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವುದನ್ನೇ ಬಿಜೆಪಿ ಮರೆತಂತಿದೆ! ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರು ಆಸೆಯಿಂದ ದೆಹಲಿಗೆ ಹೋಗಿದ್ದೂ ‘ದಂಡ‘ಯಾತ್ರೆ ಆಯ್ತು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೂ ಅಬ್ಬರಿಸಿ ಸುಸ್ತಾಗಿ ಮಲಗಿದ್ದಾಯ್ತು. ಮಾಜಿ ಸಚಿವ ಸುನಿಲ್ ಕುಮಾರ್ ಅವರೂ ಸೈಲೆಂಟ್ ಆಗಿ ಮನೆ ಸೇರಿದ್ದಾಯ್ತು. ವಿಪಕ್ಷ ನಾಯಕನ ಆಯ್ಕೆ ಮಾಡುವ ಸೂಕ್ತ ಸಂದರ್ಭ, ಸಮಯ, ಮುಹೂರ್ತ ಇನ್ನೂ ಕೂಡಿ ಬರಲಿಲ್ಲವೇ ಬಿಜೆಪಿ?’ ಎಂದು ಪ್ರಶ್ನಿಸಿದೆ.
ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವುದನ್ನೇ ಬಿಜೆಪಿ ಮರೆತಂತಿದೆ!
ಬೊಮ್ಮಾಯಿಯವರು ಆಸೆಯಿಂದ ದೆಹಲಿಗೆ ಹೋಗಿದ್ದೂ ‘ದಂಡ‘ಯಾತ್ರೆ ಆಯ್ತು.
ಯತ್ನಾಳ್ ಅವರೂ ಅಬ್ಬರಿಸಿ ಸುಸ್ತಾಗಿ ಮಲಗಿದ್ದಾಯ್ತು,
ಸುನಿಲ್ ಕುಮಾರ್ ಅವರೂ ಸೈಲೆಂಟ್ ಆಗಿ ಮನೆ ಸೇರಿದ್ದಾಯ್ತು,
ವಿಪಕ್ಷ ನಾಯಕನ ಆಯ್ಕೆ ಮಾಡುವ ಸೂಕ್ತ ಸಂದರ್ಭ, ಸಮಯ, ಮುಹೂರ್ತ ಇನ್ನೂ ಕೂಡಿ…
— Karnataka Congress (@INCKarnataka) August 18, 2023
ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳು ದೇಶ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲೂ ಗಮನ ಸೆಳೆಯುತ್ತಿವೆ: ಕಾಂಗ್ರೆಸ್
ಬಿಜೆಪಿ ಡ್ರೈವರ್ ಇಲ್ಲದ ಡಕೋಟಾ ಇಂಜಿನ್!
ಇರುವ ರಾಜ್ಯಾಧ್ಯಕ್ಷ ಕೆಲಸ ಮಾಡದೆ, ಹೊಸ ರಾಜ್ಯಾಧ್ಯಕ್ಷ ಸಿಗದೆ, ವಿಪಕ್ಷ ನಾಯಕನ ಆಯ್ಕೆ ಮಾಡಲಾಗದೆ, ಆಂತರಿಕ ಕಲಹ ನಿಭಾಯಿಸಲಾಗದೆ, ಹೈಕಮಾಂಡ್ ತಿರಸ್ಕಾರದಿಂದ ವಿಲವಿಲ ಒದ್ದಾಡುತ್ತಿರುವ @BJP4Karnataka ಗೆ ಯಾವ ಹೋಲಿಕೆ ಸೂಕ್ತವಾಗಬಹುದು..
🔹ಯಜಮಾನನಿಲ್ಲದ ಮನೆ !
🔹ಡ್ರೈವರ್ ಇಲ್ಲದ ಡಕೋಟಾ ಇಂಜಿನ್ !
🔹ನಾವಿಕನಿಲ್ಲದ ನೌಕೆ !
🔹ಅಂಪೈರ್…— Karnataka Congress (@INCKarnataka) August 18, 2023
‘ಇರುವ ರಾಜ್ಯಾಧ್ಯಕ್ಷ ಕೆಲಸ ಮಾಡದೆ, ಹೊಸ ರಾಜ್ಯಾಧ್ಯಕ್ಷ ಸಿಗದೆ, ವಿಪಕ್ಷ ನಾಯಕನ ಆಯ್ಕೆ ಮಾಡಲಾಗದೆ, ಆಂತರಿಕ ಕಲಹ ನಿಭಾಯಿಸಲಾಗದೆ, ಹೈಕಮಾಂಡ್ ತಿರಸ್ಕಾರದಿಂದ ವಿಲವಿಲ ಒದ್ದಾಡುತ್ತಿರುವ ಬಿಜೆಪಿಗೆ ಯಾವ ಹೋಲಿಕೆ ಸೂಕ್ತವಾಗಬಹುದು? ಬಿಜೆಪಿ ಒಂದು ರೀತಿ ಯಜಮಾನನಿಲ್ಲದ ಮನೆ, ಡ್ರೈವರ್ ಇಲ್ಲದ ಡಕೋಟಾ ಇಂಜಿನ್, ನಾವಿಕನಿಲ್ಲದ ನೌಕೆ ಮತ್ತು ಅಂಪೈರ್ ಇಲ್ಲದ WWF ವೇದಿಕೆ!’ ಎಂದು ಕಾಂಗ್ರೆಸ್ ಟೀಕಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.