“ವಿದಾಯಕ್ಕೆ ಇದು ಸರಿಯಾದ ಸಮಯ”: 13 ವರ್ಷಗಳ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್!

Shauna Kavanagh Announced Retirement: ಐರ್ಲೆಂಡ್‌’ನ ಸ್ಟಾರ್ ಆಟಗಾರ್ತಿ ನಿವೃತ್ತಿ ಘೋಷಿಸಿದ್ದಾರೆ. ಈ ಆಟಗಾರ್ತಿ ಬೇರೆ ಯಾರೂ ಅಲ್ಲ, ಐರ್ಲೆಂಡ್‌’ನ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌’ಮನ್ ಶೌನಾ ಕವನಾಗ್.

Written by - Bhavishya Shetty | Last Updated : Aug 20, 2023, 07:41 AM IST
    • ಐರ್ಲೆಂಡ್‌’ನ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌’ಮನ್ ಶೌನಾ ಕವನಾಗ್
    • 31 ವರ್ಷದ ಕವಾನಾಗ್ ಅವರು ಐರ್ಲೆಂಡ್‌ ತಂಡದ ಪರ 27 ODI ಮತ್ತು 58 T20 ಪಂದ್ಯಗಳನ್ನು ಆಡಿದ್ದಾರೆ
    • 2011 ರಲ್ಲಿ ಎರಡೂ ಸ್ವರೂಪಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌’ಗೆ ಪಾದಾರ್ಪಣೆ ಮಾಡಿದ್ದರು
“ವಿದಾಯಕ್ಕೆ ಇದು ಸರಿಯಾದ ಸಮಯ”: 13 ವರ್ಷಗಳ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್! title=
Shauna Kavanagh

Shauna Kavanagh Announced Retirement: ಭಾರತ ಕ್ರಿಕೆಟ್ ತಂಡ ಪ್ರಸ್ತುತ ಐರ್ಲೆಂಡ್ ಪ್ರವಾಸದಲ್ಲಿದೆ. ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಈ ಸರಣಿಯ ಮಧ್ಯೆ ಐರ್ಲೆಂಡ್‌’ನ ಸ್ಟಾರ್ ಆಟಗಾರ್ತಿ ನಿವೃತ್ತಿ ಘೋಷಿಸಿದ್ದಾರೆ. ಈ ಆಟಗಾರ್ತಿ ಬೇರೆ ಯಾರೂ ಅಲ್ಲ, ಐರ್ಲೆಂಡ್‌’ನ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌’ಮನ್ ಶೌನಾ ಕವನಾಗ್.

ಇದನ್ನೂ ಓದಿ: ಧೋನಿ ಗರಡಿಯಲ್ಲಿ ಪಳಗಿದ ಈ ಕ್ರಿಕೆಟಿಗ 1293 ದಿನಗಳ ಬಳಿಕ ಟೀಂ ಇಂಡಿಯಾಗೆ ಎಂಟ್ರಿ! ಮಾಹಿ ಫಿನಿಶಿಂಗ್ ಸ್ಟೈಲ್’ಲ್ಲೂ ಹೋಲಿಕೆ

31 ವರ್ಷದ ಕವಾನಾಗ್ ಅವರು ಐರ್ಲೆಂಡ್‌ ತಂಡದ ಪರ 27 ODI ಮತ್ತು 58 T20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಸೆಪ್ಟೆಂಬರ್ 2022 ರಲ್ಲಿ ಬಾಂಗ್ಲಾದೇಶ ವಿರುದ್ಧದ T20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ  ಕೊನೆಯ ಪ್ರದರ್ಶನ ನೀಡಿದ್ದರು.

2 ಬಾರಿ ಟಿ20 ವಿಶ್ವಕಪ್‌’ನಲ್ಲಿ ಭಾಗಿ:

ಶೌನಾ ಕವನಾಗ್ ಅವರು ಐರ್ಲೆಂಡ್‌ ತಂಡದ ಪರ 2016 ಮತ್ತು 2018ರ ಟಿ 20 ವಿಶ್ವಕಪ್’ನಲ್ಲಿ ಆಡಿದ್ದರು. ಇತ್ತೀಚೆಗೆ ನೆದರ್ಲ್ಯಾಂಡ್ಸ್ ವಿರುದ್ಧ T20I ಗೆ ಆಯ್ಕೆಯಾದರೂ ಸಹ ಯಾವುದೇ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಇದೀಗ ನಿವೃತ್ತಿ ಘೋಷಣೆ ಮಾಡಿದ ಶೌನಾ, ಮುಂದೆ ಪೆಂಬ್ರೋಕ್ ಕ್ರಿಕೆಟ್ ಕ್ಲಬ್ ಮತ್ತು ಇವೊಕ್ ಸೂಪರ್ ಸರಣಿಯಲ್ಲಿ ಸ್ಕಾರ್ಚರ್ಸ್‌’ನೊಂದಿಗೆ ಆಡುವುದನ್ನು ಮುಂದುವರಿಸಲಿದ್ದಾರೆ.

ಶೌನಾ ಕವನಾಗ್ ಏಪ್ರಿಲ್ 2011 ರಲ್ಲಿ ಎರಡೂ ಸ್ವರೂಪಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌’ಗೆ ಪಾದಾರ್ಪಣೆ ಮಾಡಿದ್ದು, 41 ಟಿ20 ಇನ್ನಿಂಗ್ಸ್‌’ಗಳಲ್ಲಿ 345 ರನ್ ಮತ್ತು 20 ODIಗಳಲ್ಲಿ 206 ರನ್ ಗಳಿಸಿದ್ದಾರೆ.

ಶೌನಾ ಕವನಾಗ್ ನಿವೃತ್ತಿ ಘೋಷಣೆ:

ಶೌನಾ ಕವನಾಗ್ ಅವರು ತಮ್ಮ ನಿವೃತ್ತಿಯ ಕುರಿತು ಹೇಳಿಕೆ ನೀಡಿದ್ದು, “ಅಂತಾರಾಷ್ಟ್ರೀಯ ಕ್ರಿಕೆಟ್‌’ನಿಂದ ನಿವೃತ್ತಿ ಪಡೆಯುವ ಬಗ್ಗೆ ಕೆಲ ಸಮಯದಿಂದ ಯೋಚಿಸುತ್ತಿದ್ದೆ. ಈಗ ಐರ್ಲೆಂಡ್‌’ನೊಂದಿಗೆ ನನ್ನ ಕ್ರೀಡಾ ಪ್ರಯಾಣವನ್ನು ಕೊನೆಗೊಳಿಸಲು ಇದು ಸರಿಯಾದ ಸಮಯ ಎಂದು ಭಾವಿಸುತ್ತೇನೆ. ಐರ್ಲೆಂಡ್ ಪರ ಕ್ರಿಕೆಟ್ ಆಡುವುದು ನನ್ನ ಜೀವನದ ಪ್ರಮುಖ ಭಾಗವಾಗಿತ್ತ” ಎಂದಿದ್ದಾರೆ.

ಇದನ್ನೂ ಓದಿ: ಟೆಸ್ಟ್’ನಲ್ಲಿ ತ್ರಿಶತಕ ಸಿಡಿಸಿದ ಈ ಆಟಗಾರ Team Indiaದಲ್ಲಿ ಅವಕಾಶ ಪಡೆಯಲು 6 ವರ್ಷಗಳಿಂದ ತುದಿಗಾಲಲ್ಲಿ ಕಾಯುತ್ತಿದ್ದಾನೆ!

”ನನ್ನ ಅಂತಾರಾಷ್ಟ್ರೀಯ ವೃತ್ತಿಜೀವನವು ಅತ್ಯಂತ ಲಾಭದಾಯಕವಾಗಿತ್ತು. ನನಗೆ ಸಿಕ್ಕಿರುವ ಎಲ್ಲಾ ಅವಕಾಶಗಳು ಮತ್ತು ಅನುಭವಗಳಿಗೆ ನಾನು ಕೃತಜ್ಞಳಾಗಿದ್ದೇನೆ. ಕ್ರಿಕೆಟ್ ಐರ್ಲೆಂಡ್‌’ನ ಸಿಬ್ಬಂದಿಗೆ ಅವರ ನಿರಂತರ ಬೆಂಬಲಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ವಿಶೇಷವಾಗಿ ನಾನು ಕೆಲಸ ಮಾಡಿದ ಎಲ್ಲಾ ಸಹಾಯಕ ಸಿಬ್ಬಂದಿಗೆ ನನ್ನ ಧನ್ಯವಾದ” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News