ನಟ ದರ್ಶನ್ ಹಾಗೂ ಮಾಧ್ಯಮಗಳ ನಡುವಿನ ವಿವಾದ ಸುಖಾಂತ್ಯ

Darshan News : ನನಗೆ ಮಾಧ್ಯಮವೇ ಬೇಡ ಅಂತ ಇದ್ದ ದರ್ಶನ್ ಗೆ ಈಗ ಮಾಧ್ಯಮಗಳ ಬಳಿ ಕ್ಷಮೆ ಕೇಳಿದ್ದಾರೆ. ಈ ಮೂಲಕ ದರ್ಶನ್‌ ಮತ್ತು ಮಾಧ್ಯಮಗಳ ನಡುವಿನ ವಿವಾದ ಸುಖಾಂತ್ಯ ಕಂಡಿದೆ.

Written by - Zee Kannada News Desk | Last Updated : Aug 26, 2023, 11:04 AM IST
  • ಮಾಧ್ಯಮಗಳ ಬಳಿ ಕ್ಷಮೆ ಕೋರಿದ ನಟ ದರ್ಶನ್‌
  • ದರ್ಶನ್‌ ನಡೆ ಬಗ್ಗೆ ಪರ - ವಿರೋಧದ ಮಾತುಗಳು
  • ಸಿಕ್ಕಾಪಟ್ಟೆ ಟ್ರೋಲ್‌ ಆಗ್ತಿದ್ದಾರೆ ಚಾಲೆಂಜಿಂಗ್‌ ಸ್ಟಾರ್‌
ನಟ ದರ್ಶನ್ ಹಾಗೂ ಮಾಧ್ಯಮಗಳ ನಡುವಿನ ವಿವಾದ ಸುಖಾಂತ್ಯ  title=

Darshan News : ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ದಾಸ, ಕೆಂಚ ಹೀಗೇ ಹಲವಾರು ಹೆಸರುಗಳಿಂದ ಕರೆಯೋ ಡಿ ಬಾಸ್ ಗತ್ತು ಎಲ್ಲರಿಗೂ ಗೊತ್ತೇ ಇದೆ. ಮಾಧ್ಯಮ ಎಂದ್ರೆ ಕಿಡಿ ಕಿಡಿ ಕೆಂಡಕಾರುತ್ತಿದ್ದ ದರ್ಶನ್‌ ಈಗ ಅದೇ ಮಾಧ್ಯಮದವರ ಬಳಿ ಕ್ಷಮೆ ಕೋರಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನ ದಾಸನ ಈ ನಡೆ ಎಲ್ಲರಿಗೂ ಅಚ್ಚರಿ ತಂದಿದ್ದೇನೋ ಸತ್ಯ. ಇದಕ್ಕೆ ಅನೇಕರು ಸಂತಸ ಕೂಡ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನೊಂದೆಡೆ ಇದರ ವಿರೋಧವಾಗಿ ಅನೇಕ ಮಾತುಗಳು ಕೇಳಿಬರುತ್ತಿವೆ. ಇದೀಗ ಎಲ್ಲಾ ವಾಹಿನಿಯ ಮುಖ್ಯಸ್ಥರನ್ನ ಕರೆಸಿ, ಯಾವುದೋ ಕೆಟ್ಟ ಗಳಿಗೆಯಲ್ಲಿ ಹೀಗಾಯ್ತು ಅಂತ ಕ್ಷಮೆ ಕೇಳಿ ನಂತರ ವರಮಹಾಲಕ್ಷ್ಮಿ ಹಬ್ಬದ ದಿನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕೋ ಮೂಲಕ ಮಾಧ್ಯಮದವರ ಜೊತೆಗಿನ ವಿವಾದಕ್ಕೆ ಸುಖಾಂತ್ಯ ಹಾಡಿದ್ದಾರೆ.

ಕಾಟೇರಾ ಸಿನಿಮಾ ರಿಲೀಸ್‌ಗೂ ಮುನ್ನ ದರ್ಶನ್‌ ಮಾಧ್ಯಮಗಳ ಜೊತೆಗಿನ ಈ ಸಂಧಾನ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಇದಕ್ಕೆ ಕಾರಣವೂ ಇದೆ. ಕ್ರಾಂತಿ ಸಿನಿಮಾ ಚೆನ್ನಾಗಿದ್ದರು ಸಹ ಮಾಧ್ಯಮದ ಸಹಾಯವಿಲ್ಲದೆ ಸಿನಿಮಾ ಫ್ಲಾಫ್ ಆಯ್ತು ಎಂಬುದು ಹಲವರ ಅಭಿಪ್ರಾಯವಾಗಿದೆ. ಇದೇ ಕಾರಣಕ್ಕೆ ಈಗ ಕಾಟೇರಾ ರಿಲೀಸ್‌ಗೂ ಮುನ್ನೆವೇ ದರ್ಶನ್‌ ಈ ಮಾಧ್ಯಮದವರ ಬಳಿ ಸ್ನೇಹ ಹಸ್ತ ಚಾಚಿದ್ದಾರೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ: National Film Awards 2023 : ವಿಜೇತರಿಗೆ ಸಿಗುವ ಬಹುಮಾನದ ಮೊತ್ತ ಎಷ್ಟು?

ಒಂದಷ್ಟು ವರ್ಗದ ಜನರು ದರ್ಶನ್‌ ಅವರನ್ನು ಸಿಕ್ಕಾಪಟ್ಟೆ ಟ್ರೋಲ್‌ ಮಾಡುತ್ತಿದ್ದಾರೆ. ನನಗೆ ಮಾಧ್ಯಮವೇ ಬೇಡ ಅಂತ ಇದ್ದ ದರ್ಶನ್ ಈಗ ಕ್ಷಮೆಯಾಚಿಸಿದ್ದೇಕೆ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ವಾಹಿನಿಯ ಮುಖ್ಯಸ್ಥರನ್ನು ಕರೆಸಿ ಭರ್ಜರಿ ಊಟದ ವ್ಯವಸ್ಥೆ ಮಾಡಿ ಕ್ಷಮೆ ಕೇಳಿದ್ದಾರೆ. ಇದರ ಬಗ್ಗೆ ನೆಟ್ಟಿಜನ್‌ ಪರ ವಿರೋಧವಾಗಿ ಮಾತನಾಡುತ್ತಿದ್ದಾರೆ.  

ಗಾಂಧಿನಗರದಲ್ಲಿ ದರ್ಶನ್‌ ವಿಚಾರವಾಗಿ ಪರ - ವಿರೋಧದ ಮಾತುಗಳು ಕೇಳಿ ಬರುತ್ತಿವೆ. ಸಿನಿಮಾ ಸೋಲುತ್ತೇ ಎಂದು ಅಂಜಿ ದರ್ಶನ್ ಸಂಪಾದಕರ ಬಳಿ ಕ್ಷಮೆ ಕೇಳಿ ಶರಣಾಗಿದ್ದಾರೆ ಎಂದು ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ. ಆದರೆ ಕೊನೆಗೂ ಟಿವಿ ವಾಹಿನಿಗಳಲ್ಲಿ ದರ್ಶನ್ ನೋಡ್ತೀವಿಯಲ್ಲ ಎಂದು ಡಿಬಾಸ್ ಫ್ಯಾನ್ಸ್ ಸಂತಸದಲ್ಲಿದ್ದಾರೆ. 

ಇದನ್ನೂ ಓದಿ: ಈ ಬಾಲಿವುಡ್ ನಟಿಯರು ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಎಷ್ಟು ಕೋಟಿ ಶುಲ್ಕ ಪಡೆಯುತ್ತಾರೆ ಗೊತ್ತೇ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News