ಬೆಂಗಳೂರು: ಸಂಗಾತಿಯೊಂದಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಂಪರ್ಕ ಹೊಂದುವುದು ಪ್ರತಿಯೊಬ್ಬರ ವೈವಾಹಿಕ ಜೀವನದ ಒಂದು ಅತ್ಯುತ್ತಮ ಭಾವನೆಯಾಗಿದೆ. ಆದರೆ ಕೆಲವು ಕಾಯಿಲೆಗಳು ನಮ್ಮ ಈ ಸಂತೋಷವನ್ನು ಹಾಳುಮಾಡಬಹುದು. ಹೌದು, ಪ್ರತಿಯೊಬ್ಬರೂ ಇಂತಹ ಕಾಯಿಲೆಗಳಿಂದ ದೂರವಿರಲು ಬಯಸುತ್ತಾರೆ, ಆದರೆ ಈ ರೋಗಗಳು ನಮ್ಮ ಕೇವಲ ನಮ್ಮ ಜೀವನವನ್ನೇ ಮಾಡುವುದು ಮಾತ್ರವಲ್ಲದೆ, ದಾಂಪತ್ಯ ಜೀವನಕ್ಕೂ ಕೂಡ ಮಾರಕವಾಗಿವೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಚಿಂತಿಸಬೇಕಾಗಿಲ್ಲ ಏಕೆಂದರೆ ಇಲ್ಲಿ ನಾವು ಅಂತಹ ಕೆಲವು ಕಾಯಿಲೆಗಳ ಬಗ್ಗೆ ಉಲ್ಲೇಖಿಸುತ್ತಿದ್ದೇವೆ, ಇಂತಹ ಕಾಯಿಲೆಗಳನ್ನು ನೀವು ಮರೆತೂ ಕೂಡ ನಿರ್ಲಕ್ಷಿಸಬಾರದು, ಸಮಯ ಇರುವಾಗಲೇ ಅವುಗಳಿಗೆ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು.
ಈ ಕಾಯಿಲೆಗಳು ವೈವಾಹಿಕ ಜೀವನವನ್ನು ಹಾಳುಮಾಡುತ್ತವೆ
ಮಧುಮೇಹ ರೋಗ
ಮಧುಮೇಹ ಕಾಲಾನಂತರದಲ್ಲಿ ರಕ್ತನಾಳಗಳು ಮತ್ತು ನರಗಳನ್ನು ಹಾನಿಗೊಳಿಸುತ್ತದೆ. ಇದು ಲೈಂಗಿಕ ಅಂಗಗಳಿಗೆ ರಕ್ತದ ಹರಿವಿನ ಮೇಲೂ ಪರಿಣಾಮ ಬೀರುತ್ತದೆ. ಇದರಿಂದಾಗಿ ಗುಪ್ತಾಂಗದ ಸಮಸ್ಯೆ ಹಾಗೂ ಅಕಾಲಿಕ ಸ್ಖಲನದ ಸಮಸ್ಯೆ ಎದುರಾಗುತ್ತವೆ. ಮತ್ತೊಂದೆಡೆ, ಮಹಿಳೆಯರಲ್ಲಿ ಬಯಕೆಯ ಕೊರತೆ, ಗುಪ್ತಾಂಗದ ಶುಷ್ಕತೆ ಮುಂತಾದ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ, ನೀವು ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟುಕೊಂಡರೆ, ನಿಮ್ಮ ವೈವಾಹಿಕ ಜೀವನದ ಸಮಸ್ಯೆಗಳನ್ನು ನೀವು ನಿವಾರಿಸಬಹುದು.
ಹೃದಯರೋಗ
ನೀವು ಯಾವುದೇ ಹೃದಯ ಸಂಬಂಧಿ ಕಾಯಿಲೆಯನ್ನು ಹೊಂದಿದ್ದರೆ ಅದು ನಿಮ್ಮ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಇದರಿಂದ ಲೈಂಗಿಕ ಸಮಸ್ಯೆಗಳು ಉಂಟಾಗಬಹುದು, ಇದರ ಹೊರತಾಗಿ ಅಧಿಕ ರಕ್ತದೊತ್ತಡ ಸಮಸ್ಯೆಯಲ್ಲಿ ತೆಗೆದುಕೊಳ್ಳಲಾಗುವ ಕೆಲ ಔಷಧಿಗಳು ಸಹ ಸಮಸ್ಯೆಗಳನ್ನು ಉಂಟುಮಾಡಬಹುದು. ಮತ್ತೊಂದೆಡೆ, ಒಂದು ವೇಳೆ ನೀವು ಹೃದಯದ ಸಮಸ್ಯೆಯಿಂದ ಬಳಲುತ್ತಿತ್ತು, ದೈಹಿಕ ಸಂಬಂದ ಬೆಸೆಯುವುದರಿಂದ ನಿಮಗೆ ಅಪಾಯವಿದೆ ಎಂಬ ಭಯ ನಿಮ್ಮನ್ನು ಕಾಡುತ್ತಿದ್ದರೆ, ನೀವು ಖಂಡಿತವಾಗಿಯೂ ನಿಮ್ಮ ವೈದ್ಯರೊಂದಿಗೆ ಮಾತನಾಡಿ.
ಇದನ್ನೂ ಓದಿ-ಗಾಳಿ ಅಲ್ಲ... ನೀರಿನ ಮುಖಾಂತರ ಹಾನಿಯುಂಟು ಮಾಡಲಿದೆ ಕೋರೋನಾ... WHO ವರದಿ ಬೆಚ್ಚಿಬೀಳಿಸುವಂತಿದೆ!
ಖಿನ್ನತೆ
ನಿಮ್ಮ ಮನಸ್ಸು ಮತ್ತು ದೇಹವು ಒಟ್ಟಿಗೆ ಹೋಗುತ್ತವೆ. ಹತಾಶೆಯ ಒಂದು ಲಕ್ಷಣವು ನಿಮಗೆ ಬಯಕೆಯ ಕೊರತೆಯನ್ನು ತರಬಹುದು. ನೀವು ಖಿನ್ನತೆಗೆ ಒಳಗಾಗಿದ್ದರೆ, ಅದರ ಬಗ್ಗೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ.
ಇದನ್ನೂ ಓದಿ-ಕೆಟ್ಟ ಕೊಲೆಸ್ಟ್ರಾಲ್ ನಿಂದ ನೀವೂ ತೊಂದರೆಗೊಳಗಾಗಿದ್ದರೆ ನಿಮ್ಮ ನಿತ್ಯದ ಆಹಾರದಲ್ಲಿ ಈ ಕೆಂಪು ಹಣ್ಣು ಶಾಮೀಲುಗೊಳಿಸಿ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.