Kushi Remuneration details : ಕಳೆದ ಶುಕ್ರವಾರ (ಸೆಪ್ಟೆಂಬರ್ 1) ಬಿಡುಗಡೆಯಾದ ಶಿವನಿರ್ವಾಣ ನಿರ್ದೇಶನದ ಚಿತ್ರ ಖುಷಿ. ಇದರಲ್ಲಿ ವಿಜಯ್ ದೇವರಕೊಂಡ ವಿಬ್ಲವ್ ಪಾತ್ರದಲ್ಲಿ ನಟಿಸಿದ್ದಾರೆ. ಆರಾಧ್ಯ ಪಾತ್ರದಲ್ಲಿ ಸಮಂತಾ ಅವರಿಗೆ ಜೋಡಿಯಾಗಿದ್ದಾರೆ. ಕಾಮಿಡಿ-ರೊಮ್ಯಾಂಟಿಕ್ ಡ್ರಾಮಾ ಪ್ರಕಾರದಲ್ಲಿ ಚಿತ್ರ ನಿರ್ಮಿಸಲಾಗಿದೆ. ಶರಣ್ಯ ಪೊನ್ವಣ್ಣನ್, ಭರತ್ ರೆಡ್ಡಿ, ರೋಹಿಣಿ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ವಿಜಯ್ ದೇವರಕೊಂಡ ಮತ್ತು ಸಮಂತಾ ಇಬ್ಬರ ಅಭಿಮಾನಿಗಳು ಖುಷಿ ಸಿನಿಮಾಗಾಗಿ ಕಾಯುತ್ತಿದ್ದರು. ಅದರಲ್ಲೂ ನಟಿ ಸಮಂತಾ ಅಭಿನಯದ 'ಶಾಕುಂತಲಂ' ಚಿತ್ರ ಭಾರೀ ಸೋಲು ಕಂಡಿದ್ದು, ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಖುಷಿ ಚಿತ್ರದ ಶೂಟಿಂಗ್ ಅರ್ಧದಲ್ಲೇ ಮಯೋಸಿಟಿಸ್ ನಿಂದ ಬಳಲುತ್ತಿದ್ದರು. ಇದರಿಂದಾಗಿ ಚಿತ್ರೀಕರಣ ಅರ್ಧಕ್ಕೆ ನಿಂತಿತ್ತು. ಈ ಚಿತ್ರವಾದರೂ ಅವರಿಗೆ ಒಳ್ಳೆಯ ಸ್ವಾಗತ ಸಿಗಲಿ ಎಂದು ಅಭಿಮಾನಿಗಳು ಬಯಸಿದ್ದರು.
ಅದೇ ರೀತಿ ದಕ್ಷಿಣ ಭಾರತ ಚಿತ್ರರಂಗದ ರೊಮ್ಯಾಂಟಿಕ್ ಹೀರೋ ಆಗಿರುವ ವಿಜಯ್ ದೇವರಕೊಂಡ ಅವರ ಕೊನೆಯ ಚಿತ್ರ 'ಲೈಗರ್' ಕೂಡ ಸೋಲು ಕಂಡಿತ್ತು. ಅದಾದ ನಂತರ ಖುಷಿ ಸಿನಿಮಾ ಇಬ್ಬರಿಗೂ ಒಳ್ಳೆಯ ತಿರುವು ಕೊಟ್ಟಿತ್ತು. ಖುಷಿ ಚಿತ್ರದ ನಟ-ನಟಿಯರ ಸಂಭಾವನೆ ವಿವರ ಇದೀಗ ಹೊರಬಿದ್ದಿದೆ. ಅತಿ ಹೆಚ್ಚು ಸಂಭಾವನೆ ಪಡೆದವರು ಯಾರು ಗೊತ್ತಾ?
ಇದನ್ನೂ ಓದಿ: ಪ್ರಭಾಸ್ ಆಧಾರ್ ಕಾರ್ಡ್ ಸಿಕ್ಕಾಪಟ್ಟೆ ವೈರಲ್! ನಿಜವಾದ ವಯಸ್ಸು ರಿವೀಲ್
ವಿಜಯ್ ದೇವರಕೊಂಡ: ವಿಜಯ್ ದೇವರಕೊಂಡ 2011 ರಲ್ಲಿ ತೆಲುಗು ಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದರು. ಅವರ ಅರ್ಜುನ್ ರೆಡ್ಡಿ, ಗೀತ ಗೋವಿಂದಂ, ಡಿಯರ್ ಕಾಮ್ರೇಡ್, ನೋಟಾ, ವರ್ಲ್ಡ್ ಫೇಮಸ್ ಲವರ್ ಚಿತ್ರಗಳು ಹಿಟ್ ಆದವು. ಸದ್ಯ ಅವರು ಪ್ರತಿ ಚಿತ್ರಕ್ಕೆ 6 ರಿಂದ 7 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಖುಷಿ ಚಿತ್ರದಲ್ಲಿ 7 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಸಮಂತಾ ರುತ್ ಪ್ರಭು : ಸಮಂತಾ ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರು. ಅವರು ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಪ್ರಮುಖ ನಾಯಕಿ. ಅವರು ಸಿಟಾಡೆಲ್ ಹಿಂದಿ ಧಾರಾವಾಹಿಯಲ್ಲೂ ನಟಿಸಿದ್ದಾರೆ. ಒಂದು ಚಿತ್ರಕ್ಕೆ 6-7 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಆದರೆ ಖುಷಿ ಚಿತ್ರಕ್ಕೆ 4 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಸಚಿನ್ ಕೇಡೇಕರ್: ಸಚಿನ್ ಕೇತೇಕರ್ ಅವರು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಖುಷಿ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರಿಗೆ 50 ಲಕ್ಷ ರೂಪಾಯಿ ವೇತನ ನೀಡಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಅ.19ರಂದು ಬಹು ನಿರೀಕ್ಷಿತ ‘ಘೋಸ್ಟ್’ ತೆರೆಗೆ; ವಿದೇಶದಲ್ಲೂ ‘ಬಿಗ್ ಡ್ಯಾಡಿ’ ಹವಾ ಜೋರು!
ಶರಣ್ಯ ಪೊನ್ವಣ್ಣನ್: ಶರಣ್ಯಾ ಪೊನ್ವಣ್ಣನ್ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಅನೇಕ ನಾಯಕರಿಗೆ ತಾಯಿಯಾಗಿ ನಟಿಸಿದ್ದಾರೆ. ಅವರು ಖುಷಿ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಇದರಲ್ಲಿ ನಟಿಸಲು 30 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ರೋಹಿಣಿ: ರೋಹಿಣಿ 80ರ ದಶಕದ ಜನಪ್ರಿಯ ನಾಯಕಿಯರಲ್ಲಿ ಒಬ್ಬರು. ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ಕಾಲಕಾಲಕ್ಕೆ ಕೆಲವು ಸಂದರ್ಶನ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಅವರು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಖುಷಿ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದಕ್ಕಾಗಿ ಅವರಿಗೆ 20 ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿದೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.