AI Device: ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ದಿಮತ್ತೆ ಸಾಧನಗಳ ಬಳಕೆ ಹೆಚ್ಚಾಗಿದೆ. ಕೃತಕ ಬುದ್ದಿಮತ್ತೆ ಎಂದರೆ ಎಐ ಸಾಧನಗಳು ತುಂಬಾ ಹೈಟೆಕ್ ಸಾಧನಗಲಾಗಿದ್ದು ಇವುಗಳಿಂದ ಸಾಕಷ್ಟು ಕಲಿಯಬಹುದು ಎಂಬುದರಲ್ಲಿ ಯಾವುದೇ ಅನುಮಾನಗಲಿಲ್ಲ. ಇತ್ತೀಚಿನ ದಿನಗಳಲ್ಲಿ ಎಐ ಸಾಧನಗಳು ತುಂಬಾ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತವೆ. ಹಾಗಾಗಿ, ಬಹುತೇಕ ಜನರು ಈ ಸಾಧನವನ್ನು ಖರೀದಿಸುತ್ತಾರೆ. ಆದರೆ, ಇದು ನಿಮ್ಮ ವೈಯಕ್ತಿಕ ಡೇಟಾಗೆ ಎಷ್ಟು ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ?
AI ಸಾಧನಗಳು ಏಕೆ ಅಪಾಯಕಾರಿ?
ಕೃತಕ ತಂತ್ರಜ್ಞಾನವನ್ನು ಹೊಂದಿರುವ ಅನೇಕ ಸಾಧನಗಳು ನಮ್ಮ ಮನೆಯ ವೈಯಕ್ತಿಕ ಮಾಹಿತಿಯನ್ನು ರೆಕಾರ್ಡ್ ಮಾಡುತ್ತಿವೆ ಎಂದು ನಿಮಗೆ ತಿಳಿದಿದೆಯೇ? ಹೌದು, ನಿಖರವಾಗಿ ಹೇಳುವುದಾದರೆ ಎಐ ಸಾಧನಗಳು ಎಂದರೆ ಕೃತಕ ಬುದ್ದಿಮತ್ತೆ ಸಾಧನಗಳು ನಿಮ್ಮ ಫೇಸ್ಬುಕ್ ಮಾಹಿತಿಯಿಂದ ಹಿಡಿದು ಬ್ಯಾಂಕ್ ಖಾತೆಯ ವಿವರಗಳವರೆಗೆ ಎಲ್ಲಾ ಮಾಹಿತಿಗಳನ್ನು ಸಹ ರೆಕಾರ್ಡ್ ಮಾಡುತ್ತವೆ.
ಇದನ್ನೂ ಓದಿ- ನಿಮಗೂ ಪದೇ ಪದೇ ಫೋನ್ನ ನೆಟ್ವರ್ಕ್ ಸಮಸ್ಯೆ ಬಾಧಿಸುತ್ತಿದೆಯೇ? ಇಲ್ಲಿವೆ ಸುಲಭ ಪರಿಹಾರ
ಈ ಸಾಧನವು AI ಜೊತೆಗೆ ಎಸಿ, ಸ್ಮಾರ್ಟ್ಫೋನ್, AI ಸಹಾಯಕ ಸಾಧನ ಇತ್ಯಾದಿಗಳನ್ನು ಒಳಗೊಂಡಿರುವ ಯಾವುದಾದರೂ ಆಗಿರಬಹುದು. ಹಾಗಾಗಿ ಇವುಗಳನ್ನು ಅಗತ್ಯವಿರುವ ಸಮಯದಲ್ಲಿ ಮಾತ್ರ ಆನ್ ಮಾಡುವಂತೆಯೂ, ಅಗತ್ಯ ಇಲ್ಲದಿದ್ದಾಗ ಆ ಸಾಧನವನ್ನು ಆಫ್ ಮಾಡುವಂತೆಯೂ ಸಲಹೆ ನೀಡಲಾಗುತ್ತದೆ. ಇದರಿಂದ ವೈಯಕ್ತಿಕ ಮಾಹಿತಿಯನ್ನು ಡೇಟಾ ಹಬ್ಗೆ ರವಾನಿ ರವಾನಿಸುವುದನ್ನು ತಪ್ಪಿಸಬಹುದು ಎಂದು ಹೇಳಲಾಗುತ್ತದೆ.
AI ಸಾಧನಗಳು ವೈಯಕ್ತಿಕ ಮಾಹಿತಿಯನ್ನು ಹೇಗೆ ಕದಿಯುತ್ತವೆ?
ಬಹುತೇಕ ಸಂದರ್ಭಗಳಲ್ಲಿ ಧ್ವನಿಯ ಮೂಲಕ ಎಐ ಸಾಧನಗಳು ವೈಯಕ್ತಿಕ ಮಾಹಿತಿಗಳನ್ನು ಆಳಿಸುತ್ತವೆ. ಇದನ್ನು ಈ ರೀತಿ ಸುಲಭವಾಗಿ ಅರ್ಥ ಮಾಡಿಕೊಳ್ಳಿ, ನೀವು ಮಾತನಾಡುತ್ತಲೇ ಇದ್ದಾಗ, ಆ ಸಮಯದಲ್ಲಿ, ಇಂಟರ್ನೆಟ್ ಬಳಸುವಾಗ, ನಿಮ್ಮ ಮಾಹಿತಿಯನ್ನು ರೆಕಾರ್ಡ್ ಮಾಡಿ, ಬಳಿಕ ಈ ಮಾಹಿತಿಯನ್ನು ಫಾರ್ವರ್ಡ್ ಮಾಡಿದರೆ ಹ್ಯಾಕರ್ಗಳು ನಿಮ್ಮ ಮಾಹಿತಿಯನ್ನು ದುರುಪಯೋಗ ಪಡಿಸಿಕೊಳ್ಳಬಹುದು.
ಇದನ್ನೂ ಓದಿ- ಫ್ರಿಡ್ಜ್ನಲ್ಲಿರುವ ಈ ಬಟನ್ ಒತ್ತಲು ನೀವೂ ಭಯ ಪಡುತ್ತೀರಾ? ಈ ಸುದ್ದಿಯನ್ನೊಮ್ಮೆ ಓದಿ
ಟೈಪಿಂಗ್ ಮಾದರಿಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರುವ ಎಐ:
ಇತ್ತೀಚಿನ ದಿನಗಳಲ್ಲಿ ಎಐ ಎಷ್ಟು ಹೈಟೆಕ್ ಆಗಿದೆ ಎಂದರೆ ಇದು ಕೇವಲ ನಿಮ್ಮ ಧ್ವನಿಯಿಂದ ಮಾತ್ರವಲ್ಲ ನಿಮ್ಮ ಟೈಪಿಂಗ್ ಶೈಲಿಯನ್ನು ಸಹ ಅರ್ಥಮಾಡಿಕೊಳ್ಳುತ್ತದೆ. ನಿಮ್ಮ ಟೈಪಿಂಗ್ನಿಂದಲೂ ಎಐ ನಿಮ್ಮ ಮಾಹಿತಿಗಳನ್ನು ಕಲೆ ಹಾಕಬಹುದು ಎಂಬ ಬಗ್ಗೆಯೂ ಹಲವು ವರದಿಗಳು ಹೊರಬಂದಿವೆ. ವರದಿಯೊಂದರ ಪ್ರಕಾರ, ಕೆಲವೊಮ್ಮೆ ಉದ್ದುದ್ದ ಪಾಸ್ವರ್ಡ್ ಅನ್ನು ಕೊಟ್ಟಾಗ ಅದನ್ನು ನಾವೇ ಮರೆಯಬಹುದು. ಆದರೆ, ಎಐ ನಿಮ್ಮ ಪಾಸ್ವರ್ಡ್ ಅನ್ನು ನೆನಪಿಡುತ್ತದೆ. ಹಾಗಾಗಿ ಈ ಬಗ್ಗೆಯೂ ಜಾಗರೂಕರಾಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.