7th Pay Commission: ಡಿಎ ಹೆಚ್ಚಳದ ಬಳಿಕ ಸರ್ಕಾರಿ ನೌಕರರ ತುಟ್ಟಿಭತ್ಯೆ 3 ಲಕ್ಷ 14 ಸಾವಿರ 088 ಆಗಲಿದೆ, ಸಿಗಲಿದೆ ಬಂಪರ್ ಲಾಭ!

DA Hike: ಶೀಘ್ರದಲ್ಲಿಯೇ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.4 ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಇಂತಹ ಪರಿಸ್ಥಿತಿಯಲ್ಲಿ ನೌಕರರ ಒಟ್ಟು ಡಿಎ ಶೇ.46ಕ್ಕೆ ತಲುಪಲಿದೆ. ಪ್ರಸ್ತುತ ಸರ್ಕಾರಿ ನೌಕರರಿಗೆ ಶೇಲ್ 42ರಷ್ಟು ಡಿಎ ನೀಡಲಾಗುತ್ತಿದೆ. ಒಂದೊಮ್ಮೆ ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಾದ ಬಳಿಕ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಏರಿಕೆಯಾಗಲಿದೆ. 

Written by - Nitin Tabib | Last Updated : Sep 11, 2023, 08:21 PM IST
  • ಜುಲೈ 2023 ರ ತುಟ್ಟಿಭತ್ಯೆ ಸೆಪ್ಟೆಂಬರ್ ಅಂತ್ಯದೊಳಗೆ ಘೋಷಣೆಯಾಗುವ ನಿರೀಕ್ಷೆ ಇದೆ.
  • ಆದರೆ, ಅಂತಿಮ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಪ್ರಕಟಗೊಂಡಿಲ್ಲ.
  • ಅದಕ್ಕೆ, ಸಂಪುಟದಿಂದ ಅನುಮೋದನೆ ನಿರೀಕ್ಷಿಸಲಾಗುತ್ತಿದೆ.
  • 4ರಷ್ಟು ಏರಿಕೆಯಾಗಲಿದೆ ಎಂಬುದು ಈವರೆಗೆ ಬಂದಿರುವ ಕೈಗಾರಿಕಾ ಕಾರ್ಮಿಕರ ಅಂಕಿ ಅಂಶಗಳಿಂದ ಸ್ಪಷ್ಟವಾಗಿದೆ.
7th Pay Commission: ಡಿಎ ಹೆಚ್ಚಳದ ಬಳಿಕ ಸರ್ಕಾರಿ ನೌಕರರ ತುಟ್ಟಿಭತ್ಯೆ 3 ಲಕ್ಷ 14 ಸಾವಿರ 088 ಆಗಲಿದೆ, ಸಿಗಲಿದೆ ಬಂಪರ್ ಲಾಭ! title=

ಬೆಂಗಳೂರು: ಕೇಂದ್ರ ಸರ್ಕಾರಿ ನೌಕರರಿಗೆ ಈ ವರ್ಷದ ಅತಿ ದೊಡ್ಡ ಶುಭ ಸುದ್ದಿ ಇನ್ನೇನು ಕೆಲವೇ ದಿನಗಳಲ್ಲಿ ಹೊರಬೀಳುವ ನಿರೀಕ್ಷೆ ಇದೆ. ಏಕೆಂದರೆ, ಅವರ ತುಟ್ಟಿಭತ್ಯೆ ಹೆಚ್ಚಳದ ಚಿತ್ರಣ ಸ್ಪಷ್ಟವಾಗಲಿದೆ. ನೌಕರರು ಪ್ರತಿ ವರ್ಷ ಎರಡು ಬಾರಿ ತುಟ್ಟಿ ಭತ್ಯೆಯ ಲಾಭವನ್ನು ಪಡೆಯುತ್ತಾರೆ. ಈ ವರ್ಷದ ಎರಡನೇ ಬಾರಿಯ ತುಟ್ಟಿಭತ್ಯೆ ಘೋಷಣೆಯಾಗಬೇಕಿದೆ. ಡಿಎ ಶೇ.4ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇಂತಹ ಪರಿಸ್ಥಿತಿಯಲ್ಲಿ, ನೌಕರರ  ಒಟ್ಟು ಡಿಎ 46% ತಲುಪುತ್ತದೆ. ಪ್ರಸ್ತುತ ಶೇ.42ರಷ್ಟು ಡಿಎ ನೀಡಲಾಗುತ್ತಿದೆ. ತುಟ್ಟಿಭತ್ಯೆ ಘೋಷಣೆಯಾದ ತಕ್ಷಣ ಕೇಂದ್ರ ನೌಕರರ ವೇತನದಲ್ಲಿ ಭಾರಿ ಏರಿಕೆಯಾಗಲಿದೆ. ವಿಶೇಷವಾಗಿ ದೊಡ್ಡ ವೇತನ ಶ್ರೇಣಿಯ ನೌಯರರಿಗೆ ಇದರಿಂದ ದೊಡ್ಡ ಲಾಭವಾಗಲಿದೆ. 

ತುಟ್ಟಿಭತ್ಯೆ ಶೇ.46ರಷ್ಟು ಹೆಚ್ಚಳ
ಜುಲೈ 2023 ರ ತುಟ್ಟಿಭತ್ಯೆ ಸೆಪ್ಟೆಂಬರ್ ಅಂತ್ಯದೊಳಗೆ ಘೋಷಣೆಯಾಗುವ ನಿರೀಕ್ಷೆ ಇದೆ. ಆದರೆ, ಅಂತಿಮ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಪ್ರಕಟಗೊಂಡಿಲ್ಲ. ಅದಕ್ಕೆ, ಸಂಪುಟದಿಂದ ಅನುಮೋದನೆ ನಿರೀಕ್ಷಿಸಲಾಗುತ್ತಿದೆ. 4ರಷ್ಟು ಏರಿಕೆಯಾಗಲಿದೆ ಎಂಬುದು ಈವರೆಗೆ ಬಂದಿರುವ ಕೈಗಾರಿಕಾ ಕಾರ್ಮಿಕರ ಅಂಕಿ ಅಂಶಗಳಿಂದ ಸ್ಪಷ್ಟವಾಗಿದೆ. ಈ ಹಿಂದೆ, 2023 ರ ಮಾರ್ಚ್‌ನಲ್ಲಿ ತುಟ್ಟಿಭತ್ಯೆಯನ್ನು ಘೋಷಿಸಲಾಗಿತ್ತು, ಇದರಲ್ಲಿ ಶೇಕಡಾ 4 ರಷ್ಟು ಹೆಚ್ಚಳವಾಗಿತ್ತು. ಇದರಿಂದ ನೌಕರರ ಡಿಎ ಶೇ.38ರಿಂದ ಶೇ.42ಕ್ಕೆ ಏರಿಕೆಯಾಗಿತ್ತು.

7 ನೇ ವೇತನ ಆಯೋಗದ ವೇತನ ಮ್ಯಾಟ್ರಿಕ್ಸ್ ಪ್ರಕಾರ, ಹಂತ-1 ರಲ್ಲಿ ಕೇಂದ್ರ ನೌಕರರ ಮೂಲ ವೇತನ ಶ್ರೇಣಿ 18,000 ರಿಂದ 56,900 ರೂ. ಆಗಿದೆ.  ಜುಲೈನಲ್ಲಿ ತುಟ್ಟಿಭತ್ಯೆ ಶೇ.4ರಷ್ಟು ಹೆಚ್ಚಾದರೆ, ಒಟ್ಟು ಡಿಎ ಶೇ.46ಕ್ಕೆ ತಲುಪುತ್ತದೆ.

46% DA ನಲ್ಲಿ ಲೆಕ್ಕಾಚಾರ
1. ಉದ್ಯೋಗಿಯ ಮೂಲ ವೇತನ 18,000 ರೂ
2. ಅಂದಾಜು ತುಟ್ಟಿ ಭತ್ಯೆ (46%) ರೂ 8,280/ತಿಂಗಳು
3. ಹೊಸ ತುಟ್ಟಿ ಭತ್ಯೆ (42%) ರೂ 7,560/ತಿಂಗಳು
4. ತುಟ್ಟಿಭತ್ಯೆ ಎಷ್ಟು ಹೆಚ್ಚಾಗಿದೆ? 8,280-7,560 = ರೂ 720/ತಿಂಗಳಿಗೆ
5. ವಾರ್ಷಿಕ ವೇತನದಲ್ಲಿ ಹೆಚ್ಚಳ 720X12= ರೂ 8,640

ಅಂದರೆ 18000 ರೂ ಮೂಲ ವೇತನ ಹೊಂದಿರುವ ಉದ್ಯೋಗಿಗಳ ವೇತನವು ಪ್ರತಿ ತಿಂಗಳು 720 ರೂಪಾಯಿಗಳಷ್ಟು ಹೆಚ್ಚಾಗುತ್ತದೆ. ವಾರ್ಷಿಕ ಆಧಾರದ ಮೇಲೆ 8,640 ರೂ.

ನಾವು ಲೆವೆಲ್-1 ಗರಿಷ್ಠ ವೇತನ ಶ್ರೇಣಿಯನ್ನು ನೋಡಿದರೆ, ಹಣವು ಎಷ್ಟು ಹೆಚ್ಚಾಗುತ್ತದೆ?
46% DA ನಲ್ಲಿ ಲೆಕ್ಕಾಚಾರ
1. ಉದ್ಯೋಗಿಯ ಮೂಲ ವೇತನ 56,900 ರೂ
2. ಅಂದಾಜು ತುಟ್ಟಿ ಭತ್ಯೆ (46%) ರೂ 26,174/ತಿಂಗಳು
3. ಇಲ್ಲಿಯವರೆಗೆ ತುಟ್ಟಿಭತ್ಯೆ (42%) ರೂ 23,898/ತಿಂಗಳು
4. ತುಟ್ಟಿಭತ್ಯೆ ಎಷ್ಟು ಹೆಚ್ಚಾಗಿದೆ 26,174-23,898 = ರೂ 2,276/ತಿಂಗಳು
5. ವಾರ್ಷಿಕ ವೇತನದಲ್ಲಿ ಹೆಚ್ಚಳ 2,276X12= ರೂ 27,312

ಗರಿಷ್ಠ ಮೂಲ ವೇತನ ಶ್ರೇಣಿಯಲ್ಲಿ ಬೀಳುವ ನೌಕರರ ವೇತನವು ಪ್ರತಿ ತಿಂಗಳು 2276 ರೂ.ಗಳಷ್ಟು ಹೆಚ್ಚಾಗುತ್ತದೆ. ವಾರ್ಷಿಕವಾಗಿ ನೋಡಿದರೆ 27,312 ರೂ.

ಒಟ್ಟು ತುಟ್ಟಿ ಭತ್ಯೆ ಎಷ್ಟು?
ಕೇಂದ್ರ ನೌಕರರ ಲೆವೆಲ್-1 ಪೇ ಬ್ಯಾಂಡ್‌ನಲ್ಲಿರುವ ಮೇಲ್ವರ್ಗದ ನೌಕರರ ಮೂಲ ವೇತನ 56,900 ರೂ. ನಾವು ಈ ಬ್ರಾಕೆಟ್ ಅನ್ನು ನೋಡಿದರೆ, ಒಟ್ಟು ತುಟ್ಟಿಭತ್ಯೆ ಶೇಕಡಾ 46 ರಷ್ಟಿದ್ದರೆ, ಅವರ ವೇತನದಲ್ಲಿ ಪ್ರತಿ ತಿಂಗಳು ತುಟ್ಟಿಭತ್ಯೆ 26,174 ರೂ. ವಾರ್ಷಿಕವಾಗಿ ನೋಡಿದರೆ ಒಟ್ಟು ತುಟ್ಟಿ ಭತ್ಯೆ 3 ಲಕ್ಷದ 14 ಸಾವಿರದ 088 ರೂ.ಆಗುತ್ತದೆ. 
 

Trending News