'ಶೋಲೆ' ಸಿನಿಮಾದ ಬೀರ್‌ಬಲ್ ಇನ್ನಿಲ್ಲ: ಹಿರಿಯ ಹಾಸ್ಯನಟ ಸತೀಂದರ್ ಕುಮಾರ್ ಖೋಸ್ಲಾ ನಿಧನ!

ಹಿರಿಯ ಹಾಸ್ಯ ನಟ  ಸತಿಂದರ್‌ ಕುಮಾರ್‌ ಖೋಸ್ಲಾ ಭಾರತೀಯ ಚಿತ್ರರಂಗದ ದಿ ಬೆಸ್ಟ್‌ ಸಿನಿಮಾ 'ಶೋಲೆ'ಯಲ್ಲಿ ಬೀರ್‌ಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಇವರು ಅದೇ ಪಾತ್ರದಿಂದಲೇ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು.

Written by - Savita M B | Last Updated : Sep 13, 2023, 01:12 PM IST
  • ಭಾರತೀಯ ಚಿತ್ರರಂಗದ ದಿಗ್ಗಜ ಸತೀಂದ್ರ ಕುಮಾರ್ ಖೋಸ್ಲಾ ನಿಧನ
  • ಮುಂಬೈನ ಕೋಕಿಲಾಬೆನ್‌ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ಹೃದಯಾಘಾತದಿಂದ ಕೊನೆಯುಸಿರೆಳೆದ ಸತೀಂದರ್ ಕುಮಾರ್ ಖೋಸ್ಲಾ
'ಶೋಲೆ' ಸಿನಿಮಾದ ಬೀರ್‌ಬಲ್ ಇನ್ನಿಲ್ಲ: ಹಿರಿಯ ಹಾಸ್ಯನಟ ಸತೀಂದರ್ ಕುಮಾರ್ ಖೋಸ್ಲಾ ನಿಧನ! title=

Satinder Kumar Khosla: ಹಿರಿಯ ಹಾಸ್ಯ ನಟ ಮತ್ತು ಬೀರಬಲ್‌ ಎಂದೇ ಖ್ಯಾತಿ ಪಡೆದಿದ್ದ ಸತಿಂದರ್‌ ಕುಮಾರ್‌ ಖೋಸ್ಲಾ ಅವರು ಮುಂಬೈನ ಕೋಕಿಲಾಬೆನ್‌ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.  

ಭಾರತೀಯ ಚಿತ್ರರಂಗದ ದಿಗ್ಗಜ ಸತೀಂದ್ರ ಕುಮಾರ್ ಖೋಸ್ಲಾ ನಿಧನಕ್ಕೆ ಬಾಲಿವುಡ್‌ ಮಂದಿ ಮಿಡಿಯುತ್ತಿದ್ದಾರೆ. ಭಾರತೀಯ ಚಿತ್ರರಂಗದ ದಿ ಬೆಸ್ಟ್‌ ಸಿನಿಮಾ 'ಶೋಲೆ'ಯಲ್ಲಿ ಬೀರ್‌ಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಇವರು ಅದೇ ಪಾತ್ರದಿಂದಲೇ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು. ಅಲ್ಲದೇ ಬೀರ್‌ಬಲ್ ಎಂದೇ ಖ್ಯಾತಿಪಡೆದಿದ್ದರು. ಇವರಿಗೆ 80 ವರ್ಷ ವಯಸ್ಸಾಗಿತ್ತು. 

ಇದನ್ನೂ ಓದಿ- ಸೈಫ್ ಜೊತೆಗಿನ ವಯಸ್ಸಿನ ಅಂತರದ ಟೀಕೆಗಳಿಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರಿಸಿದ ಕರೀನಾ ಕಪೂರ್!!

ಸದ್ಯ ಬಾಲಿವುಡ್‌ನಲ್ಲಿ 'ಶೋಲೆ' ಬೀರ್‌ಬಲ್ ಅಂತಲೇ ಜನಪ್ರಿಯರಾಗಿದ್ದ ಸತೀಂದರ್ ಕುಮಾರ್ ಖೋಸ್ಲಾ ಅವರು ಇಹಲೋಕ ತ್ಯಜಿಸಿರುವ ವಿಷಯವನ್ನು ಅವರ ಗೆಳೆಯ ಜುಗ್ನು ಹಂಚಿಕೊಂಡಿದ್ದು, ಈ ಹಿರಿಯ ನಟನ ಅಂತ್ಯಕ್ರಿಯೆಯನ್ನು ಬುಧವಾರ (ಸೆಪ್ಟೆಂಬರ್ 13) ನಡೆಸಲಾಗುತ್ತಿದೆ ಎಂದಿದ್ದಾರೆ. 

ಇನ್ನು ಬಾಲಿವುಡ್‌ ಸಿನಿರಂಗವನ್ನು ಹೊರತುಪಡಿಸಿ ಟಿವಿ ಕಲಾವಿದರ ಸಂಘವೂ ಹಿರಿಯ ಹಾಸ್ಯನಟ ಸತೀಂದರ್ ಕುಮಾರ್ ಖೋಸ್ಲಾ ನಿಧನಕ್ಕೆ ಸಂತಾಪ ಸೂಚಿಸಿದೆ. ಸಾಕಷ್ಟು ಹಾಸ್ಯ ಪಾತ್ರಗಳಿಂದ ಎಲ್ಲರ ಮೆಚ್ಚುಗೆ ಪಡೆದ ಸತೀಂದರ್ ಕುಮಾರ್ ಖೋಸ್ಲಾ ಅವರ ದೇಹವೇ ಹಾಸ್ಯ ಪ್ರಜ್ಞೆಗೆ ಮತ್ತಷ್ಟು ಸಾಥ್ ನೀಡುತ್ತಿತ್ತು. ಅಲ್ಲದೇ ಇವರು ಅನೇಕ ಜನಪ್ರಿಯ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ- ʼಕಾದಂಬರಿʼಯ ವಿಲನ್‌, ಹೊಸ ಫೋಟೊಶೂಟ್‌ನಲ್ಲಿ ಕಿರುತೆರೆ ನಟಿ ಅನಿಕಾ ಸಿಂಧ್ಯಾ

ಸತೀಂದರ್ ಕುಮಾರ್ ಖೋಸ್ಲಾ ಅವರು ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬರೀ ಬಾಲಿವುಡ್‌ ಮಾತ್ರವಲ್ಲ ಪಂಜಾಬಿ, ಬೋಜ್ಪುರಿ, ಮರಾಠಿ ಚಿತ್ರಗಳಲ್ಲೂ ಇವರು ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News