Trending News: ಸಾಮಾನ್ಯವಾಗಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಬಹುತೇಕ ಚಲನ ಚಿತ್ರಗಳಲ್ಲಿ ಆಗಸದಿಂದ ಒಂದು ಹಾರುವ ತಟ್ಟೆ ಭೂಮಿಗೆ ಬಂದು ಇಲ್ಲಿಯುವುದನ್ನು ನೋಡಿರಬಹುದು, ಅಷ್ಟೇ ಯಾಕೆ ಅದರಿಂದ ಕೆಲ ಎರಡು ಕಾಲುಗಳುಳ್ಳ ಜನರು ಕೂಡ ಭೂಮಿಗೆ ಇಳಿಯುವುದನ್ನು ನೀವು ನೋಡಿರಬಹುದು. ಇದುವರೆಗೆ ಇರುವ ಪ್ರಚಲಿತ ಜ್ಞಾನದ ಪ್ರಕಾರ ಅವುಗಳನ್ನು ಎಲಿಯನ್ ಗಳೆಂದು ಗುರುತಿಸಲಾಗುತ್ತದೆ. ಏಕೆಂದರೆ ಎಲಿಯನ್ಸ್ ಅವುಗಳಂತೆಯೇ ಕಾಣಿಸುತ್ತಿರಬಹುದು ಎಂಬುದು ಬಹುತೇಕರ ಊಹೆಯಾಗಿದೆ.
ಆದರೆ, ಈ ರೀತಿ ಆಗುವುದನ್ನು ಜನ ಕೇವಲ ಚಲನಚಿತ್ರಗಳಲ್ಲಿಯೇ ಮಾತ್ರ ವೀಕ್ಷಿಸಿದ್ದಾರೆ. ಆದರೆ, ಇದುವರೆಗೆ ನಿಜವಾಗಿಯೂ ಎಲಿಯನ್ಸ್ ಗಳಿವೆಯಾ ಅಥವಾ ಇಲ್ಲ ಎಂಬುದರ ಬಗ್ಗೆ ನಿಖರ ಮಾಹಿತಿ ಯಾರ ಬಳಿಯೂ ಇಲ್ಲ. ನಿಜವಾಗಿಯೂ ಎಲಿಯನ್ಸ್ ಗಳಿವೆಯಾ ಅಥವಾ ಇದೊಂದು ಕೇವಲ ಕಾನ್ಸ್ಪಿರೆಸಿ ಥಿಯರಿ ಆಗಿದೆಯಾ? ಇಂತಹ ಹಲವು ಪ್ರಶ್ನೆಗಳ ನಡುವೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ.
ಇದನ್ನೂ ಓದಿ-ಪೈಲ್ಸ್ ಸೇರಿದಂತೆ 5 ಕಾಯಿಲೆಗಳಿಗೆ ಸಂಜೀವನಿಗೆ ಸಮಾನ ಈ ಹಣ್ಣು, ಇಂದೇ ಸೇವನೆ ಆರಂಭಿಸಿ!
ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿರುವ ಈ ವಿಡಿಯೋವನ್ನು ಸ್ಪ್ಯಾನಿಶ್ ಸುದ್ದಿ ವೆಬ್ಸೈಟ್ 'ಮಾರ್ಕಾ' ಜಾರಿಗೊಳಿಸಿದೆ. ಈ ವಿಡಿಯೋ ಪ್ರಕಾರ ಮಿಕ್ಸಿಕೋ ನಗರದ ವಿಜ್ಞಾನಿಗಳು ಕಾರ್ಯಕ್ರಮವೊಂದರಲ್ಲಿ ನಮ್ಮ ಕಲ್ಪನೆಯಲ್ಲಿರುವ ಎಲಿಯನ್ಸ್ ಹೋಲುವ ಎರಡು ಎಲಿಯನ್ಸ್ ಶವಗಳನ್ನು ವಿಶ್ವದ ಮುಂದೆ ತೆರೆದಿಟ್ಟಿದ್ದಾರೆ
ಇದನ್ನೂ ಓದಿ-ಎಲೊವೇರಾ ಜೊತೆಗೆ ಮನೆಯಂಗಳದಲ್ಲಿ ಈ 3 ಸಸ್ಯಗಳು, ಝಣಝಣ ಕಾಂಚಾಣದ ಸುರಿಮಳೆ ಗ್ಯಾರಂಟಿ!
ಮೆಕ್ಸಿಕನ್ ಪತ್ರಕರ್ತ ಹಾಗೂ ಯುಫೋಲಾಜಿಸ್ಟ್ ಜೈಮೆ ಮೈಸನ್ ಅವರು ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಎರಡು ಪ್ರತ್ಯೇಕ ಕಟ್ಟಿಗೆಯ ಪೆಟ್ಟಿಗೆಯಲ್ಲಿ 'ಮನುಷ್ಯರಲ್ಲದ ಶವಗಳನ್ನು' ನೋಡಬಹುದು. ಈ ಸಂದರ್ಭದಲ್ಲಿ ಅಮೆರಿಕನ್ಸ್ ಫಾರ್ ಸೆಫ್ ಏರೋಸ್ಪೇಸ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಹಾಗೂ ಯುಎಸ್ ನೆವಿಯ ಮಾಜಿ ಪೈಲಟ್ ರೆಯಾನ್ ಗ್ರೇವ್ಸ್ ಕೂಡ ಉಪಸ್ಥಿತರಿದ್ದರು. ಅದೇನೇ ಇದ್ದರೂ ಪ್ರಸ್ತುತ ಈ ವಿಡಿಯೋ ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ನಲ್ಲಿ ವೈರಲ್ ಆಗುತ್ತಿರುವುದಂತೂ ನಿಜ..
Scientists unveiling two alleged alien corpses took place in Mexico, which are retrieved from Cusco, Peru. pic.twitter.com/rjfz9IMf37
— Indian Tech & Infra (@IndianTechGuide) September 13, 2023
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.