ಬೆಂಗಳೂರು: ಸೆ.18 ದೊಡ್ಡಹಬ್ಬಕ್ಕೆ ತೋತಾಪುರಿ2 ತೋರಣ ಕಲರ್ಫುಲ್ ಆಗಿ ರೆಡಿಯಾಗಿದೆ.OG ಶಿವಣ್ಣನಿಂದ ತೋತಾಪುರಿ 2ಟ್ರೈಲರ್ ರಿಲೀಸ್ ಮಾಡಲಿದ್ದಾರೆ.UI, ಭೀಮನ ಜೊತೆ ತೋತಾಪುರಿ 2 ಟ್ರೈಲರ್ ಕೂಡ ಹಬ್ಬದ ಸಂಭ್ರಮದಲ್ಲೇ ರಿಲೀಸ್ ಆಗುತ್ತಿದೆ.ಗೌರಿಗಣೇಶ ಹಬ್ಬಕ್ಕೆ ರಸಭರಿತ ತೋತಾಪುರಿ2 ಟ್ರೀಲರ್ ಜೊತೆ ನೀವು ಹಬ್ಬದ ಊಟ ಮಾಡಬಹುದು.
ಈಗಾಗಲೇ ತೋತಾಪುರಿ 2 ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ತೋತಾಪುರಿ 1 ರಲ್ಲಿ ಜಾತಿ-ಧರ್ಮ ಹಾಗೂ ಮಡಿವಂತಿಕೆ ಬಗ್ಗೆ ಕಾಮಿಡಿ ಮೂಲಕ ಹೇಳಲಾಗಿತ್ತು. ಇದೀಗ ತೋತಾಪುರಿ 2 ಚಿತ್ರ ರಿಲೀಸ್ಗೆ ರೆಡಿಯಾಗಿದ್ದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ಚಿತ್ರತಂಡ ಇನ್ನೂ ಏನಾದ್ರೂ ವಿಭಿನ್ನವಾಗಿ ಸಿನಿಮಾ ಕೊಡಬೇಕು ಅಂತ ಕೆಲ ದೃಶ್ಯಗಳನ್ನು ರೀ ಶೂಟ್ ಮಾಡಿದ್ದಾರೆ. ಡಾಲಿ ಧನಂಜಯ್ ವಿಭಿನ್ನ ಪಾತ್ರದ ಮೂಲಕ ಸಿನಿ ಪ್ರೇಮಿಗಳ ಮನಗೆಲ್ಲಲು ರೆಡಿಯಾಗಿದ್ದಾರೆ. ತೋತಾಪುರಿ ಮೊದಲ ಭಾಗದಲ್ಲಿ ಅವರ ಪಾತ್ರದ ಪರಿಚಯವಾಗಿತ್ತು. ಆದರೆ ಈ ಭಾಗದಲ್ಲಿ ಅವರು ಎಷ್ಟು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ, ಗೆಟಪ್, ಡೈಲಾಗ್ ಸೇರಿದಂತೆ ಯಾವುದೇ ವಿಷಯದ ಕುರಿತು ಚಿತ್ರತಂಡ ಹೆಚ್ಚಿನ ಮಾಹಿತಿ ಹೊರ ಹಾಕಿರಲಿಲ್ಲ.
ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ : ಚಾಮರಾಜನಗರದಲ್ಲಿ ರೈತರ ಪ್ರತಿಭಟನೆ
ಡಾಲಿ ಧನಂಜಯ್ ವಿಭಿನ್ನ ಪಾತ್ರದ ಮೂಲಕ ಸಿನಿ ಪ್ರೇಮಿಗಳ ಮನಗೆಲ್ಲಲು ರೆಡಿಯಾಗಿದ್ದಾರೆ. ತೋತಾಪುರಿ ಮೊದಲ ಭಾಗದಲ್ಲಿ ಅವರ ಪಾತ್ರದ ಪರಿಚಯವಾಗಿತ್ತು.ಆದರೆ ಈ ಭಾಗದಲ್ಲಿ ಅವರು ಎಷ್ಟು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ, ಗೆಟಪ್, ಡೈಲಾಗ್ ಸೇರಿದಂತೆ ಯಾವುದೇ ವಿಷಯದ ಕುರಿತು ಚಿತ್ರತಂಡ ಹೆಚ್ಚಿನ ಮಾಹಿತಿ ಹೊರ ಹಾಕಿರಲಿಲ್ಲ. ಜಗತ್ತೇ ಒಂದು ಮನೆ, ನಾವೆಲ್ಲ ಒಂದೇ ಸೂರಿನಡಿ ಬದುಕುತ್ತಿರುವವರು ಎನ್ನುವ ಭಾವೈಕ್ಯತೆಯ ಸಂದೇಶ ಸಾರುವ ಸ್ಟ್ರಾಂಗ್ ಕಂಟೆಂಟ್ ಒಳಗೊಂಡಿದ್ದ ತೋತಾಪುರಿ ಚಿತ್ರವು ಪ್ರೇಕ್ಷಕರಿಂದ, ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದು ಯಶಸ್ವಿಯಾಗಿತ್ತು. ಆಗಲೇ ತೋತಾಪುರಿ ಚಿತ್ರದ ಎರಡನೇ ಭಾಗವನ್ನು ಮಾಡುತ್ತಿರುವುದಾಗಿ ನಿರ್ದೇಶಕ ವಿಜಯಪ್ರಸಾದ್ ಸೂಚನೆ ನೀಡಿದ್ದರು. ಅದರಂತೆ ಈಗ ತೋತಾಪುರಿ ಭಾಗ-2 ನಿರ್ಮಾಣವಾಗಿದ್ದು, ಶೀಘ್ರದಲ್ಲೇ ತೆರೆ ಕಾಣಲು ಸಿದ್ದವಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.