Viral Video: ನಾಟಕದ ವೇಳೆ ವೇದಿಕೆಯಲ್ಲೇ ಕುಸಿದುಬಿದ್ದು ಯುವಕ ಸಾವು, ಭಯಾನಕ ವಿಡಿಯೋ ನೋಡಿ

ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಗುರುವಾರದ(ಸೆಪ್ಟೆಂಬರ್ 15) ಅಮಾವಾಸ್ಯೆ ರಾತ್ರಿಯಲ್ಲಿ ಗ್ರಾಮ ದೇವತೆ ಮುಕ್ತಾಕರ‌ ದೇವರ ಜಾತ್ರೆಯ ನಿಮಿತ್ಯ‌ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು.

Written by - Puttaraj K Alur | Last Updated : Sep 15, 2023, 06:05 PM IST
  • ನಾಟಕದ ವೇಳೆ ಹಠಾತ್ ಹೃದಯಾಘಾತದಿಂದ ಕುಸಿದು ಬಿದ್ದು ಪೋಸ್ಟ್ ಮ್ಯಾನ್ ಸಾವು!
  • ವಿಜಯಪುರ ಜಿಲ್ಲೆ ತಿಕೋಟ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ನಡೆದಿರುವ ಘಟನೆ
  • ಯುವಕ ಕುಸಿದು ಬೀಳುತ್ತಿರುವ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ
Viral Video: ನಾಟಕದ ವೇಳೆ ವೇದಿಕೆಯಲ್ಲೇ ಕುಸಿದುಬಿದ್ದು ಯುವಕ ಸಾವು, ಭಯಾನಕ ವಿಡಿಯೋ ನೋಡಿ   title=
ಹೃದಯಾಘಾತದಿಂದ ಪೋಸ್ಟ್ ಮ್ಯಾನ್ ಸಾವು!

ವಿಜಯಪುರ: ನಾಟಕ ಪ್ರದರ್ಶನದ ವೇಳೆ ರಂಗ ವೇದಿಕೆಯಲ್ಲೇ ಕುಸಿದು ಬಿದ್ದು ಯುವ ಕಲಾವಿದ ಸಾವನ್ನಪ್ಪಿರುವ ಘಟನೆ ನಡೆದಿದೆ. ಪೋಸ್ಟ್‍ಮ್ಯಾನ್ ಆಗಿದ್ದ ಯುವಕ ಶರಣು ಬಾಗಲಕೋಟೆ (24) ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಡಾನ್ಸ್ ಮಾಡುವಾಗಲೇ ಶರಣು ಬಾಗಲಕೋಟೆಗೆ ಹೃದಯಾಘಾತವಾಗಿತ್ತು. ಆತ ಕುಸಿದು ಬಿಳುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಸಿಸಿಬಿ ಕಸ್ಟಡಿಯಲ್ಲಿದ್ದಾಗ ದಿಢೀರನೆ ಮೂರ್ಛೆ ತಪ್ಪಿದ ಚೈತ್ರಾ ಕುಂದಾಪುರ

ಘಟನೆಯ ವಿವರ

 

ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಗುರುವಾರದ(ಸೆಪ್ಟೆಂಬರ್ 15) ಅಮಾವಾಸ್ಯೆ ರಾತ್ರಿಯಲ್ಲಿ ಕೋಟ್ಯಾಳ ಗ್ರಾಮ ದೇವತೆ ಮುಕ್ತಾಕರ‌ ದೇವರ ಜಾತ್ರೆಯ ನಿಮಿತ್ಯ‌ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು. ಈ ನಾಟಕದಲ್ಲಿ ಹಾಸ್ಯಪಾತ್ರ ಮಾಡಿದ್ದ ಶರಣು ಬಾಗಲಕೋಟೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮೃತ ಶರಣು ಬಾಗಲಕೋಟ ಅಂಚೆ ಇಲಾಖೆಯಲ್ಲಿ ಪೋಸ್ಟ್‍ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ‘ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ’ ಎಂಬ ನಾಟಕ ಪ್ರದರ್ಶನದ ವೇಳೆ ಈ ದುರ್ಘಟನೆ ಸಂಭವಿಸಿದೆ. ನಾಟಕ ಪ್ರದರ್ಶನ ವೇಳೆ ಡಾನ್ಸ್ ಮಾಡಲು ವೇದಿಕೆ ಏರಿದ್ದ ಶರಣುಗೆ ಹಠಾತ್ ಹೃದಯಾಘಾತವಾಗಿದೆ. ಇತ್ತೀಚೆಗಷ್ಟೇ ಪೋಸ್ಟ್‍ಮ್ಯಾನ್ ಆಗಿ ಶರಣು ನೇಮಕಗೊಂಡಿದ್ದ. ಶರಣು ಸಾವಿಗೀಡಾದ ಕಾರಣ ನಾಟಕ ಪ್ರದರ್ಶನ‌ ರದ್ದು ಮಾಡಲಾಯಿತು. ಮೃತನ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.

ಇದನ್ನೂ ಓದಿ: ಸರ್.ಎಂ. ವಿಶ್ವೇಶ್ವರಯ್ಯರಿಂದಲೇ ಬೆಂಗಳೂರಿಗೆ ಕಾವೇರಿ ನೀರು ಬಂದಿದ್ದು: ಡಿಸಿಎಂ ಡಿ.ಕೆ. ಶಿವಕುಮಾರ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News