Asia Cup ಫೈನಲ್ ಪಂದ್ಯದಿಂದ ಅಕ್ಷರ್ ಪಟೇಲ್ ಔಟ್! ಬದಲಿಯಾಗಿ 23ರ ಹರೆಯದ ಸ್ಟಾರ್ ಆಟಗಾರನಿಗೆ ಸ್ಥಾನ

Asia Cup 2023 final: ಏಷ್ಯಾಕಪ್ ಫೈನಲ್‌’ಗೂ ಮುನ್ನ ಅಕ್ಷರ್ ಪಟೇಲ್ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಫೈನಲ್ ಪಂದ್ಯ ಆಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಬಾಂಗ್ಲಾದೇಶ ವಿರುದ್ಧದ ಸೂಪರ್-4 ಪಂದ್ಯದಲ್ಲಿ ಅಕ್ಷರ್ ಗಾಯಗೊಂಡಿದ್ದರು.

Written by - Bhavishya Shetty | Last Updated : Sep 16, 2023, 01:45 PM IST
    • ಟೀಂ ಇಂಡಿಯಾ ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಬೇಕಾಗಿದೆ.
    • ತಂಡದಲ್ಲಿ ದೊಡ್ಡ ಬದಲಾವಣೆಯೊಂದು ನಡೆಯಲಿದೆ ಎಂಬ ಸುದ್ದಿ ಹೊರಬಿದ್ದಿದೆ.
    • ಅಕ್ಷರ್ ಪಟೇಲ್ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಫೈನಲ್ ಪಂದ್ಯ ಆಡಲು ಸಾಧ್ಯವಿಲ್ಲ.
Asia Cup ಫೈನಲ್ ಪಂದ್ಯದಿಂದ ಅಕ್ಷರ್ ಪಟೇಲ್ ಔಟ್! ಬದಲಿಯಾಗಿ 23ರ ಹರೆಯದ ಸ್ಟಾರ್ ಆಟಗಾರನಿಗೆ ಸ್ಥಾನ title=
Axar Patel

Asia Cup 2023 final, Team India: ಏಷ್ಯಾಕಪ್‌’ನ ಸೂಪರ್-4 ಸುತ್ತಿನ ಕೊನೆಯ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಬಾಂಗ್ಲಾದೇಶ ಸೋಲಿಸಿತು. ಇದೀಗ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಬೇಕಾಗಿದೆ. ಈ ಮಧ್ಯೆ, ತಂಡದಲ್ಲಿ ದೊಡ್ಡ ಬದಲಾವಣೆಯೊಂದು ನಡೆಯಲಿದೆ ಎಂಬ ಸುದ್ದಿ ಹೊರಬಿದ್ದಿದೆ.

ಇದನ್ನೂ ಓದಿ: ಮೂರು ವರ್ಷದ ಪ್ರೀತಿಗೆ ಮತ್ತೆ ಮುನ್ನುಡಿ ಬರೆದ ಶುಭ್ಮನ್-ಸಾರಾ!

ಏಷ್ಯಾಕಪ್ ಫೈನಲ್‌’ಗೂ ಮುನ್ನ ಅಕ್ಷರ್ ಪಟೇಲ್ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಫೈನಲ್ ಪಂದ್ಯ ಆಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಬಾಂಗ್ಲಾದೇಶ ವಿರುದ್ಧದ ಸೂಪರ್-4 ಪಂದ್ಯದಲ್ಲಿ ಅಕ್ಷರ್ ಗಾಯಗೊಂಡಿದ್ದರು. ಪ್ರಸ್ತುತ, ಅಕ್ಷರ್ ಗಾಯದ ಬಗ್ಗೆ ಯಾವುದೇ ಅಧಿಕೃತ ಅಪ್ಡೇಟ್ ಬಂದಿಲ್ಲ. ಆದರೆ ಅವರು ಫೈನಲ್‌’ನಲ್ಲಿ ಆಡುವುದು ಅನಿಶ್ಚಿತವಾಗಿದೆ.

ಬದಲಿಯಾಗಿ 23 ವರ್ಷದ ಆಟಗಾರನಿಗೆ ಅವಕಾಶ!

ಈ ಮಧ್ಯೆ, ಏಷ್ಯಾಕಪ್ ಫೈನಲ್‌ ಫೈಟ್’ನಲ್ಲಿ ಭಾರತ ತಂಡದ ಪರವಾಗಿ ವಾಷಿಂಗ್ಟನ್ ಸುಂದರ್ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಕ್ರಿಕ್‌’ಬಜ್ ವರದಿಯ ಪ್ರಕಾರ, 23 ವರ್ಷದ ಸುಂದರ್‌ ಅಕ್ಷರ್ ಪಟೇಲ್‌ ಬದಲಿಯಾಗಿ ಪಂದ್ಯವನ್ನಾಡಲಿದ್ದಾರೆ. ಸುಂದರ್ ಏಷ್ಯನ್ ಗೇಮ್ಸ್‌’ಗೆ ಆಯ್ಕೆಯಾದ ಭಾರತೀಯ ತಂಡದಲ್ಲಿ ಸ್ಥಾನ ಪಡೆದಿದ್ದು, ಪ್ರಸ್ತುತ ಬೆಂಗಳೂರಿನ ಎನ್‌’ಸಿಎಯಲ್ಲಿದ್ದಾರೆ. ಫೈನಲ್ ಪಂದ್ಯದ ನಂತರ ಅವರು ಮತ್ತೆ ಏಷ್ಯನ್ ಗೇಮ್ಸ್ ಶಿಬಿರವನ್ನು ಸೇರಲಿದ್ದಾರೆ.

ಇದನ್ನೂ ಓದಿ: ತನ್ನದೇ ತಂಡದ ಆಟಗಾರರಗೆ ಬಾಯಿಗೆ ಬಂದಂತೆ ಬೈದ ಬಾಬರ್ ಅಜಂ! ಮೈದಾನದಲ್ಲೇ ಕಣ್ಣೀರಿಟ್ಟ ಪ್ಲೇಯರ್ಸ್

ಭಾರತಕ್ಕೆ ಸೋಲು;

ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಏಷ್ಯಾ ಕಪ್-2023 ರ ಕೊನೆಯ ಸೂಪರ್-4 ಪಂದ್ಯದಲ್ಲಿ ಬಾಂಗ್ಲಾದೇಶ 6 ರನ್‌’ಗಳಿಂದ ಟೀಮ್ ಇಂಡಿಯಾವನ್ನು ಸೋಲಿಸಿತು. ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶುಭಮನ್ ಗಿಲ್ ರಂತಹ ಬಲಿಷ್ಠ ಆಟಗಾರರಿಂದ ತುಂಬಿದ್ದ ಟೀಂ ಇಂಡಿಯಾ 266 ರನ್ ಗಳ ಗುರಿ ತಲುಪಲು ಸಾಧ್ಯವಾಗಲಿಲ್ಲ. ಬಾಂಗ್ಲಾದೇಶ 8 ವಿಕೆಟ್‌’ಗೆ 265 ರನ್ ಗಳಿಸಿದ್ದರೆ, ಗುರಿ ಬೆನ್ನತ್ತಿದ ಭಾರತ ತಂಡ 49.5 ಓವರ್‌’ಗಳಲ್ಲಿ 259 ರನ್‌ಗಳಿಗೆ ಆಲೌಟ್ ಆಯಿತು. ಓಪನರ್ ಶುಭಮನ್ ಗಿಲ್ 133 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 5 ಸಿಕ್ಸರ್‌’ಗಳ ನೆರವಿನಿಂದ 121 ರನ್ ಗಳಿಸಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News