ಹೆಗಲ ಮೇಲೆ ಕೈಹಾಕಿ ಹೋಗುತ್ತಿರುವ ಈ ಪುಟಾಣಿ ದೊಸ್ತ್ ಗಳ ವಿಡಿಯೋ ನೋಡಿದ್ದೀರಾ? ಮಿಸ್ ಮಾಡದೆ ನೋಡಿ!

Trending Video: ಮಕ್ಕಳ ಮುಗ್ಧತೆ ಜಗತ್ತಿನ ಅತ್ಯಂತ ಸುಮಧುರ ವಿಷಯಗಳಲ್ಲಿ ಒಂದಾಗಿದೆ, ಅದನ್ನು ಬಿತ್ತರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋ ನೋಡಿದ ನಂತರ ನಿಮ್ಮ ಮುಖದಲ್ಲಿ ನಗು ಮೂಡುವುದು ಖಂಡಿತ.  

Written by - Nitin Tabib | Last Updated : Sep 18, 2023, 11:54 PM IST
  • ಗೆಳೆತನದ ಬಗ್ಗೆ ಹೇಳಿದಾಗ ಕಾಲೇಜು ಕಾಲದ ಗೆಳೆತನ ಅಥವಾ ಶೋಲೆ ಚಿತ್ರದ ಜೈ-ವೀರು ಅವರಂತಹ ಸಿನಿಮಾ ಗೆಳೆಯರ ಉದಾಹರಣೆ ಸಿಗುತ್ತದೆ.
  • ಆದರೆ, ಬಾಲ್ಯದ ಗೆಳೆತನದಂತಹ ಮುಗ್ಧತೆ ಬೇರೆಲ್ಲೂ ಸಿಗುವುದು ಕಷ್ಟ.
  • ಇಂತಹ ಇಬ್ಬರು ಪುಟ್ಟ ಸ್ನೇಹಿತರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.
ಹೆಗಲ ಮೇಲೆ ಕೈಹಾಕಿ ಹೋಗುತ್ತಿರುವ ಈ ಪುಟಾಣಿ ದೊಸ್ತ್ ಗಳ ವಿಡಿಯೋ ನೋಡಿದ್ದೀರಾ? ಮಿಸ್ ಮಾಡದೆ ನೋಡಿ! title=

ಬೆಂಗಳೂರು: ಪ್ರೀತಿ ಮತ್ತು ಕುಟುಂಬದ ನಡುವಿನ ಸ್ನೇಹವು ಬಹುಶಃ ಒಂದು ವಿಷಯವಾಗಿದ್ದು, ಅದರ ಹೊಳಪು ಮತ್ತು ತಾಜಾತನ ಯಾವ ವಯಸ್ಸಿನಲ್ಲಿಯೂ ಕೂಡ ಮಸುಕಾಗುವುದಿಲ್ಲ. ಕಾಲೇಜು ಇರಲಿ, ವೃದ್ಧಾಪ್ಯವೇ ಇರಲಿ, ವಯಸ್ಸಿನ ಪ್ರತಿಯೊಂದು ಹಂತದಲ್ಲೂ ಸ್ನೇಹ ತುಂಬಾ ವಿಶೇಷ ಸಂಗತಿಯಾಗಿದೆ. ಸ್ನೇಹದಲ್ಲಿ ಮುಗ್ಧತೆ ಮತ್ತು ಬಹಿರಂಗತನ  ಇದ್ದರೆ ಅದು ಮತ್ತಷ್ಟು ಸುಂದರವಾಗುತ್ತದೆ. ಅದೇ ರೀತಿ ಇಬ್ಬರು ಶಾಲಾ ಮಕ್ಕಳ ನಡುವಿನ ಸ್ನೇಹದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಇಬ್ಬರು ಮಕ್ಕಳು ಶಾಲಾ ಸಮವಸ್ತ್ರದಲ್ಲಿದ್ದು, ಬಹುಶಃ ಶಾಲೆಯಿಂದ ಹಿಂತಿರುಗುತ್ತಿರುವಂತೆ ತೋರುತ್ತಿದೆ. ದಾರಿಯಲ್ಲಿ ಇಬ್ಬರೂ ದೀರ್ಘಕಾಲದ ಗೆಳೆಯರಂತೆ ಪರಸ್ಪರರ ಹೆಗಲ ಮೇಲೆ ಕೈ ಇಟ್ಟುಕೊಂಡು ರಸ್ತೆಯೂದ್ದಕ್ಕೂ ಸಾಗುತ್ತಿದ್ದಾರೆ. ಅವರಿಬ್ಬರ ಶೈಲಿಯು ಸಂಪೂರ್ಣ ಕೂಲ್ ಆಗಿದೆ ಮತ್ತು ಮಕ್ಕಳ ಮುಖದಿಂದ ಈ ಕ್ಷಣವು ಅವರ ಜೀವನದ ಅತ್ಯಂತ ವಿಶೇಷ ಕ್ಷಣವಾಗಿದೆ ಎಂಬಂತೆ ತೋರುತ್ತಿದೆ.

ಗೆಳೆತನದ ಬಗ್ಗೆ ಹೇಳಿದಾಗ ಕಾಲೇಜು ಕಾಲದ ಗೆಳೆತನ ಅಥವಾ ಶೋಲೆ ಚಿತ್ರದ ಜೈ-ವೀರು ಅವರಂತಹ ಸಿನಿಮಾ ಗೆಳೆಯರ ಉದಾಹರಣೆ ಸಿಗುತ್ತದೆ. ಆದರೆ, ಬಾಲ್ಯದ ಗೆಳೆತನದಂತಹ ಮುಗ್ಧತೆ ಬೇರೆಲ್ಲೂ ಸಿಗುವುದು ಕಷ್ಟ. ಇಂತಹ ಇಬ್ಬರು ಪುಟ್ಟ ಸ್ನೇಹಿತರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ. ಶಾಲೆಯ ಸಮವಸ್ತ್ರದಲ್ಲಿರುವ ಈ ಇಬ್ಬರು ಮಕ್ಕಳು ಪರಲ್ಪರ ಹೆಗಲ ಮೇಲೆ ಕೈ ಹಾಕಿಕೊಂಡು ನಾಳಿಯುತ್ತಾ ಸಾಗುತ್ತಿದ್ದು, ಯಾರ ಪರಿವೆ ಅವರಿಗಿಲ್ಲ ಎಂಬಂತೆ ತೋರುತ್ತಿದೆ.  ಇಂತಹ ಗೆಳೆತನದ ಮುಗ್ಧತೆಯ ಪ್ರೀತಿಯಲ್ಲಿ ಬೀಳುವುದು ತುಂಬಾ ಸಹಜ. ಸೋಶಿಯಲ್ ಮೀಡಿಯಾ ಬಳಕೆದಾರರು ಇಬ್ಬರಿಗೂ ಸಾಕಷ್ಟು ಪ್ರೀತಿಯನ್ನು ನೀಡುತ್ತಿದ್ದಾರೆ.

 
 
 
 

 
 
 
 
 
 
 
 
 
 
 

A post shared by Your Food Spot (@your_foodspot_)

ಇದನ್ನೂ ಓದಿ-ಶೀಘ್ರದಲ್ಲಿಯೇ ತುಲಾ ರಾಶಿಗೆ ಮಂಗಳನ ಪ್ರವೇಶ, 3 ರಾಶಿಗಳ ಜನರ ಮೇಲೆ ಹಣದ ಸುರಿಮಳೆಗೈಯಲು ಸ್ವತಃ ಧನಲಕ್ಷ್ಮಿಯೇ ಬರಲಿದ್ದಾಳೆ!

ಜೈ-ವೀರು ಗೆಳೆತನ ನೆನಪಾಯಿತು
ಈ ವೀಡಿಯೊವನ್ನು ಆಗಸ್ಟ್ 25 ರಂದು Instagram ಪುಟ @your_foodspot_ ನಿಂದ ಪೋಸ್ಟ್ ಮಾಡಲಾಗಿದೆ. ಇದರ ನಂತರ, ಇದನ್ನು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಟ್ಯಾಗ್ ಮಾಡಲಾಗಿದೆ, ಅದು ಲಕ್ಷಾಂತರ ಲೈಕ್ ಮತ್ತು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದರ ಶೀರ್ಷಿಕೆಯಲ್ಲಿ, ನಿಮ್ಮ ಬಾಲ್ಯದ ಸ್ನೇಹಿತರನ್ನು ಟ್ಯಾಗ್ ಮಾಡಿ ಎಂದು ಬರೆಯಲಾಗಿದೆ. ಇಬ್ಬರು ಸ್ನೇಹಿತರು ಶಾಲೆಯಿಂದ ಮನೆಗೆ ಹಿಂದಿರುಗುತ್ತಿರುವ ಈ ಕ್ಲಿಪ್ ನಿಜವಾಗಿಯೂ ಹೃದಯಸ್ಪರ್ಶಿಯಾಗಿದೆ, ಸಮಯದ ಪರಿವೆ ಅವರಿಗಿಲ್ಲ. ಇವರಿಬ್ಬರ ಸ್ನೇಹ, ಮೋಜು ಮಸ್ತಿಯಲ್ಲಿದ್ದ ಮುಗ್ಧತೆ ಕಂಡು ಎಲ್ಲರ ಮುಖದಲ್ಲೂ ಮಂದಹಾಸ ಮೂಡುತ್ತಿದೆ.

ಇದನ್ನೂ ಓದಿ-ಹಣದಿಂದ ತಿಜೋರಿ ತುಂಬಿ ತುಳುಕಬೇಕೆ? ಜೀವನದಲ್ಲಿನ ಎಲ್ಲಾ ಅಡೆತಡೆಗಳ ನಿವಾರಣೆಗೆ ಈ ಉಪಾಯ ಮಾಡಿ ನೋಡಿ!

ಸೋಷಿಯಲ್ ಮೀಡಿಯಾ ಬಳಕೆದಾರರು ವಿಡಿಯೋಗೆ ಪ್ರೀತಿಯ ಮಳೆಯನ್ನು ಸುರಿಸುತ್ತಿದ್ದಾರೆ
ಈ ವೀಡಿಯೊಗೆ ಕಾಮೆಂಟ್‌ಗಳು ಮತ್ತು ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬರುತ್ತಿದೆ. ಇದನ್ನು ನೋಡಿ ಕೆಲವರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರೆ ಮತ್ತೆ ಕೆಲವರು ಇವು ಅತ್ಯಂತ ಸಂತಸದ ಕ್ಷಣಗಳು ಎಂದಿದ್ದಾರೆ. ಒಬ್ಬ ಬಳಕೆದಾರರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ಮತ್ತು ಇದಕ್ಕಿಂತ ಹೆಚ್ಚು ಸಿಹಿ ಮತ್ತು ಮುಗ್ಧವಾಗಿರುವ ಸಂಗತಿ ಸಾಧ್ಯವಿಲ್ಲ ಎಂದು ಬರೆದಿದ್ದಾರೆ. ವೀಡಿಯೋ ನೋಡಿದರೆ ಯಾವುದೋ ಗುಡ್ಡಗಾಡು ಪ್ರದೇಶದಿಂದ ಹೊರಹೊಮ್ಮಿದೆ ಎನಿಸುತ್ತಿದೆ. ಆದಾಗ್ಯೂ, ಇದುವರೆಗೆ ಆ ಸ್ಥಳ ಮತ್ತು ಇಬ್ಬರು ಮಕ್ಕಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ, ಆದರೆ ಅವರಿಬ್ಬರೂ ಖಂಡಿತವಾಗಿಯೂ ಸಾಮಾಜಿಕ ಮಾಧ್ಯಮದಲ್ಲಿ ಸ್ಟಾರ್ ಆಗಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News