ಬೆಂಗಳೂರು: ಕೊರೋನ ನಂತರ "ಕಿಲಾಡಿಗಳು" ಎಂಬ ಜನಪ್ರಿಯ ಚಿತ್ರವನ್ನು ನಿರ್ದೇಶಿಸಿದ್ದ ಬಿ.ಪಿ ಹರಿಹರನ್, ಈಗ "ತಗ್ಗಟ್ಟಿ" ಎಂಬ ವಿಶೇಷ ಶೀರ್ಷಿಕೆಯ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. "ತಗ್ಗಟ್ಟಿ" ಎಂದರೆ ಒಂದು ಊರಿನ ಹೆಸರು.
ನನ್ನ ಆರಾಧ್ಯದೈವ ಸಾಹಸಸಿಂಹ ಡಾ||ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಅವರ ಪುಣ್ಯಭೂಮಿಯಲ್ಲಿ "ತಗ್ಗಟ್ಟಿ" ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಿರುವುದಾಗಿ ನಿರ್ದೇಶಕ ಬಿ.ಪಿ.ಹರಿಹರನ್ ತಿಳಿಸಿದ್ದಾರೆ.
ಇದನ್ನೂ ಓದಿ : ತಮಿಳುನಾಡಿಗೆ ಕಾವೇರಿ ನೀರು: ಕಾನೂನು ತಜ್ಞರೊಂದಿಗೆ ಡಿಸಿಎಂ ಮೀಟಿಂಗ್
"ತಗ್ಗಟ್ಟಿ"ಗೆ ಬೆಂಗಳೂರು ಹಾಗೂ ತಮಿಳುನಾಡಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆದಿದೆ. ದ್ವಿತೀಯ ಹಂತದ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಯಲಿದೆ.
ಸಿ ಸಿ ಸಿನಿ ಪ್ರೊಡಕ್ಷನ್ ಅಡಿ ಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ನಿರ್ಮಾಣದ ಹೊಣೆಯನ್ನು ಚಂದ್ರಮ್ಮ ಚನ್ನಾಚಾರಿ ಹೊತ್ತಿದ್ದಾರೆ.
ಇದನ್ನೂ ಓದಿ : ಬಿಳಿಯುಡುಗೆಯಲ್ಲಿ ಅದ್ಭುತವಾಗಿ ಕಂಗೊಳಿಸಿದ ಕಾಂತಾರ ಬೆಡಗಿ..! ಫೋಟೋಸ್ ಇಲ್ಲಿವೆ
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಪ್ರವೀಣ್, ನವರತ್ನ, ಅಕ್ಷತ, ಸೂರ್ಯ, ವಿನಯ್, ಮಲ್ಲೇಶ್, ಮಂಡ್ಯ ಸಿದ್ದು, ಗಹನ, ಪಲ್ಲವಿ, ರಕ್ಷಿತಾ ನಟಿಸುತ್ತಿದ್ದು, ಪೋಷಕ ಪಾತ್ರದಲ್ಲಿ ಬಾಲ ರಾಜ್ವಾಡಿ, ರೇಖಾದಾಸ್, ಶಿವಕುಮಾರ್ ಆರಾಧ್ಯ, ರೇಣು ಶಿಕಾರಿ ಇನ್ನು ಮುಂತಾದ ಪ್ರಮುಖ ಕಲಾವಿದರುಗಳು ಬಣ್ಣ ಹಚ್ಚುತ್ತಿದ್ದು, ಚಿತ್ರಕ್ಕೆ ಕ್ರಿಯೇಟಿವ್ ಹೆಡ್ ಆಗಿ ಕನ್ನಡ ಚಿತ್ರರಂಗದ ಪ್ರಮುಖ ಬರಹಗಾರ ಹಾಗೂ ಸಾಹಿತಿ "ಲವ್ ಇನ್ ಮಂಡ್ಯ" ಚಿತ್ರದ ನಿರ್ದೇಶಕ ಅರಸು ಅಂತಾರೆ ಕೂಡ ಕೈ ಜೋಡಿಸಿದ್ದಾರೆ. ನಾಗೇಂದ್ರ ರಂಗರಿ ಛಾಯಾಗ್ರಹಣ, ರವೀಶ್ ಎ ಟಿ ಸಂಗೀತ, ಮುತ್ತುರಾಜ್ ಟಿ ಸಂಕಲನ, ಅರಸು ಅಂತಾರೆ ಮತ್ತು ರೇವಣ್ಣ ನಾಯಕ್ ಸಾಹಿತ್ಯ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.ಇದೆ ವರ್ಷ ಚಿತ್ರವನ್ನು ತೆರೆ ಮೇಲೆ ತರುವ ಉದ್ದೇಶ ಮತ್ತು ಉತ್ಸಾಹವನ್ನು ಚಿತ್ರ ತಂಡ ಹೊಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.