IMD Weather prediction of 21 september 2023: ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಇಲಾಖೆಯ ಪ್ರಕಾರ, ಮುಂದಿನ 3 ದಿನಗಳ ಕಾಲ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಲರ್ಟ್ ಘೋಷಿಸಲಾಗಿದೆ. ಬಂದಾ, ಚಿತ್ರಕೂಟ, ಕೌಶಂಬಿ, ಪ್ರಯಾಗ್ರಾಜ್, ಫತೇಪುರ್, ಪ್ರತಾಪ್ಗಢ, ಸೋನ್ಭದ್ರ, ಮಿರ್ಜಾಪುರ ಮತ್ತು ಚಂದೌಲಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಇವುಗಳ ಜೊತೆಗೆ ವಾರಣಾಸಿ, ಭದೋಹಿ, ಜೌನ್ಪುರ್, ಗೋರಖ್ಪುರ, ಸಂತ ಕಬೀರ್ ನಗರ, ಬಸ್ತಿ, ಕುಶಿನಗರ, ಮಹಾರಾಜ್ಗಂಜ್, ಸಿದ್ಧಾರ್ಥ್ ನಗರಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ.
ಇದನ್ನೂ ಓದಿ: ವಿಶ್ವಕಪ್’ಗೂ ಮುನ್ನ ಕೋಚ್ ಬದಲಾವಣೆ: ಹೊಸ ಕೋಚ್ ಆಗಿ ಈ ಅನುಭವಿ ಆಟಗಾರನ ನೇಮಕ
ಇನ್ನು ಹವಾಮಾನ ಇಲಾಖೆಯ ಪ್ರಕಾರ, ಮಾನ್ಸೂನ್ ಸೆಪ್ಟೆಂಬರ್’ನಲ್ಲಿ ಮತ್ತೊಮ್ಮೆ ಸಕ್ರಿಯವಾಗಿದೆ. ಇದರಿಂದಾಗಿ ಯುಪಿ ಸೇರಿದಂತೆ ದೇಶದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಯುಪಿಯ ಗೊಂಡಾ, ಬಲರಾಂಪುರ ಶ್ರಾವಸ್ತಿ, ಬಹ್ರೈಚ್, ಲಖಿಂಪುರ, ಸೀತಾಪುರ್, ಹರ್ದೋಯ್, ಫರೂಕಾಬಾದ್, ಕನೌಜ್, ಕಾನ್ಪುರ್ ದೇಹತ್, ಕಾನ್ಪುರ್, ಉನ್ನಾವ್, ಲಕ್ನೋ, ಬಾರಾಬಂಕಿ, ರಾಯ್ ಬರೇಲಿ, ಅಮೇಥಿ, ಸುಲ್ತಾನ್ಪುರ, ಅಯೋಧ್ಯೆ, ಅಂಬೇಡ್ಕರ್ ನಗರ, ಮಥುರಾದಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ.
ಉತ್ತರಾಖಂಡದಲ್ಲಿ ಲಘು ಮಳೆಯ ಎಚ್ಚರಿಕೆ:
ಉತ್ತರಾಖಂಡದಲ್ಲೂ ಹವಾಮಾನ ಮತ್ತೆ ಬದಲಾಗಲಿದೆ. ಮುಂದಿನ ಮೂರು ದಿನಗಳ ಕಾಲ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಡೆಹ್ರಾಡೂನ್, ಬಾಗೇಶ್ವರ್ ಮತ್ತು ನೈನಿತಾಲ್ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಲಘು ಮಳೆಯಾಗಲಿದ್ದು,. ಮಸ್ಸೂರಿಯಲ್ಲಿ ಮಳೆಯ ನಂತರ ದಟ್ಟವಾದ ಮಂಜು ಆವರಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಚಿನ್ನ ಖರೀದಿಗೆ ಇದುವೇ ಬೆಸ್ಟ್ ಟೈಂ… 10 ಗ್ರಾಂ ಬಂಗಾರದ ದರ ಹೇಗಿದೆ ಗೊತ್ತಾ?
ಕರ್ನಾಟಕ ಮಳೆ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲ ದಿನಗಳಿಂದ ಆಗಾಗ್ಗೆ ಮಳೆಯಾಗುತ್ತಿದೆ. ಇನ್ನು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಎಚ್ಚರಿಕೆ ಕೊಡಲಾಗಿದೆ. ಮುಂದಿನ ಒಂದು ವಾರಗಳ ಕಾಲ ರಾಜ್ಯದ ವಿವಿಧೆಡೆ ಗುಡುಗು ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.