Namma Kambala: ಪ್ರತಿ ಬಾರಿ ಕರಾವಳಿ ಹಾಗು ಮಲೆನಾಡ ಭಾಗಗಳಲ್ಲಿ ನಡೆಯುತ್ತಿದ್ದ ಕಂಬಳ ಹಬ್ಬ ಮೊದಲನೆಯ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿರುವುದು ವಿಶೇಷ. ಪ್ರತಿ ವರ್ಷ ಕಂಬಳ ಕರಾವಳಿಯ ಸಿಟಿ ಮಂಗಳೂರಿನಲ್ಲಿ ನಡೆಯುತ್ತಿತ್ತು. ಬೆಂಗಳೂರಿನಲ್ಲಿ ಕಂಬಳದ ಹಬ್ಬ ನವೆಂಬರ್ 25 ಹಾಗು 26ರಂದು ನಡೆಯಲಿದೆ. ಜಿಲ್ಲಾ ಕಂಬಳ ಸಮಿತಿಯ ಜತೆ ಸೇರಿ ಬೆಂಗಳೂರು ಕಂಬಳ ಸಮಿತಿ ಕಂಬಳವನ್ನು ಆಯೋಜನೆ ಮಾಡಲಿದೆ.
ಕಂಬಳದಲ್ಲಿ ಉಪಯೋಗಿಸುವ ಕೋಣಗಳ ಮಾಲೀಕರ ಜತೆ ಚರ್ಚಿಸಿ ಆಯೋಜಿಸಿದ್ದು, ಇದೇ ಮೊದಲ ಬಾರಿಗೆ ಬೆಂಗಳೂರಿನ ಜನ ಕಂಬಳವನ್ನು ನೋಡಬಹುದು. ಸದ್ಯ ಬೆಂಗಳೂರಿನಲ್ಲಿ ನಡೆಯುವ ಮೂಲಕ ಹೆಚ್ಚಿನ ಸಪೋರ್ಟ್ ಸಿಗುತ್ತಿದೆ. ಈ ಬಾರಿ ನಡೆಯುತ್ತಿರುವ ಕಂಬಳದಲ್ಲಿ ಸುಮಾರು 100 ರಿಂದ 130 ಜೊತೆ ಕೋಣಗಳ ಜೋಡಿ ಭಾಗವಹಿಸಲಿದೆ. ಮುಂದಿನ ತಿಂಗಳು ನಡೆಯಲಿರುವ ಕಂಬಳದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೂಡು ಹಾಗೆ ಹಲವಾರು ಜಿಲ್ಲೆಗಳಿಂದ ಕೋಣಗಳು ಆಗಮಿಸಿ ಭಾಗವಹಿಸದೆ.
ಇದನ್ನೂ ಓದಿ-ಮಗಳ ಜೊತೆ ಮಧುರ ಕ್ಷಣ ಕಳೆದ ಧ್ರುವ ಸರ್ಜಾ
ಈ ವರ್ಷ ಬೆಂಗಳೂರಿನಲ್ಲಿ ನಡೆಯುತ್ತಿರುವ ʼನಮ್ಮ ಕಂಬಳʼದಲ್ಲಿ ಸುಮಾರು ಏಳು ಲಕ್ಷ ಜನರು ಸೇರುವ ಸಾಧ್ಯತೆ ಇದೆ. ಈ ಬಾರಿಯ ಕಂಬಳದ ಹಬ್ಬಕ್ಕೆ ಕೋಣಗಳನ್ನು ಮಂಗಳೂರಿನಿಂದ ಲಾರಿಯಲ್ಲಿ ಹೊರಟು ಬರಲಿದೆ. ಕೋಣಗಳನ್ನು ಲಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ನವೆಂಬರ್ 23ಕ್ಕೆ ಹೊರಡಲಿದ್ದು, ಕೋಣಗಳು ತಲುಪಿದ ನಂತರ ಕಂಬಳದ ತಯಾರಿಗಳು ನಡೆಯಲಿದೆ.
ಈ ವರ್ಷದ ಕಂಬಳದ ಹಬ್ಬಕ್ಕೆ ಸಿನಿಮಾ ಸ್ಟಾರ್ಗಳ ಹಿಂಡೇ ಬರುತ್ತಿದೆ. ಬೆಂಗಳೂರಿನ ʼನಮ್ಮ ಕಂಬಳʼಕ್ಕೆ ರಜನಿಕಾಂತ್, ಐಶ್ವರ್ಯ ರೈ ಬಚ್ಚನ್ , ಅನುಷ್ಠಾ ಶೆಟ್ಟಿ ಹಾಗೆ ರಿಷಬ್ ಶೆಟ್ಟಿ ಸಹ ಭಾಗಿಯಾಗಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ನಟಿ ಶಿಲ್ಪ ಶೆಟ್ಟಿ ಬರುವ ಸಾಧ್ಯತೆ ಕಾಣುತ್ತಿದೆ. ಸಿನಿತಾರೆಯರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುತ್ತಿದ್ದು, ಅವರ ಜೊತೆ ಹಲವು ಮಂತ್ರಿಗಳು ಆಗಮಿಸಲಿದ್ದಾರೆ. ಹಾಗೆ ಬೇರೆ ಬೇರೆ ಕ್ಷೇತ್ರಗಳ ವಿಐಪಿಗಳು ಸೇರುವತ್ತಾರೆ ಎನ್ನಲಾಗಿದೆ.
ಕಂಬಳ ಹಬ್ಬವು ಸುಮಾರು ಆರು ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದು, ಎರಡು ಸಾವಿರ ವಿಐಪಿ ಬರುವ ನಿರೀಕ್ಷೆಯಿದೆ. ದಕ್ಷಿಣ ಕನ್ನಡ ಭಾಗದಿಂದ ಸುಮಾರು 150 ಕೂ ಹೆಚ್ಚು ಫೂಡ್ ಸ್ಟಾಲ್ಗಳನ್ನು ಇಡಲಿದ್ದು, ತಮಿಳು ನಾಡಿನ ಆಹಾರ ಕ್ರಮವನ್ನು ಪಾಲಿಸಲಾಗುತ್ತದೆ.
ಇದನ್ನೂ ಓದಿ-ಅನುಷ್ಕಾ ಶರ್ಮಾ ಗರ್ಭಿಣಿ ಅಲ್ವಾ!! ಮತ್ತೆ ತಾಯಿಯಾಗುವ ಸುದ್ದಿ ಹಬ್ಬಿದ್ದೇಕೆ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.