ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಲಿರುವ 4 ತಂಡಗಳನ್ನು ಹೆಸರಿಸಿದ ಸಚಿನ್ ತೆಂಡೂಲ್ಕರ್

Sachin Tendulkar on World Cup 2023: ಸಚಿನ್ ತೆಂಡೂಲ್ಕರ್ ಅವರು ವಿಶ್ವಕಪ್ ಟ್ರೋಫಿಯನ್ನು ಮೈದಾನಕ್ಕೆ ಕೊಂಡೊಯ್ಯುವುದರೊಂದಿಗೆ ಐಸಿಸಿ ವಿಶ್ವಕಪ್ ಕ್ರಿಕೆಟ್ ಚಾಲನೆಯಾಗಿದೆ.

Written by - Bhavishya Shetty | Last Updated : Oct 6, 2023, 04:20 PM IST
    • ವಿಶ್ವಕಪ್ ಟ್ರೋಫಿಯನ್ನು ಮೈದಾನಕ್ಕೆ ಕೊಂಡೊಯ್ದ ಸಚಿನ್ ತೆಂಡೂಲ್ಕರ್
    • 2011ರ ವಿಶ್ವಕಪ್‌’ನಲ್ಲಿ ಭಾರತ ತಂಡ ಚಾಂಪಿಯನ್ ಆದ ನೆನಪುಗಳ ಮೆಲುಕು
    • ಪ್ರತಿಷ್ಠಿತ ಟೂರ್ನಿಯಲ್ಲಿ ಸೆಮಿಫೈನಲ್ ತಲುಪುವ 4 ತಂಡಗಳನ್ನು ಹೆಸರಿಸಿದ ಸಚಿನ್
ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಲಿರುವ 4 ತಂಡಗಳನ್ನು ಹೆಸರಿಸಿದ ಸಚಿನ್ ತೆಂಡೂಲ್ಕರ್ title=
Sachin Tendulkar

World Cup 2023: ವಿಶ್ವಕಪ್ 2023 ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಅದ್ಭುತ ಜಯ ಸಾಧಿಸುವುದರ ಮೂಲಕ ಅಬ್ಬರದಿಂದ ಪ್ರಾರಂಭವಾಗಿದೆ. ಇನ್ನು ಇದೇ ಸಂದರ್ಭದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾರತ ಆತಿಥ್ಯ ವಹಿಸುತ್ತಿರುವ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಸೆಮಿಫೈನಲ್ ತಲುಪುವ  4 ತಂಡಗಳನ್ನು ಹೆಸರಿಸಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಅಬ್ಬರಿಸಿ ಶತಕ ಸಿಡಿಸಿದ್ದ ರಚಿನ್’ಗೆ ತಂದೆ ತಾಯಿ ಅದೇ ಹೆಸರಿಟ್ಟಿದ್ದೇಕೆ?

ಸಚಿನ್ ತೆಂಡೂಲ್ಕರ್ ಅವರು ವಿಶ್ವಕಪ್ ಟ್ರೋಫಿಯನ್ನು ಮೈದಾನಕ್ಕೆ ಕೊಂಡೊಯ್ಯುವುದರೊಂದಿಗೆ ಐಸಿಸಿ ವಿಶ್ವಕಪ್ ಕ್ರಿಕೆಟ್ ಚಾಲನೆಯಾಗಿದೆ. ಈ ಬಳಿಕ ಐಸಿಸಿಯೊಂದಿಗೆ ಮಾತನಾಡಿದ ಸಚಿನ್, 'ಟ್ರೋಫಿಯನ್ನು ಮೈದಾನಕ್ಕೆ ತೆಗೆದುಕೊಂಡು ಹೋಗಿರುವುದು ಒಂದು ಉತ್ತಮ ಅನುಭವ. 2011ರ ವಿಶ್ವಕಪ್‌’ನ ಕ್ವಾರ್ಟರ್ ಫೈನಲ್ ಪಂದ್ಯವನ್ನು ಇದೇ ಮೈದಾನದಲ್ಲಿ ಗೆದ್ದಿದ್ದೇವೆ. 12 ವರ್ಷಗಳ ನಂತರ ಈ ಮೈದಾನಕ್ಕೆ ಬಂದಿರುವುದು ಉತ್ತಮ ಅನುಭವ” ಎಂದಿದ್ದಾರೆ.

2011ರ ವಿಶ್ವಕಪ್‌’ನಲ್ಲಿ ಭಾರತ ತಂಡ ಚಾಂಪಿಯನ್ ಆದ ನೆನಪುಗಳನ್ನು ಮೆಲುಕು ಹಾಕಿದ ಅವರು, “ನಾವು ವಿಶ್ವಕಪ್ ಗೆದ್ದ ರಾತ್ರಿ ವಿಶೇಷವಾಗಿತ್ತು. ನಮ್ಮೊಂದಿಗೆ ಇಡೀ ದೇಶವೇ ಸಂಭ್ರಮಿಸಿದೆ. 2011 ರವರೆಗೆ, ಯಾವುದೇ ಆತಿಥೇಯ ರಾಷ್ಟ್ರವು ಪಂದ್ಯಾವಳಿಯನ್ನು ಗೆದ್ದಿರಲಿಲ್ಲ. 2023ರ ವಿಶ್ವಕಪ್‌ನಲ್ಲಿ ಭಾರತ ತಂಡ ಚಾಂಪಿಯನ್ ಆಗಬಹುದು” ಎಂದು ಸಚಿನ್ ನಂಬಿದ್ದಾರೆ.

ಕ್ರಿಕೆಟ್‌’ಗೆ ಸಂಬಂಧಿಸಿದ ಬಾಲ್ಯದ ಅನುಭವವನ್ನು ಹಂಚಿಕೊಂಡ ಮಾಸ್ಟರ್ ಬ್ಲಾಸ್ಟರ್, ”1983 ರಲ್ಲಿ, ನಾನು ಮೊದಲ ಬಾರಿಗೆ ಭಾರತ ತಂಡ ವಿಶ್ವಕಪ್ ಗೆದ್ದದ್ದನ್ನು ಟಿವಿಯಲ್ಲಿ ನೋಡಿದೆ. ಆಗ ವಿಶ್ವಕಪ್ ಗೆಲ್ಲುವ ಮಹತ್ವದ ಬಗ್ಗೆ ನನಗೆ ಹೆಚ್ಚು ಗೊತ್ತಿರಲಿಲ್ಲ. ಆಗ ನಾನು ಚಿಕ್ಕವನಾಗಿದ್ದೆ, ಜನರು ಆಚರಿಸುವ ರೀತಿಯಲ್ಲಿ, ನಾನು ಸಹ ಆಚರಣೆಯಲ್ಲಿ ಭಾಗವಹಿಸಿದೆ” ಎಂದಿದ್ದಾರೆ.

2023ರ ವಿಶ್ವಕಪ್‌’ನಲ್ಲಿ ಭಾರತ ತಂಡವು ಚಾಂಪಿಯನ್ ಆಗುವ ಸಾಧ್ಯತೆಗಳ ಬಗ್ಗೆ ಮಾತನಾಡಿದ ಅವರು, “ನಮ್ಮ ತಂಡ ಉತ್ತಮವಾಗಿ ಕ್ರಿಕೆಟ್ ಆಡುತ್ತಿರುವ ಕಾರಣ ನನಗೆ ಹೀಗನಿಸುತ್ತಿದೆ. ತಂಡವು ವಿಷಯಗಳನ್ನು ಸರಳವಾಗಿ ಇರಿಸಿದರೆ ಮತ್ತು ಮೂಲಭೂತ ಅಂಶಗಳಿಗೆ ಅಂಟಿಕೊಂಡರೆ ಚಾಂಪಿಯನ್ ಆಗಬಹುದು. ನಾವು ಬಲಿಷ್ಠ ಬ್ಯಾಟಿಂಗ್ ಲೈನ್ ಮತ್ತು ಉತ್ತಮ ಆಲ್ ರೌಂಡ್ ಬೌಲಿಂಗ್ ಹೊಂದಿದ್ದೇವೆ” ಎಂದರು.

ವಿಶ್ವಕಪ್‌’ನ ಸೆಮಿಫೈನಲ್ ತಲುಪಿರುವ ನಾಲ್ಕು ತಂಡಗಳ ಬಗ್ಗೆ ಮಾತನಾಡಿದ ಅವರು, “ಭಾರತ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಕೂಡ ಸೆಮೀಸ್’ಗೆ ಕಾಲಿಡಲಿದೆ” ಎಂದಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಆಗಮಿಸಿದ ಒಂದೇ ವಾರಕ್ಕೆ ಭಾರತೀಯರ ಅಭಿಮಾನಿಯಾದ ಪಾಕಿಸ್ತಾನ ಈ ಸ್ಟಾರ್ ಆಟಗಾರ!

“ಆಸ್ಟ್ರೇಲಿಯಾ ತಂಡದ ಸಮತೋಲನವೂ ಉತ್ತಮವಾಗಿದ್ದು, ಅನುಭವಿ ಆಟಗಾರರನ್ನು ಒಳಗೊಂಡಿದೆ. ಇಂಗ್ಲೆಂಡ್ ತಂಡವೂ ಅತ್ಯಂತ ಬಲಿಷ್ಠವಾಗಿದ್ದು, ಯುವ ಹಾಗೂ ಅನುಭವಿ ಆಟಗಾರರ ಮಿಶ್ರಣವನ್ನು ಹೊಂದಿದೆ. ನ್ಯೂಜಿಲೆಂಡ್ ತಂಡದ ಪ್ರದರ್ಶನ ಯಾವಾಗಲೂ ಉತ್ತಮವಾಗಿರುತ್ತದೆ. ಈ ತಂಡ 2015 ಮತ್ತು 2019 ರಲ್ಲಿ ಫೈನಲ್ ತಲುಪಿತ್ತು. ಆದರೆ ಸೋಲಿನಿಂದ ಪ್ರಶಸ್ತಿಯಿಂದ ವಂಚಿತವಾಗಿತ್ತು” ಎಂದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News