Bigg Boss 10 : ಬಿಗ್‌ ಬಾಸ್‌ ನಲ್ಲಿ ಮೊದಲ ವಾರವೇ ಚಿಗುರೊಡೆಯಿತು ಪ್ರೇಮ.!

Bigg Boss 10 Love Story : ಈ ಬಾರಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರಲ್ಲಿ ಮೊದಲ ವಾರವೇ ಈ ಪ್ರೇಮ ಪುಷ್ಪ ಅರಳಿದಂತಿದೆ. ಒಂದಲ್ಲ ಎರಡು ಜೋಡಿಗಳ ಮಧ್ಯೆ ಪ್ರೀತಿ ಕುಡಿಯೊಡೆಯುತ್ತಿರುವಂತಿದೆ.  

Written by - Chetana Devarmani | Last Updated : Oct 13, 2023, 09:08 AM IST
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10
  • ಮೊದಲ ವಾರವೇ ಪ್ರೇಮ ಪುಷ್ಪ ಅರಳಿದಂತಿದೆ
  • ಒಂದಲ್ಲ ಎರಡು ಜೋಡಿಗಳ ಮಧ್ಯೆ ಪ್ರೀತಿ
Bigg Boss 10 : ಬಿಗ್‌ ಬಾಸ್‌ ನಲ್ಲಿ ಮೊದಲ ವಾರವೇ ಚಿಗುರೊಡೆಯಿತು ಪ್ರೇಮ.!  title=

Bigg Boss Kannada Season 10: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ದಿನಕ್ಕೊಂದು ಹೊಸ ಹೊಸ ಟ್ವಿಸ್ಟ್‌ಗಳಿಂದ ಜನರನ್ನು ರಂಜಿಸುತ್ತದೆ. ಬಿಗ್‌ ಬಾಸ್‌ ಮನೆ ಅಂದ್ಮೇಲೆ ಅಲ್ಲೊಂದಿಷ್ಟು ಜಗಳ, ಭಾವನೆಗಳು, ಕಣ್ಣೀರು, ನಗು ಜೊತೆಗೆ ಒಂದೋ ಎರಡೋ ಪ್ರೇಮ ಕತೆಗಳು ಇರಲೇಬೇಕಲ್ವಾ. ಪ್ರತಿಬಾರಿ ದೊಡ್ಮನೆಯಲ್ಲಿ ಒಬ್ಬರಲ್ಲ ಇನ್ನೊಬ್ಬರಿಗೆ ಲವ್‌ ಆಗೋದು ಕಾಮನ್‌ ಆಗಿದೆ. 

ಈ ಪ್ರೀತಿ ಹೇಳಿ ಕೇಳಿ ಬರೋದಲ್ಲ ನೋಡಿ.. ಯಾವಾಗ ಯಾರ ಮೇಲೆ ಯಾಕೆ ಪ್ರೀತಿ ಆಗುತ್ತೋ ಅದು ಯಾರಿಗೂ ತಿಳಿಯದ ಗುಟ್ಟು. ಈ ಗುಟ್ಟೇ ಎರಡು ಮನಸುಗಳ ಮಿಲನಕ್ಕೆ ಕಾರಣವಾಗೋದು. ಹರೆಯದ ವಯಸ್ಸಿನಲ್ಲಿ ಗಂಡು ಹೆಣ್ಣಿನ ಆಕರ್ಷಣೆ ಸಹಜ. ಆದರೆ ಪ್ರೀತಿ ಹಾಗಲ್ಲ. ಅದು ಮನಸ್ಸಿನಲ್ಲಿ ಅರಳುವ ಸುಮಧುರ ಪ್ರೇಮ ಪುಷ್ಪ.

ಇದನ್ನೂ ಓದಿ: ಗಂಡಾಗಿ ಹುಟ್ಟಿ ಹೆಣ್ಣಾದ ಬಿಗ್‌ಬಾಸ್‌ ಸ್ಪರ್ಧಿ..! ಗದಗ ʼಮಂಜುನಾಥ್‌ʼ ನೀತು ಆದ ಕತೆ 

ಹೌದು, ಈ ಬಾರಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರಲ್ಲಿ ಮೊದಲ ವಾರವೇ ಈ ಪ್ರೇಮ ಪುಷ್ಪ ಅರಳಿದಂತಿದೆ. ಒಂದಲ್ಲ ಎರಡು ಜೋಡಿಗಳ ಮಧ್ಯೆ ಪ್ರೀತಿ ಕುಡಿಯೊಡೆಯುತ್ತಿರುವಂತಿದೆ. ಕಳೆದ ಸೀಸನ್‌ಗಳಲ್ಲೆಲ್ಲ ಈ ಲವ್‌ ಸ್ಟೋರಿ ಶುರುವಾಗಲು ಕೆಲವು ವಾರಗಳು ತೆಗೆದುಕೊಂಡಿತ್ತು. ಆದರೆ ಈ ಬಾರಿ ಬಿಗ್‌ ಬಾಸ್‌ 10 ರಲ್ಲಿ ಸೂಪರ್‌ ಫಾಸ್ಟ್‌ ಆಗಿ ಲವ್‌ ಆಗ್ಬಿಟ್ಟಿದೆ. 

ಮೊದಲನೆಯದು ಸಂಗೀತಾ ಹಾಗೂ ಕಾರ್ತಿಕ್ ನಡುವೆ ಏನೋ ನಡೀತಿದೆ ಎಂದು ಎಲ್ಲರಿಗೂ ಅನುಮಾನ ಶುರುವಾಗಿದೆ. ಸಂಗೀತಾ ಶೃಂಗೇರಿ ಅವರ ಬಗ್ಗೆ ಕಾರ್ತಿಕ್ ಸಿಕ್ಕಾಪಟ್ಟೆ ಕಾಳಜಿ ವಹಿಸುತ್ತಿದ್ದಾರೆ. ಕಾರ್ತಿಕ್ ಅವರ ಈ ಅತಿಯಾದ ಕೇರಿಂಗ್‌ ಸಂಗೀತಾ ಅವರಿಗೂ ಡೌಟ್‌ ಬಂದಿದೆ. ಅದಕ್ಕೆ ಮೊನ್ನೆ ರಾತ್ರಿ ಸಂಗೀತಾ ನೇರವಾಗಿಯೇ ಕೇಳಿದ್ದಾರೆ. ಇದಕ್ಕೆ ಕಾರ್ತಿಕ್‌ ಹಾಗೇನಿಲ್ಲ, ನನಗೆ ನೀನು ಬೆಸ್ಟ್ ಫ್ರೆಂಡ್ ಅಂತ ಹೇಳಿದ್ದಾರೆ. 

ಇದನ್ನೂ ಓದಿ: ಪ್ರದೀಪ್ ಈಶ್ವರ್ ಬಿಗ್ ಬಾಸ್ ಗೆ ಬರಲು ಪಡೆದ ಸಂಭಾವನೆ ಗೊತ್ತಾ.! 

ಇನ್ನೂ ಈ ಬಾರಿ ಬಿಗ್‌ ಬಾಸ್‌ ಮನೆಗೆ ಎಂಟ್ರಿಕೊಟ್ಟಿರುವ ರ್ಯಾಪರ್‌ ಇಶಾನಿ ಅವರಿಗೆ ಎರಡು ಬ್ರೇಕಪ್‌ ಆಗಿದೆ. ಇದನ್ನು ನಮ್ರತಾ ಗೌಡ ಅವರ ಬಳಿ ಹೇಳಿಕೊಂಡಿದ್ದಾರೆ. ಇತ್ತ ನೈಜೀರಿಯನ್‌ ಕನ್ನಡಿಗ ಮೈಕೆಲ್‌ ಗೆ ಇಶಾನಿ‌ ಮೇಲೆ ಲೈಟ್ ಆಗಿ ಲವ್‌ ಆಗಿದೆ ಅನಿಸ್ತಿದೆ. ಅದನ್ನು ನಮ್ರತಾ ಗಮನಿಸಿದಂತಿದೆ. ಇಶಾನಿ ಬಳಿ ಮೈಕೆಲ್ ಪರವಾಗಿ ನಮ್ರತಾ ಮಾತನಾಡಿದ್ದು ಈ ಅನುಮಾನಕ್ಕೆ ಕಾರಣವಾಗ್ತಿದೆ. ಒಂದು ವೇಳೆ ಮೈಕೆಲ್ ಮೇಲೆ ಲವ್ವಾದರೆ ಒಪ್ಪಿಕೊಳ್ತಿರಾ ಎಂದು ಕೇಳಿದ್ದಾರೆ. ಹಜವಾಗಿ ಲವ್ವಾದರೆ ಆಗಲಿ ಎಂದಿದ್ದಾರೆ ಇಶಾನಿ. ಇದಾದ ಬಳಿಕ ಮೈಕೆಲ್ ಮತ್ತು ಇಶಾನಿಯ ಮಧ್ಯೆ ಆತ್ಮೀಯತೆ ಹೆಚ್ಚಾಗಿದೆ. 

ಒಟ್ಟಾರೆ ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಲವ್‌ ಬರ್ಡ್ಸ್‌ ಕಲರವ ಕೊಂಚ ಮುನ್ನವೇ ಶುರುವಾಗಿದ್ದು, ಮುಂದೇನೆಲ್ಲಾ ಆಗುತ್ತೇ ಅನ್ನೋದನ್ನ ಕಾದು ನೋಡಬೇಕಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News