ನವರಾತ್ರಿ ಹಿನ್ನೆಲೆಯಲ್ಲಿ ವಿಜಯಪುರ ನಗರದ ಗಚ್ಚಿನಕಟ್ಟಿ ಕಾಲೋನಿಯ ಶ್ರೀ ಅಂಬಾಭವಾನಿ ತರುಣ ಮಂಡಳದ ವತಿಯಿಂದ ಈ ಬಾರಿ ಭಕ್ತರಿಗೆ ಪ್ರಸಾದದ ರೂಪದಲ್ಲಿ ಬರೊಬ್ಬರಿ 15 ಸಾವಿರ ಕ್ಕೂ ಹೆಚ್ಚು ಶೇಂಗಾ ಹೋಳಿಗೆ ವಿತರಿಸಲಾಗಿದೆ. ಶೇಂಗಾ ಹೋಳಿಗೆ ಸವಿದು ಭಕ್ತರು ಹರ್ಷ ಪಟ್ಟರು. ಇನ್ನೂ ಈ ಕಾಲೋನಿಯಲ್ಲಿ ಸದಾ ಜಾಗೃತವಾಗಿರೋ ಜಗನ್ಮಾತೆ ಅಂಬಾಭವಾನಿ ದೇವಸ್ಥಾನ ಇದೆ. ಇಲ್ಲಿ ಜಗನ್ಮಾತೆ ಭಕ್ತರ ಆಶೋತ್ತರಗಳನ್ನು ಈಡೇರಿಸೊ ಮೂಲಕ ನೊಂದವರ ಬಾಳಿಗೆ ಬೆಳಕಾಗಿ ನಿಲ್ಲುತ್ತಿದ್ದಾಳೆ. ಹೀಗಾಗಿ ಇಲ್ಲಿ ಭಕ್ತ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿ ವರ್ಷ ನವರಾತ್ರಿ ಹಬ್ಬದಲ್ಲಿ ಪುರಾಣ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ...
ನವರಾತ್ರಿ ಹಿನ್ನಲೆ: ವಿಜಯಪುರ ನಗರದ ಗಚ್ಚಿನಕಟ್ಟಿಯಲ್ಲಿ ಮಹಿಳೆಯರಿಗೆ ಉಡಿತುಂಬುವ ಶಾಸ್ತ್ರ