/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

Investment Ideas: ಯಾವುದೇ ಕಡೆ ಹಣ ಹೂಡಿಕೆ ಮಾಡುವ ಮೊದಲು ನೀವು ಹೂಡಿಕೆಗೆ ಸಂಬಂಧಿಸಿದ ಕೆಲ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಈ ಅಭ್ಯಾಸಗಳಲ್ಲಿನ ಮೂರು ಪ್ರಮುಖ ಅಭ್ಯಾಸಗಳ ಕುರಿತು ನಾವು ಇಂದು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ತನ್ಮೂಲಕ ನೀವು ಅಧಿಕ ಲಾಭವನ್ನು ಪಡೆಯಬಹುದು. Business News In Kannada

1. ಹೂಡಿಕೆ ಮಾಡುವುದು ಒಳ್ಳೆಯ ಅಭ್ಯಾಸ. ಇದರಿಂದ ನೀವು ನಿಮ್ಮ ಉಳಿತಾಯದ ಮೇಲೆ ಉತ್ತಮ ಆದಾಯವನ್ನು ಗಳಿಕೆ ಮಾಡಬಹುದು. ಆದರೂ ಕೂಡ ಹೂಡಿಕೆ ಮಾಡುವ ಮುನ್ನ ಕೆಲವು ಅಭ್ಯಾಸಗಳನ್ನು ಹೊಂದಿರುವುದು ತುಂಬಾ ಮುಖ್ಯ. ಹೂಡಿಕೆ ಮಾಡುವಾಗ ಮೂರು ಹೂಡಿಕೆ ಅಭ್ಯಾಸಗಳನ್ನು ಅನುಸರಿಸಿದರೆ, ಕಾಲಕ್ರಮೇಣ ಉತ್ತಮ ಆದಾಯವನ್ನು ನೀವು ಪಡೆಯಬಹುದು.

2. ಹೂಡಿಕೆ ಮಾಡಲು, ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ. ಇಂದು ಹೂಡಿಕೆಯ ಮುಖ್ಯ ಮೂರು ಅಭ್ಯಾಸಗಳ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದು, ತನ್ಮೂಲಕ ನೀವು ಉತ್ತಮ ಆದಾಯವನ್ನು ಸಂಪಾದಿಸಬಹುದು.

3. ನಿಯಮಿತ ಹೂಡಿಕೆ- ನಿಮ್ಮ ಗಳಿಕೆಯಲ್ಲಿ ಉಳಿತಾಯ ಮಾಡುವುದು ಮತ್ತು ಹೂಡಿಕೆ ಮಾಡುವುದು ಒಂದು ಉತ್ತಮ ಅಭ್ಯಾಸವಾಗಿದೆ. ಆದರೆ ನಿಮ್ಮ ಈ ಹೂಡಿಕೆಯು ನಿಯಮಿತವಾಗಿರಬೇಕು, ಆಗ ಮಾತ್ರ ಹೂಡಿಕೆಯ ಮೂಲಕ ಉತ್ತಮ ಲಾಭವನ್ನು ಗಳಿಸಬಹುದು. ನಿಯಮಿತ ಹೂಡಿಕೆಗಾಗಿ, ನೀವು ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ಚೆನ್ನಾಗಿ ಅಧ್ಯಯನ ನಡೆಸಿ. ಇಂತಹ ಪರಿಸ್ಥಿತಿಯಲ್ಲಿ, ಯಾವುದೇ ಗಡುವು ಮೀರುವ ಮುನ್ನ ಹೂಡಿಕೆ ಮಾಡಿ. ಹೂಡಿಕೆಗಾಗಿ ಸ್ವಯಂಚಾಲಿತವಾಗಿ ವರ್ಗಾಯಿಸಲು ನಿಮ್ಮ ಖಾತೆಯಿಂದ ಪೂರ್ವ-ನಿರ್ಧರಿತ ಮೊತ್ತವನ್ನು ಹೊಂದಿಸಿ. ಈ ರೀತಿ ನೀವು ನಿಯಮಿತ ಹೂಡಿಕೆಯನ್ನು ಮಾಡಬಹುದು.

ಇದನ್ನೂ ಓದಿ-Diwali 2023 ಹಬ್ಬಕ್ಕೆ ನೀವೂ 'ನೋ ಕಾಸ್ಟ್ ಇಎಂಐ' ಮೇಲೆ ಸರಕು ಖರೀದಿಸುತ್ತೀರಾ? ಬ್ಯಾಂಕ್ ಗಳ ಈ ಆಟ ನಿಮಗೆ ತಿಳಿದಿರಲಿ!

4. ಹೂಡಿಕೆಯನ್ನು ವೈವಿಧ್ಯಗೊಳಿಸಿ- ಯಾವಾಗಲೂ ಹೂಡಿಕೆಗಾಗಿ ಪೋರ್ಟ್ಫೋಲಿಯೊ ಸಿದ್ಧಪಡಿಸಿ. ನಿಮ್ಮ ಪೋರ್ಟ್‌ಫೋಲಿಯೊವನ್ನು ನೀವು ಸಮರ್ಪಕವಾಗಿ ವೈವಿಧ್ಯಗೊಳಿಸಬೇಕು. ಹೂಡಿಕೆಯು ನಿಮ್ಮ ಹಣಕಾಸಿನ ಗುರಿಗಳಿಗೆ ಅನುಗುಣವಾಗಿರಬೇಕು. ದೀರ್ಘಾವಧಿಯ ಗುರಿಗಳಿಗಾಗಿ, ನೀವು ಈಕ್ವಿಟಿ ಫಂಡ್ ಗಳಲ್ಲಿ ಹೆಚ್ಚು ಹೂಡಿಕೆ ಮಾಡಬಹುದು. ಅಲ್ಪಾವಧಿಯ ಗುರಿಗಳಿಗಾಗಿ, ನಿಮ್ಮ ಬಂಡವಾಳವನ್ನು ಸುರಕ್ಷಿತಗೊಳಿಸುವ ಸ್ಥಿರ ಆದಾಯದ ಸ್ವತ್ತುಗಳಲ್ಲಿ ಹೂಡಿಕೆ ಮಾಡಬಹುದು. ನಿಮ್ಮ ಪ್ರೊಫೈಲ್‌ಗೆ ಸೂಕ್ತವಾದ ಪೋರ್ಟ್‌ಫೋಲಿಯೊವನ್ನು ರಚಿಸಲು ವೃತ್ತಿಪರರ ಸಹಾಯವನ್ನು ಸಹ ನೀವು ಪಡೆದುಕೊಳ್ಳಬಹುದು.

ಇದನ್ನೂ ಓದಿ-Diwali-Dhanteras ದಿನ ಚಿನ್ನ ಖರೀದಿಸಬೇಕೆ? ಅಸಲಿ-ನಕಲಿ ಚಿನ್ನವನ್ನು ಈ ರೀತಿ ಪತ್ತೆಹಚ್ಚಿ!

5. ಭಾವನೆಗಳ ಮೇಲೆ ಹಿಡಿತವಿರಲಿ- ಮನುಷ್ಯ ಭಾವನಾತ್ಮಕ  ಜೀವಿ ಮತ್ತು ಭಾವನೆಗಳ ಕಾರಣದಿಂದ ಆತ ಅನೇಕ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೇ. ಆದರೂ ಕೂಡ ಭಾವನೆಗಳು ನಮ್ಮನ್ನು ದೊಡ್ಡ ಹೂಡಿಕೆದಾರರನ್ನಾಗಿ ಸಿದ್ಧಪಡಿಸುವುದಿಲ್ಲ. ಮಾರುಕಟ್ಟೆಯ ಏರಿಳಿತಗಳು ಭಯ ಮತ್ತು ದುರಾಶೆಯನ್ನು ಉಂಟುಮಾಡಬಹುದು, ಇಂತಹ ಪರಿಸ್ಥಿತಿಯಲ್ಲಿ ಜನರು ಮಾರುಕಟ್ಟೆಯ ಏರಿಳಿತವನ್ನು ನೋಡಿದ ನಂತರವೂ ಭಾವನೆಗಳಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ನಷ್ಟವನ್ನೂ ಅನುಭವಿಸುತ್ತಾರೆ. ಹೀಗಿರುವಾಗ ನೀವು ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡು ‘ಕಡಿಮೆ ಖರೀದಿಸಿ, ಹೆಚ್ಚು ಮಾರಾಟ ಮಾಡಿ’ ಎಂಬ ತತ್ವದಡಿ ಕೆಲಸ ಮಾಡಬೇಕು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
investment ideas wanted to make investment apart from business keep remember these tips
News Source: 
Home Title: 

ಬಿಸ್ನೆಸ್ ಅಲ್ಲದೆ ಇತರ ಕಡೆ ಹೂಡಿಕೆ ಮಾಡಿ ಲಾಭ ಗಳಿಸಬೇಕೆ? ಈ ಸಂಗತಿಗಳನ್ನು ನೆನಪಿನಲ್ಲಿಡಿ!

ಬಿಸ್ನೆಸ್ ಅಲ್ಲದೆ ಇತರ ಕಡೆ ಹೂಡಿಕೆ ಮಾಡಿ ಲಾಭ ಗಳಿಸಬೇಕೆ? ಈ ಸಂಗತಿಗಳನ್ನು ನೆನಪಿನಲ್ಲಿಡಿ!
Yes
Is Blog?: 
No
Tags: 
Facebook Instant Article: 
Yes
Highlights: 

ಮನುಷ್ಯ ಭಾವನಾತ್ಮಕ  ಜೀವಿ ಮತ್ತು ಭಾವನೆಗಳ ಕಾರಣದಿಂದ ಆತ ಅನೇಕ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೇ.

ಆದರೂ ಕೂಡ ಭಾವನೆಗಳು ನಮ್ಮನ್ನು ದೊಡ್ಡ ಹೂಡಿಕೆದಾರರನ್ನಾಗಿ ಸಿದ್ಧಪಡಿಸುವುದಿಲ್ಲ.

ಮಾರುಕಟ್ಟೆಯ ಏರಿಳಿತಗಳು ಭಯ ಮತ್ತು ದುರಾಶೆಯನ್ನು ಉಂಟುಮಾಡಬಹುದು,

Mobile Title: 
ಬಿಸ್ನೆಸ್ ಅಲ್ಲದೆ ಇತರ ಕಡೆ ಹೂಡಿಕೆ ಮಾಡಿ ಲಾಭ ಗಳಿಸಬೇಕೆ? ಈ ಸಂಗತಿಗಳನ್ನು ನೆನಪಿನಲ್ಲಿಡಿ!
Nitin Tabib
Publish Later: 
No
Publish At: 
Friday, October 27, 2023 - 22:27
Created By: 
Nitin Tabib
Updated By: 
Nitin Tabib
Published By: 
Nitin Tabib
Request Count: 
1
Is Breaking News: 
No
Word Count: 
324