ನಟಿ ಅಮಲಾ ಪೌಲ್ ಎರಡನೇ ಮದುವೆ ಆಗ್ತಿರೋ ಈ ವ್ಯಕ್ತಿ ಯಾರು ಗೊತ್ತಾ?

Amala Paul Second Husband : ನಟಿ ಅಮಲಾ ಪೌಲ್ ತಮ್ಮ ಬಹುಕಾಲದ ಗೆಳೆಯ ಜಗತ್ ದೇಸಾಯಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

Written by - Chetana Devarmani | Last Updated : Oct 31, 2023, 11:38 AM IST
  • ಎರಡನೇ ಮದುವೆಗೆ ರೆಡಿಯಾದ ಅಮಲಾ ಪೌಲ್
  • ನಟಿ ಅಮಲಾ ಪೌಲ್ ಬಹುಕಾಲದ ಗೆಳೆಯ
  • ಅಮಲಾ ಪೌಲ್ ಎರಡನೆ ಪತಿ ಯಾರು?
ನಟಿ ಅಮಲಾ ಪೌಲ್ ಎರಡನೇ ಮದುವೆ ಆಗ್ತಿರೋ ಈ ವ್ಯಕ್ತಿ ಯಾರು ಗೊತ್ತಾ?   title=
ಅಮಲಾ ಪೌಲ್

Amala Paul Second Marriage : ನಟಿ ಅಮಲಾ ಪೌಲ್ ತಮ್ಮ ಬಹುಕಾಲದ ಗೆಳೆಯ ಜಗತ್ ದೇಸಾಯಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಮಲಾ ಪೌಲ್‌ ಅವರು ಜಗತ್ ದೇಸಾಯಿ ಎಂಬುವವರ ಜೊತೆ ಎರಡನೇ ಮದುವೆ ಆಗಲಿದ್ದಾರೆ. ಅಮಲಾ ಅವರ ಹುಟ್ಟುಹಬ್ಬದ ಪಾರ್ಟಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜಗತ್‌ ದೇಸಾಯಿ ಜೊತೆ ಸಖತ್‌ ರೋಮ್ಯಾಂಟಿಕ್‌ ಫೋಟೋಗಳನ್ನು ಅಮಲಾ ಪೌಲ್‌ ಶೇರ್ ಮಾಡಿದ್ದಾರೆ. 

 

 
 
 
 

 
 
 
 
 
 
 
 
 
 
 

A post shared by Amala Paul (@amalapaul)

 

ಈ ನಡುವೆ ಅಭಿಮಾನಿಗಳು ಅಮಲಾ ಮತ್ತು ಜಗತ್‌ ಅವರ ಲವ್ ಸ್ಟೋರಿ ತಿಳಿಯಲು ಕಾತುರದಿಂದ ಎದುರು ನೋಡುತ್ತಿದ್ದಾರೆ. ಗೋವಾದ ವಿಲ್ಲಾದಲ್ಲಿ ಸೇಲ್ಸ್‌ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುವ ಜಗತ್ ಖ್ಯಾತ ನಟಿಯ ಹೃದಯವನ್ನು ಗೆದ್ದಿದ್ದಾರೆ. ತಮ್ಮ ಜೀವನದಲ್ಲಿ ಈ ಹೊಸ ಅಧ್ಯಾಯವನ್ನು ಆರಂಭಿಸಲು ಇಬ್ಬರೂ ಕಾತುರರಾಗಿದ್ದಾರೆ. ಅದ್ಧೂರಿ ವಿವಾಹ ಸಮಾರಂಭದಲ್ಲಿ ಅಮಲಾ ಮತ್ತು ಜಗತ್ ಸಪ್ತಪದಿ ತುಳಿಯಬಹುದು. 

 

 
 
 
 

 
 
 
 
 
 
 
 
 
 
 

A post shared by Jagat Desai (@j_desaii)

 

ಇದನ್ನೂ ಓದಿ: ಮೇಜರ್ ಸರ್ಜರಿ ಮುಗಿಸಿರುವ ಪ್ರಭಾಸ್ ಯೂರೋಪ್ ನಿಂದ ಬರೋದು ಯಾವಾಗ? 

2014 ರಲ್ಲಿ ಅಮಲಾ ಪೌಲ್ ಅವರು ನಿರ್ದೇಶಕ ವಿಜಯ್ ಅವರನ್ನು ವಿವಾಹವಾಗಿದ್ದರು.  ಇಬ್ಬರ ಮಧ್ಯೆ 'ದೈವ ತಿರುಮಗಳು' ಸೆಟ್‌ನಲ್ಲಿ ಪ್ರೀತಿ ಹುಟ್ಟಿತ್ತು. ಆದರೆ ನಂತರ 2016 ರಲ್ಲಿ ವಿಚ್ಛೇದನ ಪಡೆದರು. ನಂತರ 2020 ರಲ್ಲಿ ಅಮಲಾ ಪೌಲ್ ಮುಂಬೈ ಮೂಲದ ಗಾಯಕ ಭಾವನೀಂದರ್ ಸಿಂಗ್ ಅವರೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿತ್ತು. ಅವರು ಲೈವ್-ಇನ್‌ನಲ್ಲಿದ್ದರು ಎಂಬ ವದಂತಿಗಳು ಹರಡಿದವು. ಆದರೆ ಈ ಸಂಬಂಧ ಸಹ ಮುರಿದುಬಿತ್ತು ಎನ್ನಲಾಗಿದೆ. 

ಅದೇ ವರ್ಷ ಮಾರ್ಚ್‌ನಲ್ಲಿ ಸಾಂಪ್ರದಾಯಿಕ ಮದುವೆಯ ಉಡುಪಿನಲ್ಲಿರುವ ಅವರ ಚಿತ್ರಗಳು ಅಂತರ್ಜಾಲದಲ್ಲಿ ಹರಿದಾಡಿದ್ದವು. ಇದರ ಬೆನ್ನಲ್ಲೇ ಅಮಲಾ ಪೌಲ್ ಅವರು ಭಾವನೀಂದರ್ ಸಿಂಗ್ ಅವರೊಂದಿಗೆ ಎರಡನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ಗಾಳಿಸುದ್ದಿ ಶುರುವಾಗಿತ್ತು. ಆದರೆ ಸುಂದರಿ ಇದನ್ನು ಅಲ್ಲಗಳೆದಿದ್ದು, ಇದು ಕೇವಲ ಫೋಟೋಶೂಟ್ ಎಂದು ಸ್ಪಷ್ಟನೆ ನೀಡಿದ್ದರು. 

ಇದನ್ನೂ ಓದಿ:  ವರ್ತೂರ್ ಸಂತೋಷ್ ಬಂದ್ ಕೂಡ್ಲೇ ಗೆಟೌಟ್ ಅಂತಿರೋ ಬಿಗ್ ಮಂದಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News