ನಾನು ʼGayʼ..! ಬಿಟೌನ್‌ ಕಿಂಗ್‌ ಶಾರುಖ್‌ ಖಾನ್‌ ಹೀಗೆ ಹೇಳಿಕೊಂಡಿದ್ಯಾಕೆ..?

Happy Birthday Shah Rukh Khan : ರೂಮರ್ಸ್‌ಗಳಿಂದ ದೂರವಿರುವ ಏಕೈಕ ನಟ ಅಂದ್ರೆ  ಶಾರುಖ್‌. ಸಧ್ಯ ಖಾನ್‌ ಇಂಟ್ರಸ್ಟಿಂಗ್‌ ವಿಚಾರವೊಂದನ್ನು ಹೇಳಿಕೊಂಡಿದ್ದಾರೆ. ಈ ಕುರಿತು ಇಂಟ್ರಸ್ಟಿಂಗ್‌ ಸುದ್ದಿ ಇಲ್ಲಿದೆ ನೋಡಿ.

Written by - Krishna N K | Last Updated : Nov 2, 2023, 06:26 PM IST
  • ನಟ ಶಾರುಖ್‌ ಖಾನ್‌ ಪಠಾಣ್‌, ಜವಾನ್‌ ಸಿನಿಮಾದ ಸಕಸ್ಸ್‌ನಲ್ಲಿ ಬ್ಯುಸಿ.
  • ಬಿಟೌನ್‌ ಕಿಂಗ್‌ ಖಾನ್‌ಗೆ ಇಂದು 58ನೇ ಹುಟ್ಟು ಹಬ್ಬದ ಸಂಭ್ರಮ.
  • ಬಾದ್‌ ಶಾ ಕುರಿತು ಇಂಟ್ರಸ್ಟಿಂಗ್‌ ವಿಚಾರವೊಂದು ವೈರಲ್‌ ಆಗಿದೆ.
ನಾನು ʼGayʼ..! ಬಿಟೌನ್‌ ಕಿಂಗ್‌ ಶಾರುಖ್‌ ಖಾನ್‌ ಹೀಗೆ ಹೇಳಿಕೊಂಡಿದ್ಯಾಕೆ..? title=

Shah Rukh Khan : ಪಠಾಣ್‌, ಜವಾನ್‌ ಸಿನಿಮಾದ ಸಕಸ್ಸ್‌ನಲ್ಲಿ ಬ್ಯುಸಿಯಾಗಿರುವ ಬಾಲಿವುಡ್‌ ಕಿಂಗ್‌ ನಟ ಶಾರುಖ್‌ ಖಾನ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಬಾದ್‌ ಶಾ ಅಭಿಮಾನಿಗಳು ನಟನ ಬರ್ತ್‌ ಡೇಯನ್ನು ಬಹಳ ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಇದೇ ವೇಳೆ ಶಾರುಖ್‌ ಈ ಹಿಂದೆ ಹೇಳಿದ್ದ ಮಾತೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಹೌದು.. ಬಾಲಿವುಡ್‌ನಲ್ಲಿ ನಟ-ನಟಿಯರ ಅಫೇರ್​ಗಳು, ಅವುಗಳ ಬಗೆಗಿನ ಚರ್ಚೆ ಸೋಷಿಯಲ್‌ ಮೀಡಿಯಾದಲ್ಲಿ ದಿನವೂ ನಡೆಯುತ್ತಲೇ ಇರುತ್ತದೆ. ಇತ್ತೀಚಿಗಂತೂ ಕೆಲವು ನಟ ನಟಿಯರ ಪ್ರೀತಿ -ಪ್ರೇಮದ ವಿಚಾರವಾಗಿ ಇಲ್ಲ ಸಲ್ಲದ ಕಥೆಗಳು ದಿನಕ್ಕೊಂದರಂತೆ ಹುಟ್ಟುಕೊಳ್ಳುತ್ತಿವೆ. ಆದ್ರೆ, ಇಂತಹ ರೂಮರ್ಸ್‌ಗಳಿಂದ ದೂರವಿರುವ ಏಕೈಕ ನಟ ಅಂದ್ರೆ ಶಾರುಖ್‌, ಸಧ್ಯ ಖಾನ್‌ ಇಂಟ್ರಸ್ಟಿಂಗ್‌ ವಿಚಾರವೊಂದನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : ವಿದೇಶದಲ್ಲಿ ಸವಾಲುಗಳನ್ನು ಎದುರಿಸುತ್ತಿರುವ ʼಅಮರ ಮಧುರ ಪ್ರೇಮʼ: ಅಮೇರಿಕಾದಲ್ಲಿ ನಾಗತಿಹಳ್ಲಿ ಚಂದ್ರಶೇಖರ್‌

ಹಳೆಯ ಸಂದರ್ಶನವೊಂದರಲ್ಲಿ ಶಾರುಖ್ ಖಾನ್​ಗೆ ನಿಮ್ಮ ಹೆಸರೇಕೆ ಸಹನಟಿಯರೊಂದಿಗೆ ಕೇಳಿ ಬರುವುದಿಲ್ಲ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಆಗ ಕಿಂಗ್‌ ಖಾನ್‌ ತಮಾಷೆಯಾಗಿ ಪ್ರತಿಕ್ರಿಯೆ ನೀಡಿ, ‘ನಾನು ಗೇ ಇರಬೇಕು.. ಎಂದು ಹಾಸ್ಯ ಮಾಡಿದರು. ಅಲ್ಲದೆ, ಕೆಲವರು ನಾನು ಸಲಿಂಗಿ ಅಂತ ತಿಳಿದುಕೊಂಡಿದ್ದಾರೆ.. ಅಂತ ಹೇಳಿಕೊಂಡು ನಕ್ಕಿದ್ದರು. ನಾನು ನನ್ನ ಪತ್ನಿಯೊಡನೆ ಬಹಳ ಖುಷಿಯಿಂದ ಇದ್ದೀನಿ, ನಟಿಯರು ಇರುವುದು ನಟಿಸುವುದಕ್ಕೆ ವಿನಃ ಪ್ರೀತಿ ಮಾಡೋಕೆ ಅಲ್ಲ.. ಎಂದು ಹೇಳಿಕೊಂಡಿದ್ದರು. ಸಧ್ಯ ಈ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಸಿನಿಮಾ ವಿಚಾರವಾಗಿ ಹೇಳುವುದಾದರೆ, ಶಾರುಖ್‌ ನಟನೆಯ ಪಠಾಣ್‌ ಮತ್ತು ಜವಾನ್‌ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡು ದಾಖಲೆ ನಿರ್ಮಿಸಿವೆ. 1000 ಕೋಟಿ ಗೂ. ಹೆಚ್ಚು ಹಣ ಬಾಚಿಕೊಂಡಿವೆ. ಸಧ್ಯ ಕಿಂಗ್‌ ಖಾನ್‌ ನಟನೆಯ ಡಂಕಿ ಸಿನಿಮಾ ಡಿಸೆಂಬರ್‌ 22 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಅಂದೇ ಪ್ರಭಾಸ್‌ ನಟನೆಯ ಸಲಾರ್‌ ಸಹ ತೆರೆಕಾಣಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News