ಹೊಸ ವರ್ಷದಲ್ಲಿ ಸರ್ಕಾರಿ ನೌಕರರ ಖಾತೆಗೆ ಬಾಕಿ ಡಿಎ ! 18 ತಿಂಗಳ ಅರಿಯರ್ಸ್ ಬಗ್ಗೆ ಸಿಹಿ ಸುದ್ದಿ

ಹೊಸ ವರ್ಷದ ವೇಳೆಗೆ ಸರ್ಕಾರ ಬಾಕಿ ಉಳಿದಿರುವ ಡಿಎ ಹಣ ವರ್ಗಾವಣೆ ಮಾಡಲಿದೆ ಎನ್ನಲಾಗುತ್ತಿದೆ.  ಶೀಘ್ರದಲ್ಲೇ  ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಈ ಸಿಹಿ ಸುದ್ದಿ ನೀಡಲಿದೆ. 

Written by - Ranjitha R K | Last Updated : Nov 7, 2023, 12:58 PM IST
  • ಉದ್ಯೋಗಿಗಳು, ಪಿಂಚಣಿದಾರರಿಗೆ ಶೀಘ್ರದಲ್ಲೇ ಮತ್ತೊಂದು ಸಿಹಿ ಸುದ್ದಿ
  • ಫಿಟ್‌ಮೆಂಟ್ ಫ್ಯಾಕ್ಟರ್ ಬಗ್ಗೆ ಕೂಡಾ ಒಳ್ಳೆಯ ಸುದ್ದಿ
  • ಹಲವು ತಿಂಗಳ ಡಿಎ ಬಾಕಿಗೆ ಶೀಘ್ರ ಮುಕ್ತಿ
ಹೊಸ ವರ್ಷದಲ್ಲಿ ಸರ್ಕಾರಿ ನೌಕರರ ಖಾತೆಗೆ ಬಾಕಿ ಡಿಎ ! 18 ತಿಂಗಳ ಅರಿಯರ್ಸ್ ಬಗ್ಗೆ ಸಿಹಿ ಸುದ್ದಿ    title=

ಬೆಂಗಳೂರು : ಕೇಂದ್ರ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಶೀಘ್ರದಲ್ಲೇ ಮತ್ತೊಂದು ಸಿಹಿ ಸುದ್ದಿ ಸಿಗಲಿದೆ. ನೌಕರರು ಮತ್ತು ಪಿಂಚಣಿದಾರರಿಗೆ ಖಜಾನೆಯನ್ನೇ ನೀಡಲು ಸರ್ಕಾರ ಮುಂದಾಗಿದೆ. ಹೌದು, ಹೊಸ ವರ್ಷದ ವೇಳೆಗೆ ಸರ್ಕಾರ ಬಾಕಿ ಉಳಿದಿರುವ ಡಿಎ ಹಣ ವರ್ಗಾವಣೆ ಮಾಡಲಿದೆ ಎನ್ನಲಾಗುತ್ತಿದೆ. ಹೀಗಾದಲ್ಲಿ ಸರ್ಕಾರಿ ನೌಕರರ ಪಾಲಿಗೆ ಅದು ಬಹು ದೊಡ್ಡ ಉಡುಗೊರೆಯಾಗಿರಲಿದೆ.  

ಇದರ ಹೊರತಾಗಿ, ಫಿಟ್‌ಮೆಂಟ್ ಫ್ಯಾಕ್ಟರ್ ಬಗ್ಗೆ ಕೂಡಾ ಒಳ್ಳೆಯ ಸುದ್ದಿ ಇದೆ.  ಫಿಟ್‌ಮೆಂಟ್ ಫ್ಯಾಕ್ಟರ್ ಹೆಚ್ಚಳದ ಬಗ್ಗೆಯೂ ಸುದ್ದಿ ಕೇಳಿ ಬರುತ್ತಿದೆ. ಸರ್ಕಾರ ಅಧಿಕೃತವಾಗಿ ಈ ನಿರ್ಧಾರ ತೆಗೆದುಕೊಂಡಿಲ್ಲ ಎನ್ನಲಾಗಿದೆ. ಆದರೆ  ಮಾಧ್ಯಮ ವರದಿಗಳ ಪ್ರಕಾರ, ಶೀಘ್ರದಲ್ಲೇ  ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಈ ಸಿಹಿ ಸುದ್ದಿ ನೀಡಲಿದೆ. 

ಇದನ್ನೂ ಓದಿ : EPF ಕಡಿತಕ್ಕೆ ವೇತನ ಮಿತಿ ಹೆಚ್ಚಳ ! 75 ಲಕ್ಷ ಉದ್ಯೋಗಿಗಳಿಗೆ ಭರ್ಜರಿ ಲಾಭ

ಹಲವು ತಿಂಗಳ ಡಿಎ ಬಾಕಿಗೆ ಶೀಘ್ರ ಮುಕ್ತಿ : 
ಕರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ, ಮೋದಿ ಸರ್ಕಾರವು ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ 18 ತಿಂಗಳ ಡಿಎಯನ್ನು ವರ್ಗಾಯಿಸಿಲ್ಲ. ಅಂದಿನಿಂದ ನೌಕರರು ಮತ್ತು ಪಿಂಚಣಿದಾರರು ನಿರಂತರವಾಗಿ ಬಾಕಿ  ಡಿಎಗೆ ಬೇಡಿಕೆ ಇಡುತ್ತಲೇ ಬಂದಿದ್ದಾರೆ.

ಈಗ ಹೊಸ ವರ್ಷದ ವೇಳೆಗೆ ಸರ್ಕಾರ ಈ ಬಾಕಿ ಹಣವನ್ನು ಬಿಡುಗಡೆ ಮಾಡಬಹುದು ಎನ್ನಲಾಗುತ್ತಿದೆ. ಮುಂಬರುವ ವರ್ಷದ ಆರಂಭದಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದರಲ್ಲಿ ಕಾರ್ಮಿಕ ವರ್ಗವನ್ನು ಓಲೈಸಲು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. 

ಹೀಗಾದರೆ ನೌಕರರ ಖಾತೆಗೆ ಭಾರಿ ಮೊತ್ತ ಜಮಾ ಆಗುವುದು ಖಚಿತ. ನೌಕರರ ಸಂಘಟನೆಗಳು ಡಿಎ ಬಾಕಿ ಕುರಿತು ಸರಕಾರಕ್ಕೆ ಹಲವು ಬಾರಿ ಮನವಿ ಪತ್ರ ಸಲ್ಲಿಸಿವೆ. ಆದರೆ ಸರ್ಕಾರ ಈ ಬಗ್ಗೆ ಅಧಿಕೃತವಾಗಿ ಇನ್ನೂ ಏನನ್ನೂ ಹೇಳಿಲ್ಲ.
 
ಇದನ್ನೂ ಓದಿ : ಈ ಸರ್ಕಾರಿ ನೌಕರರಿಗೆ ಬಂಬಾಟ್ ಸುದ್ದಿ ಪ್ರಕಟಿಸಿದ ರಾಜ್ಯ ಸರ್ಕಾರ! ದೀಪಾವಳಿ ಬೋನಸ್ ಕೂಡ ಸಿಗಲಿದೆ!

ಫಿಟ್ಮೆಂಟ್  ಫ್ಯಾಕ್ಟರ್ ನಲ್ಲಿ ಹೆಚ್ಚಳ : 
ಕೇಂದ್ರ ಸರ್ಕಾರ ಫಿಟ್‌ಮೆಂಟ್ ಅಂಶ ಹೆಚ್ಚಿಸಿ ನೌಕರರ ಓಲೈಕೆಗೆ ಮುಂದಾಗಿದೆ. ಈ ಬಗ್ಗೆ ನೌಕರರು ಬಹಳ ದಿನಗಳಿಂದ ಬೇಡಿಕೆ ಇಟ್ಟಿದ್ದು, ಇದೀಗ ಮಂಜೂರಾತಿ ದೊರೆಯುವುದು ಖಚಿತವಾಗಿದೆ. ಫಿಟ್‌ಮೆಂಟ್ ಅಂಶವನ್ನು 2.60x ನಿಂದ 3.0x ಗೆ ಹೆಚ್ಚಿಸಬಹುದು. ಫಿಟ್‌ಮೆಂಟ್ ಅಂಶದಲಿ ಹೆಚ್ಚಳವಾದರೆ, ಮೂಲ ವೇತನದಲ್ಲಿ ಭಾರಿ ಏರಿಕೆಯಾಗಲಿದೆ. ಚುನಾವಣೆಗೂ ಮುನ್ನ ಸರ್ಕಾರ ಈ ಘೋಷಣೆ ಮಾಡಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News