ʼಧನ ತ್ರಯೋದಶಿʼ ದಿನ ನೀವು ಈ ವಸ್ತುಗಳನ್ನು ನೋಡಿದ್ರೆ ಶ್ರೀಮಂತರಾಗುವಿರಿ..!

Deepavali 2023: ಧನ್‌ತೇರಸ್‌ ದಿನವನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯ ದಿನವಾಗಿ ಪರಿಗಣಿಸಲಾಗಿದೆ. ಈ ದಿನದಂದು, ಜನರು ಲಕ್ಷ್ಮಿ ದೇವಿಯ ವಿಶೇಷ ಅನುಗ್ರಹವನ್ನು ಪಡೆಯಲು ಅನೇಕ ಹೊಸ ವಸ್ತುಗಳನ್ನು ಖರೀದಿಸುತ್ತಾರೆ, ಈ ದಿನದಂದು ಕೆಲವು ವಸ್ತುಗಳನ್ನು ನೋಡಿದರೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

Written by - Krishna N K | Last Updated : Nov 10, 2023, 04:12 PM IST
  • ಧನ್‌ತೇರಸ್‌ ದಿನವನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯ ದಿನ.
  • ಹೊಸ ವಸ್ತುಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
  • ಲಕ್ಷ್ಮಿ ದೇವಿ ಜೊತೆಗೆ ಭಗವಂತ ಕುಬೇರನ ಕೃಪೆ ಇರುತ್ತದೆ ನಂಬಲಾಗುತ್ತದೆ.
 ʼಧನ ತ್ರಯೋದಶಿʼ ದಿನ ನೀವು ಈ ವಸ್ತುಗಳನ್ನು ನೋಡಿದ್ರೆ ಶ್ರೀಮಂತರಾಗುವಿರಿ..! title=

Dhanteras 2023 : ಧನತೇರಸ್ ದಿನದಂದು ಭಗವಾನ್ ಕುಬೇರನನ್ನು ಪೂಜಿಸುವುದು ಮತ್ತು ಹೊಸ ವಸ್ತುಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನ ಒಬ್ಬ ವ್ಯಕ್ತಿಯು ಈ ಕೆಳಗೆ ನೀಡಿರುವ ವಸ್ತುಗಳನ್ನು ನೋಡಿದರೆ ದೀಪಾವಳಿಗೂ ಮೊದಲು ಅವರ ಮನೆಗೆ ತಾಯಿ ಲಕ್ಷ್ಮಿ ದೇವಿ ಆಗಮಿಸಿ ನೆಲೆಸುತ್ತಾಳೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ ನೋಡಿ..

ಧನ್‌ತೇರಸ್‌ ದಿನವನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯ ದಿನವಾಗಿ ಪರಿಗಣಿಸಲಾಗಿದೆ. ಈ ದಿನದಂದು, ಜನರು ಲಕ್ಷ್ಮಿ ದೇವಿಯ ವಿಶೇಷ ಅನುಗ್ರಹವನ್ನು ಪಡೆಯಲು ಅನೇಕ ಹೊಸ ವಸ್ತುಗಳನ್ನು ಖರೀದಿಸುತ್ತಾರೆ, ಇದರಿಂದ ಮನೆಯಲ್ಲಿ ಸಮೃದ್ಧಿ ಮತ್ತು ಲಕ್ಷ್ಮಿ ದೇವಿ ಜೊತೆಗೆ ಭಗವಂತ ಕುಬೇರನ ಕೃಪೆ ಇರುತ್ತದೆ ನಂಬಲಾಗುತ್ತದೆ.

ಇದನ್ನೂ ಓದಿ:ಡಾರ್ಕ್ ಸರ್ಕಲ್ ಸಮಸ್ಯೆಗೆ ಕೆಲವೇ ದಿನಗಳಲ್ಲಿ ಪರಿಹಾರ ನೀಡುತ್ತೇ ಈ ಒಂದು ಸಸ್ಯ

ಕಾರ್ತಿಕ ಮಾಸದ ಕೃಷ್ಣ ಪಕ್ಷದ ಮೂರನೇ ದಿನದಂದು ಆಚರಿಸಲಾಗುವ ಧನ್‌ತೇರಸ್‌ ಅನ್ನು ಈ ವರ್ಷ ನವೆಂಬರ್ 10 ರಂದು ಅಂದರೆ ಇಂದು ಆಚರಿಸಲಾಗುತ್ತಿದೆ. ಜ್ಯೋತಿಷ್ಯದಲ್ಲಿ, ಈ ದಿನದಂದು ಹೊಸ ವಸ್ತುಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರ ಹೊರತಾಗಿ ಈ ದಿನದಂದು ಕೆಲವು ವಸ್ತುಗಳನ್ನು ನೋಡಿದರೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಬನ್ನಿ ಆ ವಸ್ತುಗಳ ಯಾವುವು ಅಂತ ತಿಳಿಯೋಣ..

ಹಲ್ಲಿ ದರ್ಶನ : ಶಾಸ್ತ್ರಗಳ ಪ್ರಕಾರ, ಈ ದಿನದಂದು ಆಕಸ್ಮಿಕವಾಗಿ ಹಲ್ಲಿಯನ್ನು ನೋಡಿದ್ರೆ ಮಂಗಳಕರ ಎಂದು ಭಾವಿಸಲಾಗುತ್ತದೆ. ಹಲ್ಲಿ ತಾಯಿ ಲಕ್ಷ್ಮಿಯ ಸಂಕೇತವಾಗಿದೆ. ಹಾಗಾಗಿ ಧನ್‌ತೇರೆಸ್‌ ದಿನದಂದು ಇದನ್ನು ನೋಡಿದಾಗ ಲಕ್ಷ್ಮಿ ದೇವಿಯು ಮನೆಗೆ ಬಂದಂತೆ.

ಇದನ್ನೂ ಓದಿ:ಕೂದಲುದುರುವುದನ್ನು ತಡೆಗಟ್ಟಿ, ದುಪ್ಪಟ್ಟು ವೇಗದಲ್ಲಿ ಬೆಳೆಯುವಂತೆ ಮಾಡಲು ಪಾಲಕ್ ಅನ್ನು ಈ ರೀತಿಯಾಗಿ ಬಳಸಿ!

ಗೂಬೆಗಳ ದರ್ಶನಗಳು : ಧನ್‌ತೇರಸ್‌ ದಿನದಂದು ಗೂಬೆ ಕಾಣಿಸಿಕೊಂಡರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಗೂಬೆಯು ಲಕ್ಷ್ಮಿ ದೇವಿಯ ವಾಹನ. ಗೂಬೆಯನ್ನು ನೋಡುವುದು ಲಕ್ಷ್ಮಿ ದೇವಿಯ ಆಗಮನದ ಸಂದೇಶವನ್ನು ನೀಡುತ್ತದೆ.

ಬಿಳಿ ಬೆಕ್ಕಿನ ದರ್ಶನಗಳು : ಧನ್‌ತೇರೆಸ್‌ ದಿನದಂದು ಬಿಳಿ ಬೆಕ್ಕು ಕಾಣಿಸಿಕೊಂಡರೆ, ವ್ಯಕ್ತಿಯ ಎಲ್ಲಾ ಬಾಕಿ ಕೆಲಸಗಳು ಪೂರ್ಣಗೊಳ್ಳಲಿವೆ ಎಂದರ್ಥ.

ಇದನ್ನೂ ಓದಿ: ಸೀತಾಫಲ ಹಣ್ಣಿನಷ್ಟೇ ಆರೋಗ್ಯಕರ ಅದರ ಎಲೆಗಳು, ಏನೆಲ್ಲಾ ಪ್ರಯೋಜನಗಳಿವೆ ಗೊತ್ತೇ!

ರಸ್ತೆಯ ಮೇಲೆ ಬಿದ್ದಿರುವ ನಾಣ್ಯ : ರಸ್ತೆಯ ಮೇಲೆ ಬಿದ್ದಿರುವ ನಾಣ್ಯಗಳನ್ನು ನೋಡಿದರೆ, ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ನಾಣ್ಯಗಳು ಲಕ್ಷ್ಮಿ ದೇವಿಯನ್ನು ಸಂಕೇತಿಸುತ್ತವೆ. ಒಬ್ಬ ವ್ಯಕ್ತಿಯು ಮುಂದಿನ ದಿನಗಳಲ್ಲಿ ಸಂಪತ್ತನ್ನು ಪಡೆಯಬಹುದು ಎಂಬುವುದು ಇದರ ಅರ್ಥ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News