Mimicry Task In Bigg Boss: ಬಿಗ್ಬಾಸ್ ಸೀಸನ್ 10 ಎಂಟು ವಾರಗಳನ್ನು ಮುಗಿಸಿ ಈಗ ಒಂಬತ್ತನೇ ವಾರಕ್ಕೆ ಕಾಲಿಟ್ಟಿದ್ದು, ಬಿಗ್ಬಾಸ್ ಮನರಂಜನೆ ನೀಡುವಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಕೆಲವರಿಗೆ ಸ್ಪರ್ಧೆಗಳು ಜಗಳವಾಡುವುದು ಇಷ್ಟವಾದರೆ ಇನ್ನೂ ಕೆಲವೊಬ್ಬರಿಗೆ ಯಾವ ರೀತಿ ಗೇಮ್ಗಳಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಾರೆ ಎಂಬುದನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಮನೆಯಲ್ಲಿ ಉಳಿದುಕೊಂಡಿರುವ ಸ್ನೇಹಿತ್ ಹಾಗೂ ಮೈಕಲ್ ನಾವು ನಮ್ಮ ಆಟವನ್ನು ಆಡುವ ಮೂಲಕ ವೀಕ್ಷಕರ ಮನಗೆಲ್ಲುತ್ತೇವೆ ಎಂದು ಸುದೀಪ್ಗೆ ಮಾತು ಕೊಟ್ಟಿದ್ದಾರೆ.
ಬಿಗ್ಬಾಸ್ ಸ್ಪರ್ಧಿಗಳಿಗೆ ವಾರದ ಮೊದಲ ದಿನವೇ ಹೊಸ ಟಾಸ್ಕ್ ನೀಡಲಾಗಿದ್ದು, ಸ್ಪರ್ಧಿಗಳು, ಬಿಗ್ಬಾಸ್ ಹೇಳಿದ ಚಟುವಟಿಕೆಯನ್ನ ಮಾಡಬೇಕಾಗಿದೆ ಕೆಲವರಿಗೆ ನಾಯಿಯಂತೆ ಅಳುವ ಟಾಸ್ಕ್ ಕೊಟ್ಟರೇ, ಇನ್ನು ಕೆಲವರಿಗೆ ಹಾವಿನಂತೆ ಹಾಗೂ ಕೋತಿ ಯಾವ ರೀತಿ ಜಿಗಿಯುತ್ತದೆ ಹೀಗೆ ತರಹೇವಾರಿ ಟಾಸ್ಕ್ಗಳನ್ನು ನೀಡಲಾಗಿದೆ. ಅದರಲ್ಲಿ ಪ್ರಮುಖವಾಗಿ ಅವಿನಾಶ್ ಶೆಟ್ಟಿ ಹಾಗೂ ವಿನಯ್, ಕಾರ್ತಿಕ್, ಸ್ನೇಹಿತ್ ಹಾಗೂ ಸಂಗೀತಾ, ತುಕಾಲಿ ಹಾಗೂ ವರ್ತೂರು ಸಂತೋಷ್ ಟಾಸ್ಕ್ನಲ್ಲಿ ಭಾಗಿಯಾಗಿದ್ದಾರೆ. ಅವಿನಾಶ್ ಶೆಟ್ಟಿ ಹಾವಿನ ರೀತಿಯಲ್ಲಿ ವರ್ತಿಸಿದ್ದಾರೆ. ನಂತರ ವಿನಯ್ ಹಾಗೂ ಸ್ನೇಹಿತ್ ಕಾರ್ತಿಕ್ ತಮಗೆ ನೀಡಿದ ಟಾಸ್ಕ್ ಮಾಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ನಲ್ಲಿ ಹಾರ್ಮೋನ್ ಇಂಜೆಕ್ಷನ್.. ಸತ್ಯ ಬಿಚ್ಚಿಟ್ಟ ನೀತು ವನಜಾಕ್ಷಿ
ಇನ್ನು ಸಂಗೀತಾಗೆ ಬಿಗ್ಬಾಸ್ ಅಳುವ ನಾಯಿಯ ಮರಿಯಂತೆ ನೀವು ಆಕ್ಟ್ ಮಾಡಿ ತೋರಿಸಬೇಕು ಎಂದಿದಕ್ಕೆ, ಸಂಗೀತಾ ಅಳುವ ನಾಯಿಯ ರೀತಿ ಮಾಡಿದ್ದಾರೆ. ಆದರೆ ಟಾಸ್ಕ್ ವೇಳೆ ಈ ಮಾತಿಗೆ ಯಾವುದೇ ಜಗಳಗಳಾಗಲಿ ಏನು ನಡೆದಿಲ್ಲ. ಟಾಸ್ಕ್ ಮುಗಿದಾದ ಮೇಲೆ ಈ ವಿಷಯ ಸಂಗೀತಾರನ್ನು ಕೆರಳಿಸಲಿದ್ದು ತುಕಾಲಿ ಸಂತೋಷ್ ಮೇಲೆ ಮುಗಿ ಬೀಳುತ್ತಾರಾ? ನೋಡಬೇಕು. ಯಾಕೆಂದರೆ ಮೊದಲಿನಿಂದಲೂ ತುಕಾಲಿ ಸಂತೋಷ್ ಹಾಗೂ ಸಂಗೀತಾ ನಡುವೆ ಮನಸ್ತಾಪ ಇದ್ದು, ಈ ಮಾತು ಕೂಡ ಇಬ್ಬರಲ್ಲಿ ಜಗಳವನ್ನ ತರಬಹುದು.
ಇದಾದ ಬಳಿಕ ಬಿಗ್ಬಾಸ್, ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ಗೆ ಹೊಸದೊಂದು ಟಾಸ್ಕ್ ನೀಡಿದ್ದು, ಸಂಗೀತಾ ಹಾಗೂ ಕಾರ್ತಿಕ್ ರೀತಿ ಇಬ್ಬರೂ ವರ್ತಿಸಬೇಕು ಎಂದಿದ್ದಾರೆ. ಇದರಲ್ಲಿ ತುಕಾಲಿ ಸಂತೋಷ್, ಸಂಗೀತಾ ರೀತಿ ಅನುಕರಣೆ ಮಾಡಿದರೇ, ಇತ್ತ ಕಾರ್ತಿಕ್ ರೀತಿ ವರ್ತೂರು ಸಂತೋಷ್ ನಟಿಸಿ, ಬಿಗ್ಬಾಸ್ ಮನೆಯಲ್ಲಿ ಕಾರ್ತಿಕ್ ಹಾಗೂ ಸಂಗೀತಾ ಒಡನಾಟ ಹೇಗಿರುತ್ತದೆ ಎಂದು ಮಾಡಿ ತೋರಿಸಿದ್ದಾರೆ. ವರ್ತೂರು ಸಂತೋಷ್ ನಾನು ವಿನಯ್ನನ್ನು ಬಿಡೋದಿಲ್ಲ, ಅವರನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಟಾಸ್ಕ್ ಆಡುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ಅವರನ್ನು ಯಾಕೆ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಿಯಾ? ನನ್ನನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಆಟವಾಡು ಎಂದಿದ್ದಾರೆ. ನಂತರ ವರ್ತೂರು ನೀವು ವಿನಯ್ ಟೀಮ್ಗೆ ಸೇರಿದಾಗ ಏನು ಮಾಡಿದ್ರಿ? ಎಂದಾಗ ನಾನು ಎಲ್ಲಿಗೆ ಹೋಗುತ್ತೇನೆ ಅಲ್ಲಿ ಎಲ್ಲರಿಗೂ ಗುಂಡಿ ತೋಡಿ ಬರುತ್ತೇನೆ ಎಂದು ಸಂಗೀತಾ ರೀತಿ ಮಾತನಾಡಿದ್ದಾರೆ. ಈ ಎಲ್ಲಾ ಮಾತುಗಳು ಕೂಡ ಮನೆಯಲ್ಲಿ ಅಶಾಂತಿಗೆ ಕಾರಣವಾಗಬಹುದು, ತಮಾಷೆ ಹೋಗಿ ಅಮಾಸೆ ಆಗುತ್ತದಾ? ಎಂಬುದನ್ನ ನೋಡಬೇಕಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.