BBK 10: ವಿನಯ್‌ಗೆ ಕಾರ್ತಿಕ್‌ನಿಂದ ಚಪ್ಪಲಿ ಹೊಡೆತಾ: ಕೋಪದಲ್ಲಿ ನಮ್ರತಾ ಹೇಳಿದ್ದಾದರೂ ಏನು?

Bigg Boss Kannada 10: ಮಿಗ್‌ಬಾಸ್‌ ಮನೆಯೊಳಗೆ ಬಿಗ್‌ಬಾಸ್‌ ಲೋಕ ಟಾಸ್ಕ್‌ನಲ್ಲಿ ವಿನಯ್‌ಗೆ ಕಾರ್ತಿಕ್‌ನಿಂದ ಚಪ್ಪಲಿ ಏಟು ಬಿದ್ದಿದೆ. ಹಾಗಾದ್ರೆ ನಿಜವಾಗಲೂ ವಿನಯ್‌ಗೆ ಚಪ್ಲಿ ಹೊಡೆತ್ತಾ ಬಿತ್ತಾ, ಕ್ಯಾಪ್ಟನ್‌ ಏನು ಮಾಡಿದ್ದಾರೆ? ಇದೆಲ್ಲರದ ಕಂಪ್ಲೀಟ್‌ ಸೋರಿ ಇಲ್ಲಿದೆ.  

Written by - Zee Kannada News Desk | Last Updated : Dec 8, 2023, 10:29 AM IST
  • ಬಿಗ್‌ಬಾಸ್‌ ಲೋಕದ ಆಟದ ನಡುವೆಯೇ ವಿನಯ್ ಹಾಗೂ ಕಾರ್ತಿಕ್ ನಡುವೆ ಜೋರು ಜಗಳ ನಡೆಯುತ್ತಿರುವಾಗ, ವಿನಯ್‌ಗೆ ಕಾರ್ತಿಕ್ ಚಪ್ಪಲಿಯಲ್ಲಿ ಎಸೆದರಂತೆ.
  • ಚಪ್ಪಲಿಯ ವಿಚಾರಕ್ಕೆ ಜಗಳವಾಗುತ್ತಿದ್ದಂತೆ ಸಂಗೀತಾ ತಮ್ಮ ತಂಡದವರೊಂದಿಗೆ ಮನವಿ ಮಾಡಿದ್ದಾರೆ.
  • ಉಸ್ತುವಾರಿ ವಹಿಸಿದ್ದ ಸ್ನೇಹಿತ್, ಕಾರ್ತಿಕ್ ಬಳಿ ಬಂದು ಚಪ್ಪಲಿಯ ವಿಚಾರದ ಬಗ್ಗೆ ಕ್ಲಾರಿಟಿ ತೆಗೆದುಕೊಂಡಿದ್ದಾರೆ.
BBK 10: ವಿನಯ್‌ಗೆ ಕಾರ್ತಿಕ್‌ನಿಂದ ಚಪ್ಪಲಿ ಹೊಡೆತಾ: ಕೋಪದಲ್ಲಿ ನಮ್ರತಾ ಹೇಳಿದ್ದಾದರೂ ಏನು? title=

Karthik Vs Vinay: ಬಿಗ್‌ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಅವಾಚ್ಯ ಪದಗಳ ಬಳಕೆ ಜಾಸ್ತಿಯಾಗುತ್ತಿದ್ದು, ಚಪ್ಪಲಿಯಲ್ಲಿ ಹೊಡೆದರು, ಬೀಪ್ ಬೈಗುಳಗಳು ಹೇಳಿದರು ಅಂತೆಲ್ಲಾ ಏನೇನೋ ಆರೋಪಗಳು ಕೇಳಿ ಬರುತ್ತಿವೆ. ಆಟ ಆಡಿ ಅಂತ ಬಿಗ್‌ಬಾಸ್ ಹೇಳಿದರೆ, ಬರೀ ಜಗಳಗಳನ್ನೇ ಆಡುತ್ತಿದ್ದಾರೆ. ಈ ವಾರ ಬೇರೆ ರೀತಿಯದ್ದೇ ಟಾಸ್ಕ್‌ಗಳನ್ನು ನೀಡಲು ಬಿಗ್‌ಬಾಸ್ ನಿರ್ಧಾರ ಮಾಡಿದ್ದು ಅಂತ ಅನಿಸುವುದರ ಜೊತೆಗೆ ಅದಕ್ಕಾಗಿಯೇ ಈ ವಾರ ಕ್ಯಾಪ್ಟನ್ ಆಗುವಂತಹ ಸದಸ್ಯನಿಗೆ ವಿಶೇಷ ಅಧಿಕಾರ ನೀಡಿದ್ದರು. ಆ ಅಧಿಕಾರದ ಜೊತೆಗೆ ಟಾಸ್ಕ್ ಆಡುವಾಗ ಯಾವುದೇ ರೀತಿಯಾಗಿ ದೇಹಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳವ ವಿಷಯದಲ್ಲಿ ಮನೆಯ ಕ್ಯಾಪ್ಟನ್‌ ಸ್ನೇಹಿತ್ ಕೂಡ ಸೋತಿದ್ದಾರೆ. 

ಬಿಗ್‌ಬಾಸ್‌ ಲೋಕದ ಆಟದ ನಡುವೆಯೇ ವಿನಯ್ ಹಾಗೂ ಕಾರ್ತಿಕ್ ನಡುವೆ ಜೋರು ಜಗಳ ನಡೆಯುತ್ತಿರುವಾಗ, ವಿನಯ್‌ಗೆ ಕಾರ್ತಿಕ್ ಚಪ್ಪಲಿಯಲ್ಲಿ ಎಸೆದರಂತೆ. "ಚಪ್ಪಲಿಯಲ್ಲಿ ಹೊಡೆದರೆ ನಾನು ಸುಮ್ಮನೆ ಇರಬೇಕಾ..? ಹೋಯ್ ಚಪ್ಪಲಿಯಲ್ಲಿ ಹೇಗೆ ಹೊಡೆದೆ. ಇಂಥ ಕಿತ್ತೋದ್ ನನ್ನ ಮಕ್ಕಳಿಂದ ಚಪ್ಪಲಿಯಲ್ಲಿ ಹೊಡೆಸಿಕೊಳ್ಳಬೇಕಾ? ಬಿಗ್‌ಬಾಸ್ ನಾನು ಇಲ್ಲಿ ಇರುವುದಕ್ಕೆ ಇಷ್ಟವಿಲ್ಲ. ರೀ ಬೌಂಡ್‌ನಲ್ಲಿ ಹೊಡೆಯಲಾ ನಿನಗೆ. ನನಗೆ ಇದಕ್ಕೆ ಆನ್ಸರ್ ಬೇಕು. ಇವತ್ತು ಚಪ್ಪಲಿಯಲ್ಲಿ ಹೊಡೆದ, ಇದಕ್ಕೆ ಉತ್ತರ ಬೇಕು. ಏನು ಅಂದುಕೊಂಡಿದ್ದಾನೆ ಅವನು. ಬಾರೋ ಇಲ್ಲಿ. ನಿನ್ನ ಬಿಡ್ತೀನಿ ಅಂದುಕೊಂಡಿದ್ದೀಯಾ" ಎಂದು ವಿನಯ್ ಜಗಳವಾಡಿದ್ದಾರೆ. 

ಇದನ್ನೂ ಓದಿ: BBK10: ಸ್ನೇಹಿತ್‌ ಉಸ್ತುವಾರಿ ವಿರುದ್ಧ ಉರಿ ಉರಿ!

ಚಪ್ಪಲಿಯ ವಿಚಾರಕ್ಕೆ ಜಗಳವಾಗುತ್ತಿದ್ದಂತೆ ಸಂಗೀತಾ ತಮ್ಮ ತಂಡದವರೊಂದಿಗೆ ಮನವಿ ಮಾಡಿ, "ಗಂಧರ್ವರೆಲ್ಲಾ ಜೊತೆಯಾಗಿ ಇರೋಣಾ. ಪ್ಲೀಸ್ ನಾನು ನಿಮ್ಮ ಬಳಿ ಮನವಿ ಮಾಡಿಕೊಳ್ಳುತ್ತೀನಿ. ನಾವೆಲ್ಲಾ ಗೆಲ್ಲಬೇಕು. ನಾನು ಹೇಳಿದ ಮಾತನ್ನು ಕೇಳಿ. ಕೆಟ್ಟದಾಗಿ ಮಾಡುತ್ತಿರುವುದು ಅವರ ಕ್ಯಾರೆಕ್ಟರ್. ಹೊರಗಡೆ ಹೋಗಬೇಡಿ. ಒಳಗಡೆ ಒಂದು ಕೆಲಸ ತೆಗೆದುಕೊಳ್ಳಿ. ಇಲ್ಲಿ ಪ್ರವೋಕ್ ಆಗಬೇಕು. ನಾವೂ ಅದನ್ನೆ ಮಾಡಬೇಕು" ಎಂದಿದ್ದಾರೆ. 

ಉಸ್ತುವಾರಿ ವಹಿಸಿದ್ದ ಸ್ನೇಹಿತ್, ಕಾರ್ತಿಕ್ ಬಳಿ ಬಂದು ಚಪ್ಪಲಿಯ ವಿಚಾರದ ಬಗ್ಗೆ ಕ್ಲಾರಿಟಿ ತೆಗೆದುಕೊಂಡು, ಗಂಧರ್ವರಾಗಿ ನೀವೂ ಈ ರೀತಿ ನಡೆದುಕೊಳ್ಳಬಾರದು ಎಂದಿದ್ದಾರೆ. ಆಗ ಕಾರ್ತಿಕ್, "ಚಪ್ಪಲಿಯನ್ನು ನಾನು ಅವನಿಗೆ ಹೊಡೆಯಲಿಲ್ಲ. ಕೆಳಗೆ ಎತ್ತಿ ಎಸೆದ ಬೌನ್ಸ್ ಆಗಿದೆ. ಅದು ನತಾದೃಷ್ಟವಶಾತ್ ಅವನಿಗೆ ಬಿದ್ದಿದೆ. ನಾನು ಏನಪ್ಪ ಮಾಡಲಿ" ಎಂದಾಗ, ಬಳಿಕ ರೊಚ್ಚಿಗೆದ್ದ ವಿನಯ್, ತುಳಿತೀನಿ ಮಗ ಎದೆ ಮೇಲೆ ಕಾಲಿಟ್ಟೇ ತುಳಿಯುವುದು. ಅಮ್ಮ ಅಂದಲ್ಲ, ಹೇಳು ಇವಾಗ ಎಂದು ಅವಾಜ್ ಹಾಕಿದ್ದಾರೆ. 

ಇದನ್ನೂ ಓದಿ: BBK 10: ಬಿಗ್‌ಬಾಸ್‌ ಗೇಮ್‌ನಲ್ಲಿ ಹೆಚ್ಚಿತು ಫಿಸಿಕಲ್ ಅಟ್ಯಾಕ್: ಆಟವನ್ನೇ ನಿಲ್ಲಿಸಿದ ಬಿಗ್‌ಬಾಸ್‌!

ಸಂಗೀತಾ ವಿಚಾರಕ್ಕೆ ಮೊದಲು ಕೋಪಗೊಂಡ ನಮ್ರತಾ, "ಅವಳನ್ನ ಕಳುಹಿಸಿ. ಅವನು ಯಾವನು ಗುರು ಚಪ್ಪಲಿಯಲ್ಲಿ ಹೊಡೆಯುವುದಕ್ಕೆ. ಆ ರಾಣಿ ಹೇಳಿರುವುದಂತೆ. ನಾನು ಹೇಳಿದಂತೆ ಕೇಳಿ ಅಂತ. ಇದು ಗೇಮ್ ಸ್ಟ್ರಾಟರ್ಜಿ. ಪ್ಲೀಸ್ ಬ್ರೋ ಹೀಗೆಲ್ಲಾ ಕೋಪ ಮಾಡಿಕೊಳ್ಳಬೇಡಿ" ಎಂದು ಸಮಾಧಾನ ಮಾಡಿದ್ದಾರೆ. ಬಳಿಕ ಕಾರ್ತಿಕ್ ಜೊತೆಗೆ ಜಗಳಕ್ಕೆ ಬಿದ್ದ ನಮ್ರತಾ, "ನಾನು ಲೈವ್‌ನಲ್ಲಿ ನೋಡಿದ್ದೀನಿ. ನಿಮ್ಮ ಗ್ರೂಪ್ ಅಂತ ಹೇಳುವಾಗ ಅಮ್ಮ ಅಂದಿರುವುದನ್ನು ನೋಡಿದ್ದೀನಿ. ನನ್ನ ಇಮಿಟೇಟ್ ಮಾಡಿದರೆ ಸರಿ ಇರಲ್ಲ. ಮುಚ್ಕೊಂಡು ಹೋಗುತ್ತಾ ಇರು. ಎರಡು ವೀಕ್‌ನಲ್ಲಿ ಹೋಗುತ್ತೀಯಲ್ಲ ಅಂತಾನೆ. ನೀನು ಅವನೇ ಅಸಹ್ಯ" ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News