BBK10: ಸ್ನೇಹಿತ್‌ ಉಸ್ತುವಾರಿ ವಿರುದ್ಧ ಉರಿ ಉರಿ!

Bigg Boss Kannada 10: ನಿನ್ನೆಯಿಂದ ಬಿಗ್‌ಬಾಸ್‌ ಮನೆಯಲ್ಲಿ ಗಂಧರ್ವರು ಮತ್ತು ರಕ್ಕಸರ ಮೇಲಾಟಗಳು ನಡೆಯುತ್ತಿವೆ. ರಕ್ಕಸರ ಗುಂಪಿನ ಕಾರ್ತಿಕ್, ಸಂಗೀತಾ, ತನಿಷಾ, ಅವಿನಾಶ್‌ ಎಲ್ಲರೂ ಬಗೆಬಗೆಯ ಚೇಷ್ಟೆಗಳಿಂದ ಕೆಣಕುತ್ತಿದ್ದರೆ ಗಂಧರ್ವರ ಗುಂಪಿನ ವಿನಯ್, ನಮ್ರತಾ, ತುಕಾಲಿ, ಮೈಕಲ್, ಪವಿ ಎಲ್ಲರೂ ಸಿಟ್ಟಿಗೆಳದೇ ಇರಲು ಹರಸಾಹಸ ಪಡುತ್ತಿದ್ದಾರೆ. 

Written by - Savita M B | Last Updated : Dec 6, 2023, 03:42 PM IST
  • ಗಂಧರ್ವರ ಗುಂಪಿನ ಇಬ್ಬರು ಸದಸ್ಯರು ಕುರ್ಚಿಯಲ್ಲಿ ಕೂತಿದ್ದಾರೆ
  • ರಕ್ಕಸರ ಗುಂಪಿನ ಸದಸ್ಯರು ಗಂಧರ್ವರ ಮೇಲೆ ನೀರು ಸೋಕಲಾರಂಭಿಸಿದರು
  • ತುಕಾಲಿ ಸೀಟಿನಿಂದ ಎದ್ದರು ಎಂದು ರಕ್ಕಸರ ಗುಂಪಿನ ಸದಸ್ಯರು ಕೂಗಲಾರಂಭಿಸಿದರು.
BBK10: ಸ್ನೇಹಿತ್‌ ಉಸ್ತುವಾರಿ ವಿರುದ್ಧ ಉರಿ ಉರಿ! title=

Bigg Boss Kannada: ಗಂಧರ್ವರ ಗುಂಪಿನ ಇಬ್ಬರು ಸದಸ್ಯರು ಕುರ್ಚಿಯಲ್ಲಿ ಕೂತಿದ್ದಾರೆ. ಅವರನ್ನು ಹೇಗಾದರೂ ಕುರ್ಚಿಯಿಂದ ಮೇಲೆಳುವಂತೆ ಮಾಡುವ ಸವಾಲನ್ನು ರಕ್ಕಸರ ಗುಂಪಿಗೆ ನೀಡಲಾಗಿತ್ತು. ರಕ್ಕಸರ ಗುಂಪಿನ ಸದಸ್ಯರು ಗಂಧರ್ವರ ಮೇಲೆ ನೀರು ಸೋಕಲಾರಂಭಿಸಿದರು. ಈ ಹಂತದಲ್ಲಿ ತುಕಾಲಿ ಸೀಟಿನಿಂದ ಎದ್ದರು ಎಂದು ರಕ್ಕಸರ ಗುಂಪಿನ ಸದಸ್ಯರು ಕೂಗಲಾರಂಭಿಸಿದರು. 

ಆದರೆ ಎದ್ದಿಲ್ಲ ಬರೀ ಸರಿದಿದ್ದಾರೆ ಎಂಬುದು ಗಂಧರ್ವರ ಗುಂಪಿನ ನಮ್ರತಾ ವಾದ. ನಮ್ರತಾ ವಾದಕ್ಕೆ ಅನುಗುಣವಾಗಿಯೇ ಉಸ್ತುವಾರಿ ಸ್ನೇಹಿತ್‌ ತಮ್ಮ ನಿರ್ಧಾರವನ್ನು ತಿಳಿಸಿದಾಗ ರಕ್ಕಸರ ಗುಂಪಿನ ಸದಸ್ಯರು ಅಕ್ಷರಶಃ ರಕ್ಕಸರಾಗಿ ಬದಲಾಗಿದ್ದಾರೆ.

ಇದನ್ನೂ ಓದಿ-ʼಅನಿಮಲ್‌ʼ ಸಿನಿಮಾದ ನಟ-ನಟಿಯರ ಸಂಭಾವನೆ ಎಷ್ಟು ಗೊತ್ತೆ..? ಸಂಪೂರ್ಣ ವಿವರ ಇಲ್ಲಿದೆ

ತನಿಷಾ, ‘ನಮ್ರತಾ ಹೇಳಿದ ಮೇಲೆ ಉಸ್ತುವಾರಿಯ ನಿರ್ಧಾರ ಬದಲಾಗುತ್ತದೆ’ ಎಂದು ಹೇಳಿದ್ದರೆ, ನಮ್ರತಾ, ‘ಹೌದು. ಯಾಕಂದ್ರೆ ನಮ್ರತಾ ಇಂಪಾರ್ಟೆಂಟ್ ಇದ್ದಾಳೆ’ ಎಂದು ಇನ್ನಷ್ಟು ಕೆಣಕಿದ್ದಾರೆ. ತನಿಷಾ ಮತ್ತು ನಮ್ರತಾ ನಡುವಿನ ಜಗಳ ಜಟಾಪಟಿಯ ಹಂತಕ್ಕೂ ಹೋಗಿದೆ. 

ಕಾರ್ತಿಕ್, ‘ನ್ಯಾಯವಾಗಿ ಉಸ್ತುವಾರಿ ಮಾಡಲಿಕ್ಕೆ ಬರದಿದ್ದರೆ ಬಿಟ್ಟು ಹೋಗ್ತಿರ್ಬೇಕು’ ಎಂದು ಗುಡುಗಿದ್ದಾರೆ. ಎರಡೂ ತಂಡವನ್ನು ಸಮನಾಗಿ ಕಾಣಬೇಕಿದ್ದ ಉಸ್ತುವಾರಿ ಸ್ನೇಹಿತ್ ಒಂದು ಕಡೆ ವಾಲಿಕೊಂಡರಾ? ಅಥವಾ ಅವರು ತೆಗೆದುಕೊಂಡ ನಿರ್ಧಾರ ನ್ಯಾಯಯುತವಾಗಿಯೇ ಇತ್ತಾ? 

ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.

ಇದನ್ನೂ ಓದಿ-ʼಅನಿಮಲ್‌ʼ ಸಿನಿಮಾದ ನಟ-ನಟಿಯರ ಸಂಭಾವನೆ ಎಷ್ಟು ಗೊತ್ತೆ..? ಸಂಪೂರ್ಣ ವಿವರ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News